ಹುಡುಗಿ ಗ್ರಾಮದ ಈ ರೈತ ಯಾವುದೇ ಕೃಷಿ ಪದವಿ ಪಡೆದಿಲ್ಲ, ಆದರೂ ಕೃಷಿ ಆತನ ಕೈಹಿಡಿದಿದೆ!

ಒಂದೇ ಬೆಳೆ ನಂಬಿಕೊಂಡು ಬಿತ್ತನೆ ಮಾಡದೆ ವಿವಿಧ ಬೆಳೆಯನ್ನ ಇವರು ಬೆಳೆಯುತ್ತಿದ್ದಾರೆ. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕೂಲಿ ಆಳುಗಳ ಜೊತೆಗೆ ತಾವೂ ಕೂಡಾ ಒಬ್ಬ ಆಳಾಗಿ ದುಡಿಯುವುದರ ಮೂಲಕ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸುವುರದಲ್ಲಿ ಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಹುಡುಗಿ ಗ್ರಾಮದ ಈ ರೈತ ಯಾವುದೇ ಕೃಷಿ ಪದವಿ ಪಡೆದಿಲ್ಲ, ಆದರೂ ಕೃಷಿ ಆತನ ಕೈಹಿಡಿದಿದೆ!
ಹುಡುಗಿ ಗ್ರಾಮದ ಈ ರೈತ ಯಾವುದೇ ಕೃಷಿ ಪದವಿ ಪಡೆದಿಲ್ಲ, ಆದರೂ ಕೃಷಿ ಆತನ ಕೈಹಿಡಿದಿದೆ!
Follow us
ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on:Mar 12, 2024 | 12:16 PM

ಆ ರೈತ ಕೃಷಿಯಲ್ಲಿ ಯಾವುದೇ ಪದವಿಯನ್ನ ಪಡೆದಿಲ್ಲ. ಆದರೆ ಮಿಶ್ರ ಬೇಸಾಯ ಪದ್ದತಿ (Mixed Farming) ಆ ರೈತನನ್ನ ಕೈ ಹಿಡಿದಿದ್ದು ಆದಾಯ ವೃದ್ಧಿಸಿದೆ. ಸಮಗ್ರ ಬೇಸಾಯದಿಂದ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾನೆ. ಕೃಷಿಯಲ್ಲಿ (Agriculture) ಹೊಸ ಹೊಸ ಪ್ರಯೋಗಗಳನ್ನ ಮಾಡುವುದರ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡದ್ದಾನೆ. ಕಲ್ಲುಬಂಡೆಗಳಿಂದ ಆವೃತವಾಗಿದ್ದ ಬರಡು ಭೂಮಿಯನ್ನ ಸಮತಟ್ಟು ಮಾಡಿ ಕೃಷಿಯಲ್ಲಿ ಚಮತ್ಕಾರ ಮಾಡುತ್ತಿದ್ದಾನೆ ಆತ. ಮಾವು, ಸಪೋಟ, ಪೇರಲ, ನುಗ್ಗೆಕಾಯಿ, ಹಲಸು, ಬೆಳೆಯ‌ ಜೊತೆಗೆ ತರಹೇವಾರಿ ತರಕಾರಿಗಳನ್ನು ಬೆಳೆಸುವುದರ ಮೂಲಕ ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವ ಅಪ್ಪಟ ರೈತ ಆತ (Success Story). ಕಡಿಮೆ ನೀರಿನಲ್ಲಿ ಬಂಜರು ಭೂಮಿಯಲ್ಲಿ ಕೃಷಿ ಮಾಡುವುದರ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾನೆ ಆ ರೈತ.

ಹೌದು ಬೀದರ್ ಜಿಲ್ಲೆ ಅಂದರೆ ನಮಗೆ ನೆನಪಿಗೆ ಬರೋದು ಬರ..ಬರ.. ಬರ…! ಪ್ರತಿ ವರ್ಷ ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ರೈತ ತೊಂದರೆ ಅನುಭವಿಸೋದು ಜಿಲ್ಲೆಯಲ್ಲಿ ಮಾಮೂಲಿ. ಆದರೇ ಇಂತಹ ಹತ್ತಾರು ಸಮಸ್ಯೆಗಳ ನಡುವೆಯೂ ಇಲ್ಲೊಬ್ಬ ರೈತ ಮಿಶ್ರ ಬೇಸಾಯ ಪದ್ದತಿಯಲ್ಲಿ ಬೆಳೆ ಬೆಳೆಯುವುದರ ಮೂಲಕ ಅನಾವೃಷ್ಠಿ-ಅತಿವೃಷ್ಠಿಗೆ ಸಡ್ಡು ಹೊಡೆದು ನಿಂತಿದ್ದಾನೆ. ತಿಂಗಳಿಗೆ ಒಬ್ಬ ಸರಕಾರಿ ನೌಕರ ಪಡೆಯುವ ಸಂಬಳಕ್ಕಿಂತ ಹೆಚ್ಚಿಗೆ ಗಳಿಸುತ್ತಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ (Hudugi Village, Humnabad) ರೈತ ಕರಬಸಪ್ಪಾ ಧೂಮನಸೂರೆ ಬರಡು ಭೂಮಿಯಲ್ಲಿ ಕಡಿಮೆ ನೀರಿನಲ್ಲಿ ಸಮಗ್ರ ಕೃಷಿ ಮಾಡುವುದರ ಮೂಲಕ ಕೃಷಿಯಲ್ಲಿ ಯಶಸ್ವಿಯಾಗಿದ್ದಾನೆ.

ಇನ್ನು ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಬರಗಾಲದಲ್ಲಿ ನಿರಂತರ ಆದಾಯ ಗಳಿಸಿ ಜಿಲ್ಲೆಯ ರೈತರ ಗಮನ ಸೆಳೆದಿದ್ದಾರೆ. ಸಮಗ್ರ ಬೇಸಾಯದ ಮೂಲಕ ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಆದಾಯ ಪಡೆಯುತ್ತಿರುವ ಕರಿಬಸಪ್ಪಾ ಓದಿದ್ದು ದ್ವಿತಿಯ ಪಿಯುಸಿ ವರೆಗೆ ಮಾತ್ರ ಆಗಾಧ ಸಾಧನೆಯನ್ನ ಮಾಡುತ್ತಿದ್ದಾರೆ. ತನ್ನ 8 ಎಕರೆ ಜಮೀನಿನಲ್ಲಿ ಮಾವು, ಸಪೋಟ, ಪೇರಲ, ನುಗ್ಗೆಕಾಯಿ, ಹಲಸು, ಬೆಳೆಯ‌ ಜೊತೆಗೆ ತರಹೇವಾರಿ ತರಕಾರಿಗಳನ್ನು ಬೆಳೆಸುವುದರ ಮೂಲಕ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಇದರ ಜೊತೆಗೆ ವಿವಿಧ ತರಕಾರಿ ಬೆಳೆಸುತ್ತಿದ್ದಾರೆ – ಒಂದೇ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯುತ್ತಿರುವುದುರಿಂದ ಒಂದು ಬೆಳೆ ಫಸಲು ಕೊಡುವುದನ್ನ ನಿಲ್ಲಿಸಿದ ಕೂಡಲೇ ಇನ್ನೊಂದು ಬೆಳೆ ಫಸಲು ಕೊಡಲು ಆರಂಭಿಸುವುದರಿಂದ ಪ್ರತಿ ತಿಂಗಳು ಆದಾಯ ಗಳಿಸುತ್ತಿದ್ದು ಕುಟುಂಬಸ್ಥರು ಸಂತೋಷದಿಂದ ಇದ್ದೇವೆಂದು ಹುಡುಗಿ ಗ್ರಾಮದ ರೈತ ಕರಬಸಪ್ಪ ಹೇಳುತ್ತಿದ್ದಾರೆ.

ತಂದೆಯವರ ಕಾಲದಲ್ಲಿ ಅಲ್ಪಸ್ವಲ್ಪ ಇದ್ದ ಜಮೀನಿನಲ್ಲಿ ಉದ್ದು, ಸೋಯಾ, ಹೆಸರು ಬೆಳೆಗೆ ಸೀಮಿತವಾಗಿದ್ದ ಭೂಮಿಯಲ್ಲಿ ತರಹೇವಾರಿ ಬೆಳೆ ಬೆಳೆಯಲಾಗುತ್ತಿದೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ. ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ.

ಸದ್ಯ ಈಗ ತಮ್ಮ ಎಂಟು ಎಕರೆಯಷ್ಟು ಜಮೀನಿನಲ್ಲಿ ಮಾವು, ನುಗ್ಗೆ ಸೇರಿದಂತೆ ಈಗ ಸದ್ಯ ಅವರ ಜಮೀನಿನಲ್ಲಿ ಚಪ್ಪಟೆ ಅವರೆ, ಗೋಬಿ, ತುಪ್ಪದ ಅವರೆಕಾಯಿ, ಬೆಂಡಿ, ಬದನೇ ಕಾಯಿ ಇದೆ. ದಿನ ಬಿಟ್ಟು ದಿನ ಕಟಾವಿಗೆ ಬರುವ ತರಕಾರಿ ಪ್ರತಿ ವಾರಕ್ಕೊಮ್ಮೆ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ತರುತ್ತಿದೆ. ಇದರ ಜೊತೆಗೆ ಟೊಮ್ಯಾಟೋ ಬೆಳೆ ಹಾಕಲಾಗಿದೆ, ಶುಂಠಿ ಬೆಳೆಯೂ ಕೂಡಾ ಹಾಕಲಾಗಿದೆ. ಒಂದೇ ಬೆಳೆಯನ್ನ ಬೆಳೆಸಿಕೊಂಡು ವರ್ಷಗಟ್ಟಲೇ ಕಾಯುವುದರ ಬದಲಿಗೆ ಒಂದೆ ಬೆಳೆಯ ಜೊತೆಗೆ ವಿವಿಧ ಬೆಳೆಯನ್ನ ಬೆಳೆದರೆ ಆದಾಯವೂ ಹೆಚ್ಚಾಗುತ್ತೆಂದು ಈ ರೈತರನ ನಂಬಿದ್ದಾರೆ.

ಹೀಗಾಗಿ ಒಂದೇ ಬೆಳೆಯನ್ನ ನಂಬಿಕೊಂಡು ಬಿತ್ತನೆ ಮಾಡದೆ ಒಂದೆ ಜಮೀನಿನಿನಲ್ಲಿ ವಿವಿಧ ಬೆಳೆಯನ್ನ ಇವರು ಬೆಳೆಯುತ್ತಿದ್ದಾರೆ. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮುಂದೆ ಹನಿ ನೀರಾವರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ.

ಇದನ್ನೂ ಓದಿ: ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಬೀದರಿನ ಪುರಾತನ ಶಿವ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾದ ಶಾಸಕ, ಪುರಾತತ್ವ ಇಲಾಖೆ

ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮುಂತಾದ ಕೃಷಿ ಉಪಕರಣ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ. ಕೂಲಿ ಆಳುಗಳ ಜೊತೆಗೆ ತಾವೂ ಕೂಡಾ ಒಬ್ಬ ಆಳಾಗಿ ದುಡಿಯುವುದರ ಮೂಲಕ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸುವುರದಲ್ಲಿ ಸಾಧ್ಯವಾಗಿದೆ ಎಂದು ರೈತರ ಮಹಿಳೆ ಹೇಳುತ್ತಿದ್ದಾರೆ.

ಕೃಷಿ ಎಂದರೆ ನಷ್ಟ ವೆಂದು ಕೃಷಿ ಕಾಯಕ ಬಿಟ್ಟು ಬೇರೆ ಉದ್ಯೋಗ ಮಾಡುತ್ತಿರುವ ರೈತರ ನಡುವೆ ಇವರು ಕೃಷಿಯಲ್ಲಿಯೇ ಲಕ್ಷ ಲಕ್ಷ ಆದಾಯ ಹೇಗೆ ಫಲಿಸೋದೆಂದು ತೋರಿಸಿಕೊಟ್ಟಿದ್ದಾರೆ. ಅಷ್ಟೇನು ಫಲವತ್ತಲ್ಲದ ಜಮೀನಿನಲ್ಲೇ ವೈಜ್ಞಾನಿಕವಾಗಿ ಕೃಷಿ ಮಾಡುತ್ತಿರುವುದರಿಂದ ಇವರಿಗೆ ನಷ್ಟದ ಬದಲು ಲಾಭವಾಗುತ್ತಿರುವುದು ಹೆಚ್ಚಾಗಿದೆ. ಅತಿವೃಷ್ಠಿ, ಅನಾವೃಷ್ಠಿಯ ನಡುವೆ ಆಗೊಮ್ಮೆ ಈಗೊಮ್ಮೆ ನಷ್ಟ ಅನುಭವಸಿದ್ದು ಬಿಟ್ಟರೆ ಕೃಷಿಯಿಂದ ಹೆಚ್ಚಿನ ಲಾಭವನ್ನ ಈ ರೈತ ಗಳಿಸಿದ್ದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Tue, 12 March 24

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್