ಹೀಗೊಂದು ದೇಶಪ್ರೇಮ; ತನ್ನ ಮಕ್ಕಳಿಗೆ ‘ಸೈನ್ಯ’ ‘ಶೌರ್ಯ’ ಎಂದು ಹೆಸರಿಟ್ಟ ಉಡುಪಿಯ ಯೋಧ
ದೇಶ ಕಾಯುವುದರ ಜೊತೆಗೆ ಮನೆಯಲ್ಲೂ ದೇಶ ಪ್ರೇಮ ಸಾರಿದ ಉಡುಪಿಯ ಸೈನಿಕನೀತ. ತನ್ನ ಹಿರಿಯ ಮಗಳಿಗೆ ಸೈನ್ಯ ಎಂದು ಹೆಸರಿಟ್ಟಿದ್ದ ಉಡುಪಿಯ ಯೋಧ ಪ್ರಶಾಂತ್, ಇದೀಗ ತನ್ನ ಎರಡನೇ ಮಗುವಾದ ಗಂಡು ಮಗುವಿಗೆ ಶೌರ್ಯ ಎಂದು ನಾಮಕರಣ ಮಾಡಿದ್ದಾರೆ.
ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಗ್ರಾಮದ ಯೋಧ ಪ್ರಶಾಂತ್ ಪೂಜಾರಿ ಮತ್ತೊಮ್ಮೆ ದೇಶ ಪ್ರೇಮ (Patriotism) ಸಾರಿದ್ದಾರೆ. ಈ ಹಿಂದೆ ತಮ್ಮ ಮೊದಲ ಮಗುವಿಗೆ ಸೈನ್ಯ ಎಂಬ ಪ್ರಶಂಸಾರ್ಹ ಹೆಸರಿಟ್ಟಿದ್ದ ಯೋಧ ಪ್ರಶಾಂತ್-ಆಶಾ ದಂಪತಿ ಇದೀಗ ಎರಡನೇ ಮಗುವಿಗೆ ಶೌರ್ಯ ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ಪ್ರಶಾಂತ್ ದೇಶದ ಮೇಲಿನ ಪ್ರೀತಿ, ಅಭಿಮಾನ, ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ, ಅಂದರೆ 2020ರ ಅಕ್ಟೋಬರ್ ತಿಂಗಳಲ್ಲಿ ಪ್ರಶಾಂತ್ ಆಶಾ ದಂಪತಿ ತಮ್ಮ ಮೊದಲ ಹೆಣ್ಣು ಮಗುವಿಗೆ ಸೈನ್ಯ ಎಂಬ ನಾಮಕರಣ ಮಾಡುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ, ಪ್ರಶಂಸೆಗೂ ಪಾತ್ರರಾಗಿದ್ದರು. ಇದೀಗ 2ನೇ ಮಗುವಾದ ಗಂಡು ಮಗುವಿಗೆ ಸೈನ್ಯದಲ್ಲಿ ಯೋಧರು ತೋರುವ ಶೌರ್ಯದ ಸಂಕೇತವಾಗಿ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ಆ ಮೂಲಕ ಭಾರತದ ಸೈನ್ಯಕ್ಕೆ ಹಾಗೂ ಸೈನಿಕರ ಶೌರ್ಯಕ್ಕೆ ಗೌರವೂ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಶಾಂತ್ ಅವರು ಜಮ್ಮುವಿನಲ್ಲಿ ದೇಶಸೇವೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Fashion Tips: ನಿಮ್ಮ ಉಡುಪಿಗೆ ಸ್ಟೆಲಿಶ್ ಮತ್ತು ಗ್ಲಾಮರ್ ಲುಕ್ ನೀಡುವ ಸ್ಟೆಲಿಂಗ್ ಪರಿಕರ
ಇದೇ ಜಿಲ್ಲೆಯ ಕುಂದಾಪುರದ ದಂಪತಿಯೊಂದು ಕನ್ನಡ ಭಾಷಾಭಿಮಾನವನ್ನು ಮೆರೆದಿದ್ದರು. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಮತ್ತು ಪ್ರತಿಮಾ ದಂಪತಿ ಅಪ್ಪಟ ಕನ್ನಡಾಭಿಮಾನಿಯಾಗಿದ್ದಾರೆ. ಅದರಂತೆ 2019ರ ನವೆಂಬರ್ 27ರಂದು ಜನಿಸಿದ ತಮ್ಮ ಮಗಳಿಗೆ ಕನ್ನಡ ಎಂದು ಹೆಸರು ಇಟ್ಟಿದ್ದರು. ಕನ್ನಡ ಎಂಬ ಹೆಸರಡಿಡಲು ಪ್ರೇರಣೆಯಾಗಿರುವುದು ತಮಿಳುನಾಡು. ಆ ರಾಜ್ಯಕ್ಕೆ ಪ್ರತಾಪ್ ಅವರು ಹೋಗಿದ್ದಾಗ ಅಲ್ಲಿನ ಕೆಲವರ ಹೆಸರುಗಳನ್ನು (ತಮಿಳರಸನ್, ತಮಿಳುದೂರೈ ಇತ್ಯಾದಿ ಹೆಸರು) ಕೇಳಿ ತಮ್ಮ ಮಗುವಿಗೂ ಇದೇ ರೀತಿಯಲ್ಲಿ ಹೆಸರಿಡಬೇಕು ಎಂದು ನಿರ್ಧರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Sat, 4 March 23