AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಬಿಜೆಪಿಯವರಿಂದಲೇ ಸ್ವಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನೆರವು ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿಯವರಿಂದಲೇ ಸ್ವಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮುದ್ದೂರು ಎಂಬಲ್ಲಿ ನಡೆದಿದೆ. ಹಲ್ಲೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ. 

ಉಡುಪಿ: ಬಿಜೆಪಿಯವರಿಂದಲೇ ಸ್ವಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ಕಾರ್ಯಕರ್ತ ಪ್ರಭಾಕರ ಪೂಜಾರಿ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 01, 2023 | 9:39 AM

Share

ಉಡುಪಿ, ಸೆಪ್ಟೆಂಬರ್ 1: ಬಿಜೆಪಿಯವರಿಂದಲೇ (BJP activist) ಸ್ವಪಕ್ಷದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮುದ್ದೂರು ಎಂಬಲ್ಲಿ ನಡೆದಿದೆ. ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತ. ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ನೆರವು ನೀಡಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮುಖಂಡರಾದ ಪ್ರತಾಪ್ ಹೆಗ್ಡೆ, ಹರೀಶ್, ದಿನೇಶ್ ಮತ್ತು ಗಣೇಶ್​ ಎಂಬುವರಿಂದ ಕೃತ್ಯವೆಸಗಲಾಗಿದೆ. ನೆಂಚಾರು ಹಾಲು ಡೈರಿಗೆ ಹಾಲು ನೀಡಲು ಬಂದಿದ್ದ ಪ್ರಭಾಕರ ಪೂಜಾರಿಯನ್ನು ಬೆಳಗಿನ ಜಾವ 4 ಘಂಟೆಗೆ ಅಪಹರಿಸಲಾಗಿದೆ.

ಬಳಿಕ ಬಿಜೆಪಿ ಮುಖಂಡ ಪ್ರತಾಪ್ ಹೆಗ್ಡೆ ಕಚೇರಿಯಲ್ಲಿ ವಿದ್ಯುತ್ ತಂತಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಸಂಜೆಯವರೆಗೂ ಕಚೇರಿಯಲ್ಲಿ ಕೂಡಿಹಾಕಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರಭಾಕರ ಪೂಜಾರಿಯನ್ನು ಅವರ ಪತ್ನಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೋಟಿ ರೂ., ಕೆಜಿ ಚಿನ್ನ, ಫಾರ್ಚುನರ್ ಕಾರು ಕೊಟ್ಟರೂ ಸಾಕಾಗಿಲ್ಲ; ಕೈ ಮಾಜಿ ಸಚಿವನ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

ಮೊದಲಿನಿಂದಲೂ ಬಿಜೆಪಿಯ ಕಾರ್ಯಕರ್ತರಾಗಿ ಇದ್ದ ಪ್ರಭಾಕರ ಪೂಜಾರಿ, ಬಿಜೆಪಿ ಮುಖಂಡ ಪ್ರತಾಪ್ ಹೆಗ್ಡೆಯವರ ಜೊತೆಗೆ ಇದ್ದ ಪ್ರಭಾಕರ ಪೂಜಾರಿಗೆ ಅವರ ತಂಡದಿಂದಲ ಹಲ್ಲೆ ಮಾಡಲಾಗಿದೆ. ಹಲ್ಲೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ.

MDMA ನಿಷೇಧಿತ ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಚಿಕ್ಕಮಗಳೂರು: ಎಂಡಿಎಂಎ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಿದ್ದ ಇಬ್ಬರನ್ನು ಜಿಲ್ಲೆಯ ಮೂಡಿಗೆರೆ ಪಟ್ಟಣದ ಸರ್ವೋದಯ ನಗರದಲ್ಲಿ ಬಂಧಿಸಲಾಗಿದೆ. ಸುಹಾನ್(23) ,ಶಿಯಾಬುದ್ದೀನ್(24) ಬಂಧಿತರು. 12 ಗ್ರಾಂ ಎಂಡಿಎಂಎ ಕ್ರಿಸ್ಟಲ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್​ಲೈನ್​ ವಂಚನೆಗೊಳಗಾದ ವೃದ್ಧ ಹೃದಯಾಘಾತದಿಂದ ಸಾವು

ಮೈಸೂರು: ಆನ್​ಲೈನ್​ ವಂಚನೆಗೊಳಗಾದ ವೃದ್ಧ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ   ಹನುಮಂತನಗರದಲ್ಲಿ ನಡೆದಿದೆ. ಹಾರೂನ್ ರಷೀದ್‌ ಖಾನ್(79) ಮೃತ ವ್ಯಕ್ತಿ. ಕೆವೈಸಿ ಅಪ್‌ಡೇಟ್ ನೆಪ ಹೇಳಿ ವೃದ್ಧನಿಗೆ 1.45 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಮೈಸೂರು ಸೈಬರ್ ಠಾಣೆಗೆ ಮೃತ ಹಾರೂನ್​​​ ದೂರು ನೀಡಿದ್ದು, ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 am, Fri, 1 September 23