ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್​

ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್​
ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ

Hassan News: ಬೇರೆ ಒಬ್ಬ ವ್ಯಕ್ತಿ ಜತೆ ಕುಳಿತು ಇಬ್ಬರು ಪೊಲೀಸರ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೆನ್ಷನ್​ ಮೊಹಲ್ಲಾ ಠಾಣೆ ಪೊಲೀಸರಿಂದು ಹೇಳಿ ವಿಡಿಯೋ ಹರಿದಾಡಿದೆ.

TV9kannada Web Team

| Edited By: ganapathi bhat

Oct 19, 2021 | 6:27 PM

ಹಾಸನ: ಇಲ್ಲಿ ಸಮವಸ್ತ್ರದಲ್ಲೇ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರು ಪೊಲೀಸರು ಸಮವಸ್ತ್ರದಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹಾಸನದ ಪೆನ್ಷನ್​ ಮೊಹಲ್ಲಾ ಠಾಣೆ ಪೊಲೀಸರೆಂಬ ಮಾಹಿತಿ ಲಭ್ಯವಾಗಿದೆ. ಯುನಿಫಾರ್ಮ್​ನಲ್ಲಿ ಎಣ್ಣೆ ಹೊಡೆಯುತ್ತಿದ್ದೀರಿ ಎಂದು ಅಲ್ಲಿ ವ್ಯಕ್ತಿಯೊಬ್ಬ ಪ್ರಶ್ನೆ ಕೇಳಿದ್ದಾರೆ. ಮದ್ಯ ಸೇವಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ವ್ಯಕ್ತಿ ಪ್ರಶ್ನಿಸಿದ್ದಾರೆ. ಹೌದು ತಪ್ಪಾಗಿದೆ, ನೀವು ಬೇಡ ಅಂದ್ರೆ ಅರ್ಧಕ್ಕೆ ಬಿಟ್ಟೋಗ್ತೀವಿ ಎಂದು ಪೊಲೀಸರು ಹೇಳಿದ್ದಾರೆ.

ಎಎಸ್​ಐ ರಂಗಸ್ವಾಮಿ, ಹೆಚ್​ಸಿ ರಾಮೇಗೌಡರಿಂದ ಪಾರ್ಟಿ ಮಾಡಲಾಗಿದೆ. ಹಬ್ಬ ಅಲ್ವ ಹಾಗಾಗಿ ಕುಡಿಯುತ್ತಿದ್ದೇವೆ, ಮಾಡ್ತಿರೋದು ತಪ್ಪಿದೆ ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ. ಕೆಲವು ದಿನಗಳ ಹಿಂದಿನ ವಿಡಿಯೋ ಇವಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬೇರೆ ಒಬ್ಬ ವ್ಯಕ್ತಿ ಜತೆ ಕುಳಿತು ಇಬ್ಬರು ಪೊಲೀಸರ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೆನ್ಷನ್​ ಮೊಹಲ್ಲಾ ಠಾಣೆ ಪೊಲೀಸರಿಂದು ಹೇಳಿ ವಿಡಿಯೋ ಹರಿದಾಡಿದೆ. ಪೊಲೀಸರಾದ ರಾಮೇಗೌಡ ಹಾಗು ಮತ್ತೊಬ್ಬರಿಂದ‌ ನಿಯಮ‌ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಮದ್ಯಪಾನ ಮಾಡಿದ್ದ ಸಿಬ್ಬಂದಿ ಅಮಾನತು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಸಿಬ್ಬಂದಿ ಅಮಾನತು ಆಗಿದ್ದಾರೆ. ಹಾಸನದ ಪೆನ್ಷನ್​ ಮೊಹಲ್ಲಾ ಠಾಣೆಯ ಸಿಬ್ಬಂದಿ ಅಮಾನತು ಆಗಿದ್ದಾರೆ. ಎಎಸ್​ಐ ರಂಗಸ್ವಾಮಿ, ಹೆಡ್​ಕಾನ್ಸ್​​ಟೆಬಲ್ ರಾಮೇಗೌಡ ಸಸ್ಪೆಂಡ್ ಆಗಿದ್ದಾರೆ. ಅಮಾನತುಗೊಳಿಸಿ ಹಾಸನ ಎಸ್​​ಪಿ ಶ್ರೀನಿವಾಸಗೌಡ ಆದೇಶ ಹೊರಡಿಸಿದ್ದಾರೆ. ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಪೊಲೀಸ್​ ಸಿಬ್ಬಂದಿ ವಿಡಿಯೋ ವೈರಲ್​ ಆಗಿತ್ತು. ವಿಡಿಯೋ ವೈರಲ್​ ಹಿನ್ನೆಲೆ ಸಸ್ಪೆಂಡ್​ ಮಾಡಿ ಎಸ್​ಪಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​

ಇದನ್ನೂ ಓದಿ: ಬೆಂಗಳೂರು ಮೆಟ್ರೋ ರೈಲಿನಲ್ಲಿ ಬಾಲಕನ ಉಯ್ಯಾಲೆ ಆಟ; ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada