ವಂದೇ ಮಾತರಂ ಗೀತೆಗೆ ಅಮ್ಮ ಮತ್ತು ಮಗನ ಯಕ್ಷಗಾನ ಕುಣಿತ; ವಿಡಿಯೋ ವೈರಲ್
ಹಿರಿಯ ಭಾಗವತ ಕೊಳಗಿ ಅವರ ಹಿನ್ನೆಲೆ ಧ್ವನಿಯಲ್ಲಿ ಹಾಡಲಾಗಿರುವ ಯಕ್ಷಗಾನ ವಂದೇ ಮಾತರಂ ಹಾಡಿಗೆ, ತಾಯಿ ಮಗ ಕಲಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಮುದ್ರದ ದಡದಲ್ಲಿ ನಿಂತು ಕುಣಿದ ಕುಣಿತ ಎಲ್ಲರನ್ನು ಆಕರ್ಷಿಸುತ್ತಿದೆ.
ಉಡುಪಿ: ಯಕ್ಷಗಾನ ಯಾವತ್ತೂ ಪ್ರಯೋಗಗಳೊಂದಿಗೆ ಕೂಡಿಕೊಂಡಿರುವ ಕಲೆ. ಅದರಂತೆ ಅಮ್ಮ ಮತ್ತು ಮಗ ಜೋಡಿಯಾಗಿ ಯಕ್ಷಗಾನ ಮಾಡಿದ್ದು, ಸಖತ್ ಸ್ಟೆಪ್ಸ್ ಹಾಕುವ ಮೂಲಕ ವೈರಲ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ತಾಯಿ ಮತ್ತು ಮಗ ಜೊತೆಯಾಗಿ ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವೇದಿಕೆಯಲ್ಲಿ ಯಕ್ಷಗಾನ ನಡೆಯುವುದು ಮಾಮೂಲು, ಆದರೆ ಕಡಲತೀರದಲ್ಲಿ ಯಕ್ಷಗಾನದ ಕುಣಿತ ಎಂದರೆ ಆ ಬಗೆಗಿನ ನಿರೀಕ್ಷೆಯೇ ಬೇರೆ.
ಕರಾವಳಿಯ ಕಲೆ ಹೊಸರೂಪದಲ್ಲಿ ಪ್ರಸ್ತುತ ಗೊಂಡಿದೆ. ತಾಯಿ ಭಾವನ ದೇವಾಡಿಗ ಜೊತೆ ಪುತ್ರ ಆಶಿಶ್ ದೇವಾಡಿಗ ಮನಮೋಹಕವಾಗಿ ಹೆಜ್ಜೆ ಹಾಕಿದ್ದಾರೆ. ಹಿರಿಯ ಭಾಗವತ ಕೊಳಗಿ ಅವರ ಹಿನ್ನೆಲೆ ಧ್ವನಿಯಲ್ಲಿ ಹಾಡಲಾಗಿರುವ ಯಕ್ಷಗಾನ ವಂದೇ ಮಾತರಂ ಹಾಡಿಗೆ, ತಾಯಿ ಮಗ ಕಲಾತ್ಮಕವಾಗಿ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಮುದ್ರದ ದಡದಲ್ಲಿ ನಿಂತು ಕುಣಿದ ಕುಣಿತ ಎಲ್ಲರನ್ನು ಆಕರ್ಷಿಸುತ್ತಿದೆ.
ಪ್ರಕೃತಿಯ ಮಡಿಲಲ್ಲಿ ನಡೆದಿರುವ ಈ ಅಪೂರ್ವ ದೃಶ್ಯಾವಳಿಗಳು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯಕ್ಷಗಾನದ ಅಪರೂಪದ ಹೆಜ್ಜೆ ಗಾರಿಕೆಯನ್ನು, ಈ ದೃಶ್ಯಾವಳಿಗಳಲ್ಲಿ ನೋಡಬಹುದು. ಮಗನಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ, ಕುಣಿದ ತಾಯಿಯಂತೂ ಎಲ್ಲರ ಗಮನಸೆಳೆಯುತ್ತಿದ್ದಾರೆ. ಈ ಮೂಲಕ ದೇಶಭಕ್ತಿ ಗೀತೆಯೊಂದು ಹೊಸ ರೂಪದಲ್ಲಿ ಜನರ ಮುಂದೆ ಪ್ರಸ್ತುತ ಗೊಂಡಿದೆ.
ವರದಿ: ಹರೀಶ್ ಪಾಲೇಚ್ಚಾರ್
ಇದನ್ನೂ ಓದಿ: ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್
Viral Video: ತಲೆ ಕೂದಲಿನಲ್ಲಿಯೇ ವಾಹನವನ್ನು ಎಳೆದು ತಂದ ಯುವತಿ! ಶಾಕಿಂಗ್ ವಿಡಿಯೋ ವೈರಲ್
Published On - 12:38 pm, Wed, 20 October 21