
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಬಿ.ಆರ್.ಸಿ. (BRC) ಕೇಂದ್ರಗಳಲ್ಲಿ ಸಮಾಲೋಚಕರ ಆಧಾರದ ಮೇಲೆ ಸೇವೆ ಒದಗಿಸಲು ‘ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಜಿಲ್ಲೆಯ 5 ಬಿ.ಆರ್.ಸಿ. ಕೇಂದ್ರಗಳಲ್ಲಿ ತಲಾ ಒಬ್ಬರಂತೆ ಒಟ್ಟು 5 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಅಗತ್ಯವಿದ್ದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೇವೆಯನ್ನು ಒದಗಿಸಬೇಕಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 28 ರಿಂದ 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳು ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸಿಲಿಂಗ್ ಮನೋವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಎಂಎ (MA) ಅಥವಾ ಎಂಎಸ್ಸಿ (MSc) ಪದವಿ ಪಡೆದಿರಬೇಕು. ಇದರೊಂದಿಗೆ, ಶಾಲೆ ಅಥವಾ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹಾಗೂ ಕನ್ನಡ, ಇಂಗ್ಲಿಷ್ ಭಾಷೆಗಳ ಜೊತೆಗೆ ಮೂಲಭೂತ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಆಯ್ಕೆಯಾಗುವ ಪ್ರತಿ ಸಮಾಲೋಚಕರಿಗೆ ಮಾಸಿಕ ಗೌರವಧನವಾಗಿ 40,000 ಹಾಗೂ ಪ್ರಯಾಣ ಭತ್ಯೆಯಾಗಿ 10,000 (ಒಟ್ಟು 50,000) ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 02 ಕೊನೆಯ ದಿನವಾಗಿದೆ. ಸಂಪರ್ಕಿಸಬೇಕಾದ ಕಚೇರಿ ವಿವರಗಳುಆಸಕ್ತ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ರಜತಾದ್ರಿ, ಮಣಿಪಾಲ ಕಚೇರಿಯನ್ನು ಭೇಟಿ ಮಾಡಬಹುದು. ಅಥವಾ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 0820-2575383 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ