ವಿಶಿಷ್ಟ ರೀತಿಯಲ್ಲಿ ತಯಾರಾಗಿದೆ ಸೋಲಾರ್ ಬ್ಯಾಟರಿ ಚಾಲಿತ ಬೈಕ್; ಸದ್ದು ಮಾಡದೇ ಸುದ್ದಿಯಾದ ಟು ವೀಲರ್ ಹೇಗಿದೆ ಗೊತ್ತಾ?

ವಿಶಿಷ್ಟ ರೀತಿಯಲ್ಲಿ ತಯಾರಾಗಿದೆ ಸೋಲಾರ್ ಬ್ಯಾಟರಿ ಚಾಲಿತ ಬೈಕ್; ಸದ್ದು ಮಾಡದೇ ಸುದ್ದಿಯಾದ ಟು ವೀಲರ್ ಹೇಗಿದೆ ಗೊತ್ತಾ?
ಸುರತ್ಕಲ್ ಎನ್‌ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಅಭಿವೃದ್ಧಿ ಪಡಿಸಲಾದ ಈ ವಿನೂತನ ಬೈಕ್‌

ಈ ಬೈಕ್​ನ ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಮೂರು ಮೂವೆಬಲ್ ಸೋಲಾರ್ ಪ್ಯಾನೇಲ್, ಚಾರ್ಜರ್ ಇಡೋದಕ್ಕೆ ಅಂತ ವಾಟರ್ ಪ್ರೂಫ್ ಬಾಕ್ಸ್ ಬೈಕ್‌ನಲ್ಲಿದೆ. 3 ಗಂಟೆಗಳ ಕಾಲ ಜಾರ್ಜ್ ಮಾಡಿದ 1 ಬ್ಯಾಟರಿ 70 ಕಿ.ಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.

TV9kannada Web Team

| Edited By: preethi shettigar

Nov 24, 2021 | 8:46 AM

ಉಡುಪಿ: ಅದು ಸದ್ದೇ ಮಾಡದ ಸ್ಪೆಷಲ್ ಬೈಕ್. ಹೊಗೆಯಂತು ಉಗುಳೋದೆ ಇಲ್ಲ. ಡೀಸೆಲ್‌, ಪೆಟ್ರೋಲ್ (Petrol) ಇದಕ್ಕೆ ಬೇಡವೇ ಬೇಡ. ಹೀಗೊಂದು ವಿನೂತನ ಬೈಕ್ ಕಳೆದೆರಡು ತಿಂಗಳಿನಿಂದ ಕುದುರೆ ಮುಖದ ದಟ್ಟ ಕಾನನದ ಮಧ್ಯೆ ಓಡಾಡುತ್ತಿದೆ. ಸದ್ದು ಮಾಡದೇ ಸುದ್ದಿಯಾದ ಬೈಕ್ (Bike) ಹೇಗಿದೆ ಗೊತ್ತಾ? ಇದು ವಿಧ್ ಯುಗ್ 4.0 ಇ ಬೈಕ್. ಸುರತ್ಕಲ್ ಎನ್‌ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಅಭಿವೃದ್ಧಿ ಪಡಿಸಲಾದ ಈ ವಿನೂತನ ಬೈಕ್‌ಗೆ ಪೆಟ್ರೋಲ್, ಡೀಸೆಲ್‌ ಅಗತ್ಯವಿಲ್ಲ. ಏಕೆಂದರೆ ಇದು ಸೋಲಾರ್ ಶಕ್ತಿಯಿಂದ ಓಡಾಡುವ ಡಿಫರೆಂಟ್ ಟು ವೀಲರ್. ಸೌರಶಕ್ತಿಯ ಬ್ಯಾಟರಿ ಬಳಸಲ್ಪಡುದ್ದರಿಂದ ಸ್ಕ್ರೋಕ್ ಇಂಜಿನ್ ಇದಕ್ಕಿಲ್ಲ. ಹೀಗಾಗಿ ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುವ ಸದ್ದು ಬರುವುದಿಲ್ಲ. ಕಾಡುಗಳ್ಳರಿಗೆ ಬೈಕ್ ಬಂದಿದ್ದೇ ಗೊತ್ತಾಗುವುದಿಲ್ಲ. ಅಷ್ಟು ವಿಶಿಷ್ಟ ರೀತಿಯಲ್ಲಿ ಸೋಲಾರ್ ಬ್ಯಾಟರಿ ಚಾಲಿತ ಬೈಕ್ ತಯಾರಿಸಲಾಗಿದೆ.

ಈ ಬೈಕ್​ನ ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಮೂರು ಮೂವೆಬಲ್ ಸೋಲಾರ್ ಪ್ಯಾನೇಲ್, ಚಾರ್ಜರ್ ಇಡೋದಕ್ಕೆ ಅಂತ ವಾಟರ್ ಪ್ರೂಫ್ ಬಾಕ್ಸ್ ಬೈಕ್‌ನಲ್ಲಿದೆ. 3 ಗಂಟೆಗಳ ಕಾಲ ಜಾರ್ಜ್ ಮಾಡಿದ 1 ಬ್ಯಾಟರಿ 70 ಕಿ.ಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ. ಇನ್ನೂ ಇದನ್ನು ತಯಾರಿಸಲು 1.50 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಸಂಶೋಧನಾ ವಿಭಾಗ ಮುಖ್ಯಸ್ಥ ಪ್ರೋ ಪೃಥ್ವಿ ರಾಜ್ ಹೇಳಿದ್ದಾರೆ.

ಸದ್ಯ ಕುದುರೆಮುಖದಲ್ಲಿ ಈ ಬೈಕ್ ಅನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ವಿಶೇಷ ಬೈಕ್‌ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒದಗಿಸುವ ಬಗ್ಗೆಯೂ ಯೋಚನೆ ಇದೆ ಎಂದು ಸಂಶೋಧನಾ ವಿಭಾಗ ಮುಖ್ಯಸ್ಥ ಪ್ರೋ ಪೃಥ್ವಿ ರಾಜ್ ತಿಳಿಸಿದ್ದಾರೆ.

solar bike

ಸೋಲಾರ್ ಬ್ಯಾಟರಿ ಚಾಲಿತ ಬೈಕ್

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:

ಅಪ್ಪನಿಗೆ ಬ್ಯಾಟರಿ ಚಾಲಿತ ಬೈಕ್, ಮಗನಿಗೆ ಜೀಪ್; ಲಾಕ್​ಡೌನ್​ ಸಮಯವನ್ನು ಸದುಪಯೋಗ ಮಾಡಿಕೊಂಡ ಬೀದರ್ ವ್ಯಕ್ತಿ

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್​ನಲ್ಲಂತೆ ರೀಲ್ ಲೈಫ್​ನಲ್ಲೂ ಓಡಿಸಿದ್ದು ಥರಾವರಿ ಬೈಕ್​​ಗಳು

Follow us on

Related Stories

Most Read Stories

Click on your DTH Provider to Add TV9 Kannada