ಲೋಕಸಭಾ ಚುನಾವಣೆ ಫಲಿತಾಂಶ ಏನೇ ಆಗಲಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಉದ್ಭವಿಸಲ್ಲ: ಡಿಕೆ ಶಿವಕುಮಾರ್

ಲೋಕಸಭಾ ಚುನಾವಣೆ ಫಲಿತಾಂಶ ಏನೇ ಆಗಲಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಉದ್ಭವಿಸಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Mar 15, 2024 | 5:45 PM

ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಚುನಾವಣೆಗೋಸ್ಕರ ಅಥವಾ ಚುನಾವಣೆ ಗೆಲ್ಲಲು ಆಗಿರಲಿಲ್ಲ, ಬಡವರ ಬದುಕನ್ನು ಹಸನಾಗಿಸಿ, ಬೆಲೆಗಳು ಗಗನಕ್ಕೇರಿರುವ ಇವತ್ತಿನ ದಿನಗಳಲ್ಲಿ ಅವರು ನಿರಾತಂಕದಿಂದ ನೆಮ್ಮದಿಯ ಬದುಕು ನಡೆಸಲಿ ಎಂಬ ಉದ್ದೇಶದಿಂದ ಜಾರಿಗೊಳಿಸಲಾಗಿದೆ, ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು.

ಕಲಬುರಗಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕಲಬುರಗಿ ಪ್ರವಾಸದಲ್ಲಿದ್ದು ಇಂದು ಬೆಳಗ್ಗೆ ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾದರೆ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು (guarantee schemes) ನಿಂತುಹೋಗಲಿವೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಚುನಾವಣೆಗೋಸ್ಕರ ಅಥವಾ ಚುನಾವಣೆ ಗೆಲ್ಲಲು ಆಗಿರಲಿಲ್ಲ, ಬಡವರ ಬದುಕನ್ನು ಹಸನಾಗಿಸಿ, ಬೆಲೆಗಳು ಗಗನಕ್ಕೇರಿರುವ ಇವತ್ತಿನ ದಿನಗಳಲ್ಲಿ ಅವರು ನಿರಾತಂಕದಿಂದ ನೆಮ್ಮದಿಯ ಬದುಕು ನಡೆಸಲಿ ಎಂಬ ಉದ್ದೇಶದಿಂದ ಜಾರಿಗೊಳಿಸಲಾಗಿದೆ,  ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಯಾದಗಿರಿ ಭಾಗದ ಯುವಕರು ತಮ್ಮೂರಿಗೆ ವಾಪಸ್ಸು ಹೋಗಲು ಎದುರಾಗಿದ್ದ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಾಗ ಕೆಎಸ್ಆರ್ ಟಿಸಿ ಸಂಸ್ಥೆಗೆ ಒಂದು ಕೋಟಿ ರೂ. ಹಣ ಕಟ್ಟಿ ಉಚಿತ ಬಸ್ ಸೇವೆ ಪ್ರಾರಂಭಿಸಿದನ್ನು ಅವರು ಮೆಲಕು ಹಾಕಿದರು. ಕಾಂಗ್ರೆಸ್ ಗೆ ಅಧಿಕಾರ ಬಂದು ಶಕ್ತಿ ಸಿಕ್ಕರೆ ದೇಶಕ್ಕೆ ಶಕ್ತಿ ಸಿಕ್ಕಂತೆ ಎಂದು ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರೊಂದಿಗೆ ಕಲಬುರಗಿ ಭಾಗದ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ ಶರಣಪ್ರಕಾಶ್ ಪಾಟೀಲ್ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮತ್ತು ಹೆಸರುಗಳನ್ನು ಘೋಷಿಸುವ ಅಧಿಕಾರ ನನಗಿಲ್ಲ: ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Published on: Mar 13, 2024 12:56 PM