ಉಡುಪಿ: ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ದಿನದಿಂದ ದಿನಕ್ಕೆ ಇದರ ಕಾವು ಹೆಚ್ಚಾಗುತ್ತಿದೆ. ಅಹಿತಕರ ಘಟನೆ ನಡೆಯದಂತೆ ಕರ್ನಾಟಕ ಸರ್ಕಾರ (Karnataka Government) ಫೆ.16ರ ವರೆಗೆ ಕಾಲೇಜುಗಳಿಗೆ ರಜೆ ಘೋಷಿಸಿದೆ. ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಸದ್ಯ ಇಡೀ ರಾಜ್ಯ ಕೋರ್ಟ್ ತೀರ್ಮಾನಕ್ಕಾಗಿ ಕಾದು ಕುಳಿತಿದೆ. ಈ ನಡುವೆ ಹಿಜಾಬ್ ವಿರೋಧಿ ಪೋಸ್ಟ್ ಹಂಚಿಕೊಂಡ ವ್ಯಕ್ಯಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಸೌದಿಯಲ್ಲಿ ಉಮೇಶ್ ಪೂಜಾರಿ ಎಂಬುವರಿಗೆ ಕರೆ ಮಾಡಿ ನಮ್ಮ ವಿರುದ್ಧ ಬರೆದಿದ್ದ ಇಬ್ಬರ ಕತೆ ಏನಾಯ್ತು ಗೊತ್ತಲ್ವಾ? ಅಂತ ಬೆದರಿಕೆ ಹಾಕಿದ್ದಾರೆ.
ಉಮೇಶ್ ಹಿಂದೂ ಸಂಘಟನೆಗಳ ಪೋಸ್ಟ್ ಹಂಚಿಕೊಂಡಿದ್ದರು. ಹೀಗಾಗಿ ಮುಸ್ಲಿಂ ದೇಶದ ಅನ್ನ ತಿಂದು ನಮ್ಮ ಬಗ್ಗೆ ಬರೆಯುತ್ತೀಯಾ? ಉಮೇಶ್ ಪೂಜಾರಿ ನಿನ್ನನ್ನು ಈಗಲೇ ಅರೆಸ್ಟ್ ಮಾಡಿಸುತ್ತೇವೆ. ನಮ್ಮ ವಿರುದ್ಧ ಬರೆದಿದ್ದ ಇಬ್ಬರ ಕತೆ ಏನಾಯ್ತು ಗೊತ್ತಲ್ವಾ? ನಿಮ್ಮ ಕ್ಷಮೆ ನಮಗೆ ಬೇಡ. ತಪ್ಪಾಯ್ತು ಅಂತ ಕೇಳಿ ಲೈವ್ ಬನ್ನಿ ಅಂತ ಬೆದರಿಸಿದ್ದಾರೆ. ಬೆದರಿಕೆ ಹಾಕಿ ರೆಕಾರ್ಡ್ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಉಡುಪಿ ಶಾಸಕ ರಘುಪತಿ ಭಟ್ಗೆ ಬೆದರಿಕೆ ಕರೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ, ಈ ರೀತಿಯಾಗಿ ಬೆದರಿಕೆ ಕರೆ ಮಾಡುವವರು ಹೇಡಿಗಳು. ಹಿಂದೆಯಿಂದ ಗುದ್ದು ಕೊಡ್ತಾರೆ, ತಾಕತ್ತಿದ್ದರೆ ಮುಂದೆ ಬರಲಿ. ಈ ರೀತಿಯ ಬೆದರಿಕೆ ಕರೆಗಳು ನನಗೂ ಬಹಳ ಬಂದಿತ್ತು ಅಂತ ಹೇಳಿದರು.
ಶಾಂತಿ ಸಭೆಯಲ್ಲಿ ಎಚ್ಚರಿಕೆ:
ಯಾವನಾದ್ರೂ ಜಿಲ್ಲೆಯನ್ನು ಹಾಳು ಮಾಡಲು ಬಂದ್ರೆ ಅಷ್ಟೇ. ಏಕೆ ಹುಟ್ಟಿದ್ದೀನಿ ಎಂದು ಅನ್ನಿಸುತ್ತೇನೆಂದು ರಾಮನಗರ ಎಸ್‌ಪಿ ಸಂತೋಷ್ ಬಾಬು ಖಡಕ್ ಎಚ್ಚರಿಕೆ ನೀಡಿದ್ದಾರೆ. ದಯವಿಟ್ಟು ಇದನ್ನು ನೆನಪಿಟ್ಟುಕೊಳ್ಳಿ ಎಂದು ಹಿಂದೂ, ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಶಾಂತಿ ಸಭೆ ಸಭೆ ನಡೆದಿದೆ. ಇದೇ ಜಿಲ್ಲೆಯವನು, ಜಿಲ್ಲೆಯನ್ನ ಕಂಡ್ರೆ ಸಾಕಷ್ಟು ಹೆಮ್ಮೆ ಇದೆ. ಹಿಂದೂ, ಮುಸ್ಲಿಂರು ತುಂಬಾ ಸಾಮರಸ್ಯದಿಂದ ಬದುಕುತ್ತಿದ್ದಾರೆ ಕೋಮುಸಾಮರಸ್ಯ, ಅಕ್ರಮ ಚಟುವಟಿಕೆಗೆ ನನ್ನ ಬಳಿ ತಾಳ್ಮೆ ಇಲ್ಲ. ಧಮ್ ಇದ್ದರೆ ಯಾರ ಬಳಿಯಾದ್ರೂ ಹೇಳಿಸಿಕೊಂಡು ಬನ್ನಿ. ಯಾರನ್ನೂ ಬಿಡುವುದಿಲ್ಲ ಅಂತ ಎಸ್‌ಪಿ ಹೇಳಿದ್ದಾರೆ.
ಇದನ್ನೂ ಓದಿ
Murder: ಮಗನ ಜೊತೆ ಸೇರಿ ಗಂಡನನ್ನೇ ಕೊಂದು 7ನೇ ಮಹಡಿಯಿಂದ ಎಸೆದ ಮಹಿಳೆ!
ಹಿಜಾಬ್ ವಿವಾದ ಕಾಂಗ್ರೆಸ್-ಎಸ್ ಡಿಪಿಐ-ಕಮ್ಯುನಿಸ್ಟ್ ಪಕ್ಷ ಒಕ್ಕೂಟದ ಕುತಂತ್ರ ಎಂದರು ನಳಿನ್ ಕುಮಾರ್ ಕಟೀಲ್
Published On - 4:58 pm, Sat, 12 February 22