ಕುಟುಂಬದ ಮೂರನೇಯವರು ಬಂದ್ರೆ ನಾನು ಫ್ಯಾಕ್ಟ್ರಿ ನೋಡ್ಕೊಂಡು ಹೋಗ್ತೇನೆ: ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ ನಿರಾಣಿ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ರಂಗೇರಿದೆ. ಚುನಾವಣಾ ಅಖಾಡಕ್ಕೆ ರಾಜಕೀಯ ನಾಯಕರುಗಳ ಸಹ ಸಜ್ಜಾಗುತ್ತಿದ್ದಾರೆ. ಇನ್ನು ಇದರ ಮಧ್ಯೆ ಸಚಿವ ಮುರುಗೇಶ್ ನಿರಾಣಿ ರಾಜಕೀಯ ನಿವೃತ್ತಿಗೂ ಸೈ ಎನ್ನುವ ಮಾತುಗಳನ್ನಾಡಿದ್ದಾರೆ.

ಕುಟುಂಬದ ಮೂರನೇಯವರು ಬಂದ್ರೆ ನಾನು ಫ್ಯಾಕ್ಟ್ರಿ ನೋಡ್ಕೊಂಡು ಹೋಗ್ತೇನೆ: ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ ನಿರಾಣಿ
ಮುರುಗೇಶ ಆರ್ ನಿರಾಣಿ, (ಸಂಗ್ರಹ ಚಿತ್ರ)
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 03, 2022 | 4:56 PM

ಬಾಗಲಕೋಟೆ: ಮುಂದಿನ ಚುನಾವಣೆಯಲ್ಲಿ(Karnataka Assembly Election 2023)  ಸಚಿವ ಮುರುಗೇಶ್ ನಿರಾಣಿ (Murugesh Nirani) ಸ್ಪರ್ಧೆ ಮಾಡುವ ಬಗ್ಗೆ ಖಚಿತಪಡಿಸಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣ ಬಗ್ಗೆಯೂ ಮತನಾಡಿದ್ದು, ಕುಟುಂಬದಲ್ಲಿ ಇಬ್ಬರನ್ನು ಬಿಟ್ಟು ಮೂರನೇಯವರು ಸ್ಪರ್ಧೆ ಮಾಡಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಅಚ್ಚರಿಯ ಮಾತುಳನ್ನಾಡಿದ್ದಾರೆ.

ಬಾಗಲಕೋಟೆಯಲ್ಲಿ ಇಂದು(ಡಿಸೆಂಬರ್ 03) ಮಾತನಾಡಿದ ಮುರುಗೇಶ್ ನಿರಾಣಿ, ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ನೂರಕ್ಕೆ ನೂರು ಬರಲ್ಲ. ಅವನಿಗೆ ಅದು ಆಸಕ್ತಿಯೂ ಇಲ್ಲ. ನಾನು ಕರೆದರೂ ಅವನು ಬರಲ್ಲ. ನಮ್ಮ ಕುಟುಂಬದಲ್ಲಿ ಮುರುಗೇಶ್ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ಇರ್ತಾರೆ. ನಮ್ಮಿಬ್ಬರನ್ನು ಬಿಟ್ಟು ಮೂರನೇಯವರು ಸ್ಪರ್ಧೆ ಮಾಡಿಲ್ಲ. ಒಂದು ವೇಳೆ ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡುತ್ತೇನೆ ಅಂದ್ರೆ ನಾನು ನಿವೃತ್ತಿ ಹೊಂದುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನಗೂ ಇಪ್ಪತ್ತು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ.‌ ಸಂಗಮೇಶ್(ಸಹೋದರ) ನಿರಾಣಿ ಬೇಕಿದ್ರೆ ಸ್ಪರ್ಧೆ ಮಾಡಲಿ. ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ ಎಂದು ಪರೋಕ್ಷವಾಗಿ ರಾಜಕೀಯ ನಿವೃತ್ತಿಯಾಗುವುದಕ್ಕೂ ರೆಡಿ ಎಂದು ಹೇಳಿದರು.

ಮಿನಿಮಮ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ‌ ಗೆಲ್ಲುತ್ತೇನೆ. ನನ್ನ ವಿರುದ್ಧ ಯಾರೂ ಬೇಕಾದರೂ ನಿಲ್ಲಲಿ ಮಿನಿಮಮ್ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ನನ್ನ ಗೆಲುವಿನ ಅಂತರದ ಸಂಖ್ಯೆಯನ್ನು ತೀರಾ ಕಡಿಮೆ ಹೇಳಿದ್ದೇನೆ. ಆದ್ರೆ ನನ್ನ ಗೆಲುವಿನ ಅಂತರದ ಟಾರ್ಗೆಟ್ ತುಂಬಾ ದೊಡ್ಡದಿದೆ ಎಂದು ಸಚಿವ ಮುರುಗೇಶ್ ನಿರಾಣಿ ಎದೆಯುಬ್ಬಿಸಿ ಹೇಳಿದ್ದಾರೆ.

ವಿಮಾನ ನಿಲ್ದಾಣ, ರೈಲ್ವೆ ಕಂಪ್ಲೀಟ್ ಮಾಡಿದ್ದೇನೆ. ನ್ಯಾಷನಲ್ ಹೈವೆಗಳು ನಮ್ಮ ಕ್ಷೇತ್ರದಲ್ಲಿಯೇ ಹಾದು ಹೋಗುತ್ತಿವೆ. ಕ್ಷೇತ್ರಕ್ಕೆ ಇನ್ನೇನು ಬೇಕು. ನಿರಾಣಿ ಫೌಂಡೇಶನ್ ವತಿಯಿಂದ ನಿರಂತರ ಕೆಲಸಗಳು ಉಚಿತವಾಗಿ ನಡೆಯುತ್ತಿವೆ. ಆಸ್ಪತ್ರೆ ಬಿಲ್ ಆಗಿರಬಹುದು, ಶಾಲೆ ಫೀ ಆಗಿರಬಹುದು.. ಯಾರು ಮನೆಗೆ ಬರ್ತಾರೆ ಅವರನ್ನು ಬರಿಗೈಯಲ್ಲಿ ವಾಪಸ್ ಕಳಿಸಿಲ್ಲ ಎಂದು ಹೇಳಿದರು.

72 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೀನಿ. ನಿಮಗೆ ದುಡ್ಡು ಕೊಡ್ತಿದೀನಿ ನನಗೇ ವೋಟ್ ಹಾಕಿ ಅಂತ ಯಾರಿಗೂ ಕಂಡಿಷನ್ ಹಾಕಿಲ್ಲ. ಹಳ್ಳಿಗಳಿಗೆ ಒಂದು ಸಾರಿ ಸಿಂಪಲ್ ಆಗಿ ಹೋಗಿ ಕೈ ಮುಗಿದು ಬರುತ್ತೇನೆ. ಆಯ್ಕೆ ಆದ್ರೆ ಕ್ಷೇತ್ರದ ಕೆಲಸ ಮಾಡುತ್ತೇನೆ. ರೈತರ ನಾಡಿಮಿಡಿತದ ಬಗ್ಗೆ ನನಗೆ ವಿಶ್ವಾಸ ಇದೆ ಎಂದು ತಿಳಿಸಿದರು.

ಪುತ್ರನ ಕೆಲಸವನ್ನು ಖುಷಿಯಿಂದ ಹೇಳಿಕೊಂಡ ನಿರಾಣಿ

ದೇಶ, ವಿದೇಶಗಳಲ್ಲಿ ನನ್ನ ಮಗ ಕೈಗಾರಿಕೋದ್ಯಮಗಳ ಎದುರು, ವಿದ್ಯಾರ್ಥಿಗಳ ಎದುರು ಸ್ಪೀಚ್ ಮಾಡುತ್ತಾನೆ. ನನ್ನ ಮಗನಿಗೆ ಒಂದು ಟಾರ್ಗೆಟ್ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರಂತೆ. ದೇಶದಲ್ಲಿ 101 ಕಾರ್ಖಾನೆ ಸ್ಥಾಪಿಸುವ ಗುರಿ ಹೊಂದಿದ್ದಾನೆ. ಈಗ ನನ್ನ‌ಅವದಿಯಲ್ಲಿ 50 ಮಾಡಿಕೊಡಿ ಉಳಿದಿದ್ದು ನಾನು ಮಾಡುತ್ತೇನೆ ಅಂತಾನೆ. ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದು. ಈಗ ನಾನು ನಿವೃತ್ತಿ ಆಗಿದ್ದೇನೆ. ಸದ್ಯ ನನ್ನ ಮಗ ನಿರಾಣಿ ಗ್ರೂಪ್ ಗೆ ಎಂಡಿ ಇದ್ದಾನೆ. ನಾನು ಏನು ಇಲ್ಲ. ಎಲ್ಲ ಹೊರಹಾಕ್ತಿದ್ದಾರೆ ಎಂದು ಹಾಸ್ಯ ಚಟಾಕೆ ಹಾರಿಸಿದರು.

ಈಗ ನನ್ನ ಮಗ ದುಬೈನಲ್ಲಿ ಆಮದು-ರಫ್ತು ವಹಿವಾಟು ಶುರು ಮಾಡಿದ್ದಾನೆ. ನಮ್ಮ ಕಾರ್ಖಾನೆ ಶುಗರ್ ಜೊತೆ ಬೇರೆಯವರಿಂದಲೂ ಖರೀದಿ ಮಾಡುತ್ತಿದ್ದಾನೆ. ನಿರಾಣಿ ಗ್ರೂಪ್ ನ ಆಮದು-ರಫ್ತು ಎಲ್ಲವನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ ಎಂದು ಸಚಿವ ಮುರುಗೇಶ್ ನಿರಾಣಿ ಅವರು ಔದ್ಯೋಗಿಕವಾಗಿ ಬೆಳೆಯುತ್ತಿರುವ ಪುತ್ರ ವಿಜಯ ಬಗ್ಗೆ ಖುಷಿಯಿಂದ ಹೇಳಿಕೊಂಡರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ