AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಜಿಲ್ಲೆಯಲ್ಲಿ ವಿನೂತನ ಪ್ರಯೋಗ: ಸಂಚಾರಿ ಚಿತಾಗಾರ ಆರಂಭ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುದೂರಿನಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ವಿನೂತನ ಪ್ರಯೋಗ: ಸಂಚಾರಿ ಚಿತಾಗಾರ ಆರಂಭ
ಸಂಚಾರಿ ಚಿತಾಗಾರ (ಸಾಂಧರ್ಬಿಕ ಚಿತ್ರ)
TV9 Web
| Updated By: ವಿವೇಕ ಬಿರಾದಾರ|

Updated on:Jan 29, 2023 | 6:46 AM

Share

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಮುದೂರಿನಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರವನ್ನು (Mobile Crematorium) ಆರಂಭಿಸಲಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ ಟೈಮ್ಸ್​ ವರದಿ ಮಾಡಿದೆ. ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗ್ರಾಮೀಣ ಭಾಗದ ಜನರ ಶವ ಸಂಸ್ಕಾರದ ಸಮಸ್ಯೆಗಳನ್ನು ಪರಿಹರಿಸಲು ಈ ನಿರ್ಧಾರವನ್ನು ಕೈಗೊಂಡಿದೆ.

ಮುದೂರು ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, ಯಾರಾದರೂ ಮೃತಪಟ್ಟರೆ ಪಾರ್ಥಿವ ಶರೀರವನ್ನು 40 ಕಿ.ಮೀ ದೂರದಲ್ಲಿರುವ ಕುಂದಾಪುರ ಸ್ಮಶಾನಕ್ಕೆ ಕೊಂಡೊಯ್ಯಬೇಕು. ಗ್ರಾಮಸ್ಥರ ಕಷ್ಟವನ್ನು ಪರಿಗಣಿಸಿ, ಸೊಸೈಟಿಯು ಕೇರಳದ ಸಂಸ್ಥೆಯೊಂದರಿಂದ 5.8 ಲಕ್ಷ ರೂ. ವೆಚ್ಚದ ಮೊಬೈಲ್ ಚಿತಾಗಾರವನ್ನು ಖರೀದಿಸಿತು.

ದೇಹನ್ನು ಸುಡಲು 10 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬಳಸಲಾಗಿದೆ. ಇದರಿಂದ ಶವ ಎರಡು ಗಂಟೆಯೊಳಗೆ ಬೂದಿಯಾಗುತ್ತದೆ. ಸಾವಿನ ಮನೆಗೆ ಈ ವಾಹನ ಹೋಗಲಿದ್ದು, ಅಂತಿಮಸಂಸ್ಕಾರಕ್ಕೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.

ಸ್ಮಶಾನದೊಳಗೆ ಪಾರ್ಥಿವ ಶರೀರವನ್ನು ಇರಿಸುವ ಮೂಲಕ ಮಾಡಬೇಕಾದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಬಹುದು. ದಹನ ಪ್ರಕ್ರಿಯೆಯಲ್ಲಿ ಹೊಗೆ ಅಥವಾ ದುರ್ವಾಸನೆ ಹೊರಹೊಮ್ಮುವುದಿಲ್ಲ. ಆರು ಅಡಿ ಉದ್ದದ ಮತ್ತು ಉಕ್ಕಿನಿಂದ ಮಾಡಲಾದ ಮೊಬೈಲ್ ಸ್ಮಶಾನವನ್ನು ಯಾರ ಮನೆ ಬಾಗಿಲಿಗೆ ಟ್ರಕ್‌ನಲ್ಲಿ ಸಾಗಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 am, Sun, 29 January 23