ಉಡುಪಿಯ ಪ್ರಸಿದ್ಧ ವಸ್ತ್ರ ಮಳಿಗೆಯಲ್ಲಿ ಮಿಸ್ ಫೈರಿಂಗ್; ಓರ್ವನ ಸ್ಥಿತಿ ಗಂಭೀರ
ಗರದ ಬನ್ನಂಜೆಯಲ್ಲಿರುವ ಪ್ರಸಿದ್ಧ ವಸ್ತ್ರ ಮಳಿಗೆ ಜಯಲಕ್ಷ್ಮೀ ಸಿಲ್ಕ್ (Jayalakshmi Silk) ನಲ್ಲಿ ಮಿಸ್ ಫೈರಿಂಗ್ ಆಗಿ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡೇಟು ತಗುಲಿದ ಗಾಯಾಳುವನ್ನು ಉಡುಪಿ(Udupi) ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ, ಡಿ.30: ನಗರದ ಬನ್ನಂಜೆಯಲ್ಲಿರುವ ಪ್ರಸಿದ್ಧ ವಸ್ತ್ರ ಮಳಿಗೆ ಜಯಲಕ್ಷ್ಮೀ ಸಿಲ್ಕ್ (Jayalakshmi Silk) ನಲ್ಲಿ ಮಿಸ್ ಫೈರಿಂಗ್ (Miss firing) ಆಗಿ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡೇಟು ತಗುಲಿದ ಗಾಯಾಳುವನ್ನು ಉಡುಪಿ(Udupi) ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿತ್ತು. ಬಳಿಕ ಗನ್ ಎತ್ತಿಕೊಂಡು ಆಪರೇಟ್ ಮಾಡಿ ಪರೀಕ್ಷಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡೇಟು ತಗುಲಿತ್ತು.
ಈ ಹಿಂದೆಯೂ ಭೂಗತ ಪಾತಕಿಗಳಿಂದ ಜಯಲಕ್ಷ್ಮೀ ಸಿಲ್ಕ್ಸ್‌ನಲ್ಲಿ ನಡೆದಿತ್ತು ಫೈರಿಂಗ್
ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್ನ್ನು ವಶಕ್ಕೆ ಪಡೆದಿದ್ದಾರೆ. ಈ ಗನ್ ಯಾರದ್ದು? ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಎನ್ನುವುದರ ಕುರಿತು ತನಿಖೆ ಶುರುವಾಗಿದೆ. ಇಂತಹ ಘಟನೆ ಈ ಹಿಂದೆ ಕೂಡ ಜಯಲಕ್ಷ್ಮೀ ಸಿಲ್ಕ್ಸ್‌ನಲ್ಲಿ ನಡೆದಿತ್ತು ಎನ್ನಲಾಗಿದೆ. ಭೂಗತ ಪಾತಕಿಗಳು ಫೈರಿಂಗ್ ಮಾಡಿದ್ದರಂತೆ. ಇದೀಗ ಅಪರಿಚಿತರ ಗನ್ ಸಿಕ್ಕಿದ್ದು, ಪರೀಕ್ಷಿಸಲು ಹೋದಾಗ ಮಿಸ್ ಫೈರಿಂಗ್ ಆಗಿದೆ.
ಇದನ್ನೂ ಓದಿ:ರೌಡಿಗೆ ಕಾಲಿಗೆ ಗುಂಡೇಟು; ಮಟ ಮಟ ಮಧ್ಯಾಹ್ನವೇ ದಾಳಿ ಮಾಡಿದ್ದ ರೌಡಿ ಶೀಟರ್ ಪೊಲೀಸ್ ಬಲೆಗೆ
ಶಿವಮೊಗ್ಗದಲ್ಲಿ ರೌಡಿ ಕಾಲಿಗೆ ಗುಂಡೇಟು
ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ನಲ್ಲಿ ಡಿಸೆಂಬರ್ 25 ರ ಮಧ್ಯಾಹ್ನ ಶಶಿ ಎಂಬಾತನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದರು. ಗಾಯಗೊಂಡಿರುವ ವ್ಯಕ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sat, 30 December 23