Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಚುನಾವಣೆಯಲ್ಲಿ ಕಾರ್ಕಳದಿಂದಲೇ ಸ್ಪರ್ಧಿಸುವೆ: ಅಪಪ್ರಚಾರ ವಂದತಿಗೆ ತೆರೆ ಎಳೆದ ಸಚಿವ ಸುನಿಲ್​ ಕುಮಾರ್

ಕಾರ್ಕಳದಿಂದ ​ಸ್ಪರ್ಧಿಸಲ್ಲವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದಲೇ ಸ್ಪರ್ಧಿಸುವೆ ಎಂದು ಸಚಿವ ಸುನಿಲ್​ ಕುಮಾರ್ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾರ್ಕಳದಿಂದಲೇ ಸ್ಪರ್ಧಿಸುವೆ: ಅಪಪ್ರಚಾರ ವಂದತಿಗೆ ತೆರೆ ಎಳೆದ ಸಚಿವ ಸುನಿಲ್​ ಕುಮಾರ್
ಸಚಿವ ಸುನಿಲ್​ ಕುಮಾರ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 03, 2022 | 6:08 PM

ಉಡುಪಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಯಕರ ಟಿಕೇಟ್​ ಆಕಾಂಕ್ಷೆ, ಕ್ಷೇತ್ರ ಆಯ್ಕೆ ಜೋರಾಗಿದೆ. ಹಾಗೆಯೇ ಕೆಲವು ನಾಯಕರ ಸ್ಪರ್ಧೆ ವಿಚಾರವಾಗಿ ವಂದತಿಗಳು ಎದ್ದಿವೆ. ಹೀಗೆಯೇ ಕಾರ್ಕಳದಿಂದ (Karkala) ಸಚಿವ ಸುನಿಲ್​ ಕುಮಾರ್​ ಸ್ಪರ್ಧಿಸಲ್ಲವೆಂದು ವಂದತಿ ಎದ್ದಿದೆ. ಈ ಕುರಿತು ಮಾತನಾಡಿದ ಸುನಿಲ್ (Sunil Kumar)​ ಕುಮಾರ್ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದಲೇ ಸ್ಪರ್ಧಿಸುವೆ ಎಂದು ವಂದತಿಗೆ ತೆರೆ ಎಳೆದಿದ್ದಾರೆ.

ಇಂದು (ಡಿ.3) ಕಾರ್ಕಳದಲ್ಲಿ ನಡೆದ ಬೂತ್​ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಯಾರೋ ನಾಲ್ಕೈದು ಜನ ಮಾತನಾಡುತ್ತಾರೆ. ಆದರೆ ಇದನ್ನು ಸಾವಿರಾರು ಜನ ಕಾರ್ಯಕರ್ತರಿಗೆ ತಡೆಯುವ ಶಕ್ತಿ ಇದೆ. ಅಪಪ್ರಚಾರದ ಬಾಯಿಗಳನ್ನು ತಡೆಯುವ ಶಕ್ತಿ ಇದೆ. ಸುನಿಲ್ ಕುಮಾರ್ ಹತ್ರ 100 ಲಾರಿ ಇದೆ ಅಂದರು. ನನ್ನ ಜಾತಿ ಯಾವುದು ಗೊಂದಲ ಇದೆ ಅಂದಿದ್ದರು. ನಗರದ ಜಿಎಸ್‌ಬಿ ಸಮುದಾಯ ನನ್ನ ವಿರೋಧವಿದೆ ಅಂದರು. ಸುನಿಲ್ ಕುಮಾರ್​ಗೆ ಬಂಟ ಸಮುದಾಯ ವಿರೋಧವಿದೆ ಎಂದು ಸುದ್ದಿ ಹಬ್ಬಿಸಿದರು. ಸುನಿಲ್ ಕುಮಾರ್​ಗೆ ಬಿಲ್ಲವರು ಓಟು ಹಾಕಲ್ಲ ಅಂದರು. ನಾನು ಕಾರ್ಕಳದಲ್ಲಿ ಸ್ಪರ್ಧಿಸಲ್ಲ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಸುನಿಲ್ ಕುಮಾರ್​ಗೆ ಕಾರ್ಕಳದಲ್ಲೇ ರಾಜಕೀಯ ಜನ್ಮ. ಸುನಿಲ್ ಕುಮಾರ್​ಗೆ ಕಾರ್ಕಳದಲ್ಲೇ ಮರಣ ಎಂದು ಹೇಳಿದರು.

ಇದನ್ನೂ ಓದಿ: ಕುಟುಂಬದ ಮೂರನೇಯವರು ಬಂದ್ರೆ ನಾನು ಫ್ಯಾಕ್ಟ್ರಿ ನೋಡ್ಕೊಂಡು ಹೋಗ್ತೇನೆ: ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ ನಿರಾಣಿ

ಮಿಂಚಿನ ಹುಳದ ರೂಪದಲ್ಲಿ ಕೆಲವರು ಬರುತ್ತಾರೆ. ಮಳೆಗಾಲದಲ್ಲಿ ಅಣಬೆಗಳ ತರ ಹುಟ್ಟಿಕೊಳ್ಳುತ್ತಾರೆ. ಮಳೆ ಇಲ್ಲದಾಗ ಇವರಿಗೆ ಅಸ್ತಿತ್ವವೇ ಇರುವುದಿಲ್ಲ. ಬಿಜೆಪಿ ಕಾರ್ಕಳದಲ್ಲಿ ಒಂದು ಆಲದ ಮರ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾಗಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಘೋಷಣೆಯಾಗಿದೆ. ಲವ್ ಜಿಹಾದ್ ವಿರುದ್ಧ ಕಾನೂನು ರಚನೆಯಾಗಿದ್ದು ನಮ್ಮ ಕಾಲದಲ್ಲಿ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದು ನಾವು. ಹನುಮಗಿರಿಗೆ 100 ಕೋಟಿ ರೂಪಾಯಿ ನೀಡಿದ್ದು ನಮ್ಮ ಸರ್ಕಾರ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಬಿಜೆಪಿ ಸರಕಾರ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣಕ್ಕೆ ಇಷ್ಟೆಲ್ಲಾ ಕೆಲಸವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:  “ಗೋಹತ್ಯೆ ಆರೋಪಿಗಳಿಗೆ 2-7 ವರ್ಷದವರೆಗೆ ಜೈಲು ಶಿಕ್ಷೆ: ಕಾಯ್ದೆ ಜಾರಿಯಿಂದ ಗೋವುಗಳ ಹತ್ಯೆ ಸಂಖ್ಯೆ ಇಳಿಕೆ”

ಶಿವ ಸೇನೆಯ ಹಿಂದುತ್ವ ಬಹಳ ಒಳ್ಳೆಯದು ಎಂದು ನಮಗೆ ಅನಿಸುತ್ತಿತ್ತು. ಶಿವಸೇನೆಯ ನಾಯಕರು ಹೇಳಿಕೆ ಕೊಟ್ಟರೆ ಶಹಬ್ಬಾಸ್ ಎನ್ನುತ್ತಿದ್ದೆವು. ಬಿಜೆಪಿ, ಸಂಘ ಪರಿವಾರದ ಹಿಂದುತ್ವಕ್ಕಿಂತ ಶಿವಸೇನೆ ಗಟ್ಟಿ ಎಂದು ಭಾವಿಸಿದ್ದೆವು. ಈಗ ಅದೇ ಶಿವ ಸೇನೆ ವೈಯಕ್ತಿಕ ಹಿತಾಸಕ್ತಿಗೋಸ್ಕರ, ಅಧಿಕಾರದ ಲಾಲಸೆಗೋಸ್ಕರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದನ್ನು ಈ ದೇಶ ಯಾವತ್ತು ಮರೆಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Sat, 3 December 22

VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್