ನಾಳೆಯಿಂದ ಪ್ರೌಢಶಾಲೆ ಆರಂಭ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ

ಫೆಬ್ರವರಿ 12ರಿಂದ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಡಿಸಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ.

ನಾಳೆಯಿಂದ ಪ್ರೌಢಶಾಲೆ ಆರಂಭ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ
ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು, ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
Follow us
TV9 Web
| Updated By: ಆಯೇಷಾ ಬಾನು

Updated on: Feb 13, 2022 | 10:09 AM

ಉಡುಪಿ: ಹಿಜಾಬ್(Hijab) ವಿವಾದ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸದ್ಯ ಈಗ ರಾಜ್ಯದಲ್ಲಿ ನಾಳೆಯಿಂದ ಪ್ರೌಢಶಾಲೆ ಪುನಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 10ನೇ ತರಗತಿವರೆಗೆ ಶಾಲೆ ಆರಂಭವಾಗಲಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಫೆಬ್ರವರಿ 12ರಿಂದ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಡಿಸಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಇಲ್ಲ. ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದೆ.

ಮತ್ತೊಂದು ಕಡೆ ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭಿಸುವ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತ ಎಲ್ಲಾ ತರಗತಿಗಳು ನಡೆಯುತ್ತವೆ. ಅದನ್ನ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ. ಎರಡೂ ವರ್ಷದಲ್ಲಿ ಆರ್ಥಿಕತೆ ಬಹಳ ನಷ್ಟ ಆಗಿದೆ. ಈ ಬಜೆಟ್ ನಲ್ಲಿ ಅದಕ್ಕೆ ಬೂಸ್ಟ್ ಕೊಡೋ ಪ್ರಯತ್ನ ಮಾಡುತ್ತೇವೆ. ಶಾಲಾ ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆಧ್ಯತೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೇವೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನ ಹಾಕ್ತಾರೆ ಅವೆಲ್ಲವನ್ನೂ ನಮ್ಮ ಅಧಿಕಾರಿಗಳು ಗಮನಿಸುತ್ತಾರೆ ಎಂದು ತಿಳಿಸಿದ್ದಾರೆ.

ಹಿಜಾಬ್ ವಿವಾದ ಪೂರ್ವನಿಯೋಜಿತ ಇನ್ನು ಗೋವಾದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹಿಜಾಬ್ ಸಂಬಂಧ ಮಾತನಾಡಿದ್ದು ರಾಜ್ಯದಲ್ಲಿ ಹಿಜಾಬ್ ವಿವಾದ ಒಂದು ಷಡ್ಯಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ಕೇರಳ, ಮಹಾರಾಷ್ಟ್ರದಲ್ಲಿ ಹಿಜಾಬ್ ವಿಚಾರ ತಲೆಎತ್ತಿತ್ತು. ಆದರೆ ಆ 2 ರಾಜ್ಯಗಳಲ್ಲಿ ಹಿಜಾಬ್ ವಿವಾದ ಆಗಲಿಲ್ಲ. ರಾಜ್ಯದಲ್ಲಿ ಏಕೆ ವಿವಾದ ಮಾಡುತ್ತಿದ್ದೀರೆಂದು ಗೋವಾದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಹಿಂದೆ CAA, ರೈತರನ್ನಿಟ್ಟುಕೊಂಡು ವಿವಾದ ಮಾಡಿದ್ದರು. ಈಗ ಹಿಜಾಬ್ ವಿವಾದ ಮಾಡಲಾಗುತ್ತಿದೆ. ಹಿಜಾಬ್ ವಿವಾದ ಪೂರ್ವನಿಯೋಜಿತ ಅನ್ನಿಸುತ್ತಿದೆ. ಉಡುಪಿ ವಿದ್ಯಾರ್ಥಿನಿಯರ ಹಿಂದೆ CFI ಸಂಘಟನೆ ಇದೆ.

ಕಾಂಗ್ರೆಸ್ ತನ್ನ ಮತೀಯ ವೋಟ್ ಬ್ಯಾಂಕ್ಗಾಗಿ ವಿವಾದ ಮಾಡುತ್ತಿದೆ. ವಿಭಜನೆಯ ವಿಷ ಬೀಜದಿಂದ ಭಾರತ ವಿಭಜನೆ ಮಾಡಲಾಗುತ್ತಿದೆ. ಆಗ ಪಿತೂರಿ ಅರ್ಥ ಮಾಡಿಕೊಂಡಿದ್ರೆ ವಿಭಜನೆ ಆಗ್ತಿತ್ತಾ. ಮಕ್ಕಳಲ್ಲಿ ನಾನು, ನೀನು ಬೇರೆ ಎಂಬ ವಿಷ ಬೀಜ ಬಿತ್ತಲಾಗುತ್ತಿದೆ. ಹೀಗೇ ಇರಬೇಕು ಎನ್ನುವುದು ಮತಾಂಧತೆ ಪ್ರತೀಕ ಎಂದು ಸಿ.ಟಿ.ರವಿ ಹೇಳಿದ್ರು.

ಇದನ್ನೂ ಓದಿ: Gehraiyaan: ‘ಗೆಹರಾಯಿಯಾ’, ‘ಖಿಲಾಡಿ’ಗೂ ಪೈರಸಿ ಕಾಟ; ತೆರೆ ಕಂಡ ಒಂದೇ ದಿನಕ್ಕೆ ಲೀಕ್ ಆಯ್ತು ಚಿತ್ರಗಳು

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ