ತರಗತಿಯೊಳಗೆ ವಿದ್ಯಾರ್ಥಿಗೆ ಭಯೋತ್ಪಾದಕ​​ ಎಂದು ನಿಂದನೆ ಆರೋಪ: ಪ್ರೊಫೆಸರ್​ ಅಮಾನತುಗೊಳಿಸಿ ತನಿಖೆಗೆ ನಿರ್ಧರಿಸಿರುವ ಮಾಹೆ ವಿವಿ

ತರಗತಿಯೊಳಗೆ ವಿದ್ಯಾರ್ಥಿಗೆ ಟೆರರಿಸ್ಟ್​​ ಎಂದು ಪ್ರೊಫೆಸರ್ ಒಬ್ಬರೂ ನಿಂದಿಸಿರುವಂತಹ ಘಟನೆ ಉಡುಪಿಯ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ನ. 26ರಂದು ನಡೆದಿದೆ.

ತರಗತಿಯೊಳಗೆ ವಿದ್ಯಾರ್ಥಿಗೆ ಭಯೋತ್ಪಾದಕ​​ ಎಂದು ನಿಂದನೆ ಆರೋಪ: ಪ್ರೊಫೆಸರ್​ ಅಮಾನತುಗೊಳಿಸಿ ತನಿಖೆಗೆ ನಿರ್ಧರಿಸಿರುವ ಮಾಹೆ ವಿವಿ
ತರಗತಿಯೊಳಗೆ ವಿದ್ಯಾರ್ಥಿಗೆ ಟೆರರಿಸ್ಟ್​​ ಎಂದು ನಿಂದಿಸಿದ ಆರೋಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 28, 2022 | 6:01 PM

ಉಡುಪಿ: ತರಗತಿಯೊಳಗೆ ವಿದ್ಯಾರ್ಥಿಗೆ ಭಯೋತ್ಪಾದಕ (terrorist)​​ ಎಂದು ಪ್ರೊಫೆಸರ್ ಒಬ್ಬರು ನಿಂದಿಸಿರುವಂತಹ ಘಟನೆ ಉಡುಪಿಯ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ನ. 26ರಂದು ನಡೆದಿದೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ಜತೆ ಮಾತಾಡುವಾಗ ಮುಸ್ಲಿಮರು ಟೆರರಿಸ್ಟ್​​ಗಳು ಎಂಬ ಅರ್ಥದಲ್ಲಿ ಪ್ರಾಧ್ಯಾಪಕರು ಹೇಳಿದ್ದಾರೆ ಎಂದು ನಿಂದನೆ ಆರೋಪ ಮಾಡಲಾಗಿದೆ. ಪ್ರೊಫೆಸರ್​ ಮಾತಿಗೆ ತರಗತಿಯಲ್ಲೇ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಟೆರರಿಸ್ಟ್​​ ಎನ್ನಬೇಡಿ ಎಂದು ವಿದ್ಯಾರ್ಥಿ ಹೇಳಿದ್ದಾರೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಕೂಡಲೇ ಪ್ರಾಧ್ಯಾಪಕ ಕ್ಷಮೆ ಕೇಳಿದ್ದಾರೆ. ನೀವು ಕ್ಷಮೆ ಕೇಳಿದ ತಕ್ಷಣ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ತಿರುಗೇಟು ನೀಡಿದ್ದಾನೆ. ಸದ್ಯ ಪ್ರಾಧ್ಯಾಪಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಾಧ್ಯಾಪಕನ ವಿರುದ್ಧ ಕ್ರಮಕೈಗೊಳ್ಳಲಾಗಿದ್ದು, ಪ್ರೊಫೆಸರ್​ನ್ನು​ ಅಮಾನತುಗೊಳಿಸಿ ಮಾಹೆ ವಿವಿ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್​ ಮೂಲಕ ಮಾಹೆ ವಿವಿ ಸಾಂತ್ವನ ಹೇಳಿದೆ.

ವಿಡಿಯೋದಲ್ಲಿ ವಿದ್ಯಾರ್ಥಿಯು ನೀವು ಹೇಗೆ ಇಂತಹ ಹೇಳಿಕೆ ನೀಡುತ್ತೀರಾ ಸರ್​ ಎಂದು ಪ್ರಶ್ನಿಸುತ್ತಾನೆ. ಆಗ ಪ್ರೊಫೆಸರ್​​ ನಾನು ತಮಾಷೆಯಾಗಿ ಹೇಳಿದೆ ಎಂದು ಉತ್ತರಿಸುತ್ತಾರೆ. ವಿದ್ಯಾರ್ಥಿ ಈ ವಿಚಾರವನ್ನು ಇಷ್ಟಕ್ಕೆ ಬಿಡದೆ ಮುಂದುವರೆಸಿದ್ದು, ಮುಸ್ಲಿಂ ಆಗಿ ನಾವು ಈ ದೇಶದಲ್ಲಿ ಇಂತಹ ವಿಷಯಗಳನ್ನು ಎದುರಿಸುತ್ತಿರುವುದು ತಮಾಷೆಯ ವಿಷಯವಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಉಡುಪಿಯಲ್ಲಿ ಉಗ್ರ ಶಾರೀಕ್ ಹೆಜ್ಜೆ ಗುರುತು: ಮಂಗಳೂರು ಪೊಲೀಸರಿಂದ ರಥಬೀದಿ ಪರಿಶೀಲನೆ

ಇದನ್ನೂ ಓದಿ: ಕರಾವಳಿಯಲ್ಲಿ ಗುಪ್ತವಾಗಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದೆ: ಶಾಸಕ ರಘುಪತಿ ಭಟ್ ಗಂಭೀರ ಆರೋಪ

ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಕೂಡಲೇ ಪ್ರಾಧ್ಯಾಪಕರು ಕ್ಷಮೆ ಕೇಳಿದ್ದಾರೆ. ನೀನು ನನ್ನ ಮಗನಂತೆ ಎಂದು ಹೇಳಿದ್ದಾರೆ. ಆಗ ವಿದ್ಯಾರ್ಥಿಯೂ ನೀವು ನಿಮ್ಮ ಮಗನೊಂದಿಗೆ ಹೀಗೆ ವರ್ತಿಸುತ್ತೀರಾ. ನಿಮ್ಮ ಮಗನಿಗೆ ಭಯೋತ್ಪಾದಕ ಎಂದು ಹೇಳುತ್ತೀರಾ. ತರಗತಿಯಲ್ಲಿ ಎಲ್ಲರ ಮುಂದೆ ಹೀಗೆ ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾನೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:31 pm, Mon, 28 November 22