ನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಅಲುಗಾಡುತ್ತೆಂಬ ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್, ಹೇಳಿದಿಷ್ಟು
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ‘ಕೈ’ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಅಲುಗಾಡುತ್ತೆಂಬ BJP ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.ನನ್ನ ವಿರುದ್ಧ ಸಂಸದ ಪ್ರತಾಪ್ ಸಿಂಹ ಯಾವಾಗ ಸ್ಪರ್ಧೆ ಮಾಡಿದ್ದಾರೆ? ಬಿಜೆಪಿ ಈ ತೀರ್ಮಾನವನ್ನು ಏಕೆ ತೆಗೆದುಕೊಂಡಿದೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಉಡುಪಿ, ಮಾರ್ಚ್.13: ನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಅಲುಗಾಡುತ್ತೆಂಬ BJP ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಆತಂಕವಿದೆ. ನನ್ನ ವಿರುದ್ಧ ಸಂಸದ ಪ್ರತಾಪ್ ಸಿಂಹ ಯಾವಾಗ ಸ್ಪರ್ಧೆ ಮಾಡಿದ್ದಾರೆ? ಬಿಜೆಪಿ ಈ ತೀರ್ಮಾನವನ್ನು ಏಕೆ ತೆಗೆದುಕೊಂಡಿದೆ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ‘ಕೈ’ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಎಲ್ಲಾ ಈ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದವರು. ಈಗ ಪಕ್ಷಕ್ಕೆ ಬಂದಿದ್ದಾರೆ, ಪಕ್ಷಕ್ಕೆ ಬಲ ಬಂದಿದೆ. ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಹೆಸರು ಹೈ ಕಮಾಂಡ್ ನಿರ್ಧಾರ ಮಾಡುತ್ತಾರೆ. ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಆತಂಕ ಇದೆ. ಪ್ರತಾಪ್ ಸಿಂಹ ನನ್ನ ವಿರುದ್ಧ ಯಾವಾಗ ಸ್ಪರ್ಧೆ ಮಾಡಿದ್ದಾರೆ? ನನ್ನ ವಿರುದ್ಧ ಪ್ರತಾಪ್ ಯಾವಾಗ ಫೈಟ್ ಮಾಡಿದ್ದಾರೆ? ಬಿಜೆಪಿ ಈ ತೀರ್ಮಾನ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ. ಸಿಎಎ ಕಾನೂನನ್ನು ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ಬಂದಾಗ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಇಷ್ಟು ದಿನ ಎಲ್ಲಿ ಹೋಗಿತ್ತು? ಬಿಜೆಪಿಗೆ ಸೋಲುತ್ತೇವೆ ಎಂಬ ಭಯ ಇದೆ. ರಾಜ್ಯದಲ್ಲಿ ಜಾರಿ ವಿಚಾರವಾಗಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸ್ತೇವೆ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ ಏನೇ ಆಗಲಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಉದ್ಭವಿಸಲ್ಲ: ಡಿಕೆ ಶಿವಕುಮಾರ್
ಇನ್ನು ಬಿಜೆಪಿ ಗ್ಯಾರೆಂಟಿ ಯೋಜನೆ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದೆ. ಫಲಾನುಭವಿಗಳಿಗೆ ಜನಕ್ಕೆ ತಿಳಿಸಲು, ಬಿಜೆಪಿ ಆರೋಪ ಸುಳ್ಳು ಎಂದು ಖಾತ್ರಿ ಮಾಡಲು ಸಮಾವೇಶ ಮಾಡುತ್ತಿದ್ದೇವೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿ ಮಾಡಿದ್ದೇವೆ. ಖಜಾನೆ ಖಾಲಿಯಾಗುತ್ತದೆ, ದಿವಾಳಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ರು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಗ್ಯಾರೆಂಟಿಗೆ 36 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಮುಂದಿನ ವರ್ಷಕ್ಕೆ 52 ಸಾವಿರ ಕೋಟಿ ಬಜೆಟಲ್ಲಿ ಇಟ್ಟಿದ್ದೇವೆ. ಪ್ರಧಾನಿಯವರೇ, ಕರ್ನಾಟಕ ಆರ್ಥಿಕ ದಿವಾಳಿಯಾಗಿಲ್ಲ. ಬೊಮ್ಮಾಯಿ, ಯಡಿಯೂರಪ್ಪ, ಅಶೋಕ್ ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ.
ಬಿಜೆಪಿ ಬಡವರ ಪರ ಇಲ್ಲ, ಸಮಾಜಿಕ ನ್ಯಾಯದ ಪರವಾಗಿ ಇಲ್ಲ. ಮೋದಿ ಮುಖ ನೋಡಿ ಓಟ್ ಹಾಕಿ ಅಂತಾರೆ. ನಾನು ನಮ್ಮೂರಲ್ಲಿ ಎರಡು ರಾಮ ಮಂದಿರ ಕಟ್ಟಿಸಿದ್ದೇನೆ. ಜೈ ಶ್ರೀರಾಮ್ ಅಲ್ಲ ಜೈ ಸೀತಾರಾಮ್ ಹೇಳಿ. ಬಿಜೆಪಿಯವರು ರಾಮನನ್ನು ಬೇರ್ಪಡಿಸಿದ್ದಾರೆ. ಸೀತೆ, ಲಕ್ಷ್ಮಣ, ಹನುಮಂತನಿಂದ ಬೇರ್ಪಡಿಸಿದ್ದಾರೆ. ಅಂಜನಾದ್ರಿಗೆ 100 ಕೋಟಿ ಕೊಟ್ಟವ ಹಿಂದು ವಿರೋಧಿ ಆಗ್ತೀನಾ? ಬಿಜೆಪಿಯವರು ಹಿಂದುತ್ವ ಬಗ್ಗೆ ನಮಗೆ ಪಾಠ ಮಾಡ್ತಾರೆ. ಮೋದಿಯ 10 ವರ್ಷ ಅಧಿಕಾರ ಆಯ್ತು.. ಸಾಕು ಅಧಿಕಾರದಿಂದ ತೆಗೆದು ಹಾಕಿ. ಬಿಜೆಪಿ ಗೋ ಬ್ಯಾಕ್ ಬಿಜೆಪಿಯನ್ನು ಗೋಬ್ಯಾಕ್ ಮಾಡಿದ್ರೆ ದೇಶ ಉಳಿಯುತ್ತದೆ. ಸಂವಿಧಾನ ಬದಲು ಮಾಡುವುದಾಗಿ ಹೆಗ್ಡೆ ಹೇಳ್ತಾರೆ. ಮನು ಸ್ಮೃತಿ ಅಸಮಾನತೆ ಪರಿಸ್ಥಿಗೆ ಹೋಗಬೇಕಾಗುತ್ತದೆ. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಸಂವಿಧಾನ ಬದಲಿಸುವುದು ಹುನ್ನಾರ ಬಿಜೆಪಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ