ಉಡುಪಿ ಬೀಚ್ನಲ್ಲಿ ಪವಾಡ! ಕಡಲಲ್ಲಿ ತೇಲಿಬಂತೇ ಕೃಷ್ಣನ ವಿಗ್ರಹ? ಅಸಲಿಯತ್ತು ಇಲ್ಲಿದೆ
ಉಡುಪಿಯ ಮಲ್ಪೆ ಕಡಲತೀರದಲ್ಲಿ ತೇಲಿ ಬಂದ ವಿಗ್ರಹ ಕೃಷ್ಣ ಪವಾಡ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ವಾಸ್ತವವಾಗಿ ಇದರ ಅಸಲಿ ಕಥೆ ಬೇರೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇದು ಕೃಷ್ಣನ ಪವಾಡದಿಂದ ಸಿಕ್ಕ ವಿಗ್ರಹ ಎಂದು ಹೇಳಲಾಗಿತ್ತು. ಈ ವಿಗ್ರಹವನ್ನು ಇಸ್ಕಾನ್ ಭಕ್ತರು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಈ ವಿಗ್ರಹದ ಹಿಂದೆ ಬೇರೆಯೇ ಸತ್ಯ ಇದೆ. ಅದೇನು ಎಂಬುದು ಇಲ್ಲಿದೆ.

ಉಡುಪಿ, ಡಿ.23: ಕೆಲವೊಂದನ್ನು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ನೋಡಿದ ತಕ್ಷಣ ಅದನ್ನು ನಿರ್ಧಾರಿಸುವುದಲ್ಲ. ಅದರ ಬಗ್ಗೆ ವಿಚಾರ ಮಾಡಬೇಕು. ಅದರಲ್ಲೂ ಈ ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಂಬಬಾರದು. ಕೆಲವೊಂದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಯಾಕೆಂದರೆ ಅದರಲ್ಲಿ ಎಲ್ಲವೂ ಸತ್ಯವಾಗಿರುವುದಿಲ್ಲ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ. ಇತ್ತೀಚಿಗೆ ಉಡುಪಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ವೈರಲ್ ಆಗಿರುವ ವಿಡಿಯೋದಲ್ಲಿರುವ ಸತ್ಯವೇ ಬೇರೆ. ಅಷ್ಟಕ್ಕೂ ವೈರಲ್ ಆಗಿರುವ ವಿಡಿಯೋ ಯಾವುದು? ಅದರಲ್ಲಿ ಇರುವ ನಿಜವಾದ ಅಂಶವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ. ಉಡುಪಿಯ ಮಲ್ಪೆ ( Udupi Malpe Beach) ಕಡಲ ತೀರದಲ್ಲಿ ಇತ್ತಿಚಿಗೆ ವಿಗ್ರಹವೊಂದು ತೇಲಿ ಬಂದಿತ್ತು. ಇದು ದೇವರ ಪವಾಡ ಎಂದು ಜನ ನಂಬಿದ್ದರು. ಆದರೆ ಇದರ ಹಿಂದೆ ಇರುವ ಅಸಲಿ ಸತ್ಯ ಬೇರೆಯೇ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉಡುಪಿಯ ಮಲ್ಪೆ ಬೀಚ್ನಲ್ಲಿ ಕೃಷ್ಣನ ವಿಗ್ರಹವೊಂದು ತೇಲಿ ಬಂದಿದೆ. ಇದು ಕೃಷ್ಣನ ಪವಾಡ ಎಂದು ನಂಬಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಸ್ಕಾನ್ ಭಕ್ತರು ಮಲ್ಪೆ ಬೀಚ್ನಲ್ಲಿ ಕೃಷ್ಣನ ವಿಗ್ರಹ ಹಿಡಿದು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ಕೃಷ್ಣನ ಮಹಿಮೆ ಎಂದು ಹೇಳಿದ್ದರು. ಈ ಹಿಂದೆಯೂ ಕೂಡ ಇಂತಹ ಪವಾಡ ನಡೆದಿದೆ. ಇದೀಗ ಮತ್ತೆ ಇದು ಮರುಕಳಿಸಿದೆ ಎಂದು ಹೇಳಿದ್ದರು. ಈ ವಿಗ್ರಹವನ್ನು ನೋಡಲು 18 ಬಸ್ ಗಳಲ್ಲಿ ಮಲ್ಪೆ ಬೀಚ್ಗೆ ಬಂದಿದ್ದರು. ಅವರು ಈ ಕಪ್ಪು ವಿಗ್ರಹವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇದು ಕಲಿಯುಗದಲ್ಲಿ ನಡೆದ ಪವಾಡ ಎಂದು ಹೇಳಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಕಥೆ ಇದೆ. ನಿಜಕ್ಕೂ ಇದು ಯಾವುದರ ವಿಗ್ರಹ, ಅದು ಕಡಲಿನಲ್ಲಿ ಪತ್ತೆಯಾಗಿದ್ದು ಹೇಗೆ? ಎಂಬುದಕ್ಕೆ ಇಲ್ಲಿದೆ ಉತ್ತರ.
ಇದನ್ನೂ ಓದಿ: ಕೊಲ್ಲೂರು ದೇಗುಲ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸ್ತಿದ್ದವ ಅರೆಸ್ಟ್: ಆಸಾಮಿಯ ತಂತ್ರಗಾರಿಕೆಗೆ ಪೊಲೀಸರೇ ದಂಗು!
ವಿಡಿಯೋ ಇಲ್ಲಿದೆ ನೋಡಿ:
ವಾಸ್ತವಾಂಶ ಏನು?:
ಕಡಲಲ್ಲಿ ತೇಲಿ ಬಂದಿರುವುದು ಕೃಷ್ಣನ ವಿಗ್ರಹ ಅಲ್ಲ ಎಂದು ಹೇಳಲಾಗಿದೆ. ಇದು ಜಯ- ವಿಜಯ ವಿಗ್ರಹ ಎಂದು ಹೇಳಲಾಗಿದೆ. ದೇವಾಲಯದ ಗರ್ಭಗುಡಿಯ ಮುಂದೆ ಇರುವ ದ್ವಾರಪಾಲಕರು ಜಯ ವಿಜಯರ ವಿಗ್ರಹ ಎಂದು ಇದೀಗ ಸತ್ಯಾಂಶ ಹೊರಬಂದಿದೆ. ಹಿಂದೂ ಸಂಪ್ರಾದಾಯದ ಪ್ರಕಾರ ಒಂದು ವಿಗ್ರಹ ಭಗ್ನಗೊಂಡ ನಂತರ ಅದನ್ನು ಸಮುದ್ರಕ್ಕೆ ಹಾಕುತ್ತಾರೆ. ಇದೀಗ ಇಲ್ಲಿ ನಡೆದಿರುವುದು ಕೂಡ ಅದೇ, ಭಗ್ನಗೊಂಡ ವಿಗ್ರಹವನ್ನು ಸಮುದ್ರಕ್ಕೆ ಹಾಕಿದ್ದಾರೆ. ಅದು ತೇಲಿ ಬಂದು ಉಡುಪಿಯ ಮಲ್ಪೆ ಬೀಚ್ನಲ್ಲಿ ಪತ್ತೆಯಾಗಿದೆ. ಈ ಜಯ ವಿಜಯರ ವಿಗ್ರಹವನ್ನೇ ಕೃಷ್ಣನ ವಿಗ್ರಹವೆಂದು ಭಾವಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವುದೇ ಪರಂಪರಾಗತ ಪ್ರಾಚೀನ ಶೈಲಿಯ ವಿಗ್ರಹ ಅಲ್ಲ ಎಂದು ಹೇಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Tue, 23 December 25



