
ಉಡುಪಿ, ಮಾ.21: ಎಲ್ಲೋ ನಡೆಯುತ್ತಿರುವ ಯುದ್ಧವು ಕರಾವಳಿಯ ಮೀನುಗಾರರ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಇಂದು ಮೀನುಗಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೋಟೆಲ್‌ಗಳ ಮುಚ್ಚುಗಡೆ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಪಾತಾಳಕ್ಕೆ ಕುಸಿದಿದೆ.
ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 100 ರಿಂದ 200 ರೂಪಾಯಿ ಇಳಿಕೆಯಾಗಿದೆ. ಮೀನುಗಾರ ಮಹಿಳೆಯರಿಗೆ ಅಸಲು ಕೂಡ ಸಿಗದಂತಾಗಿದ್ದು, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.ಅಡುಗೆ ಅನಿಲದ (LPG) ವ್ಯತ್ಯಯ ಮತ್ತು ಯುದ್ಧದ ಪ್ರಭಾವದಿಂದಾಗಿ ಪ್ರತಿದಿನ ಮೀನು ಊಟದ ಹೋಟೆಲ್‌ಗಳು ಮುಚ್ಚುತ್ತಿವೆ. ಹೋಟೆಲ್ ಮಾಲೀಕರು ಮಾರುಕಟ್ಟೆಗೆ ಬಾರದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಹಿವಾಟು ಸ್ಥಗಿತಗೊಂಡಿದೆ.
ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅಮಾನವೀಯ ಹಲ್ಲೆ; ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
| ಮೀನಿನ ಹೆಸರು | ಹಳೆಯ ದರ (ಪ್ರತಿ ಕೆಜಿಗೆ) | ಹೊಸ ದರ (ಪ್ರತಿ ಕೆಜಿಗೆ) | ಇಳಿಕೆಯಾದ ಮೊತ್ತ |
| ಮಾಂಜಿ (ಪಾಂಫ್ರೆಟ್) | ₹ 1550 | ₹ 1400 | ₹ 150 |
| ಅಂಜಲ್ (ಸೀ ಫಿಶ್) | ₹ 1100 | ₹ 1000 | ₹ 100 |
| ದೊಡ್ಡ ಬಂಗುಡೆ | ₹ 300 | ₹ 260 | ₹ 40 |
| ಡಿಸ್ಕೋ ಮೀನು | ₹ 180 | ₹ 140 | ₹ 40 |
| ರಾಣಿ ಮೀನು | ₹ 280 | ₹ 245 | ₹ 35 |
| ಚಿಕ್ಕ ಬಂಗುಡೆ | ₹ 210 | ₹ 180 | ₹ 30 |
| ಸಿಗಡಿ (Prawns) | ₹ 340 | ₹ 320 | ₹ 20 |
ಇಲ್ಲಿದೆ ನೋಡಿ ವಿಡಿಯೋ:
ಮಲ್ಪೆಯಿಂದ ಕೇರಳದ ಹೋಟೆಲ್‌ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮೀನು ರಫ್ತಾಗುತ್ತಿತ್ತು. ಆದರೆ ಈಗ ಕೇರಳದಲ್ಲೂ ಹೋಟೆಲ್‌ಗಳು ಬಂದ್ ಆಗಿರುವುದರಿಂದ ಮೀನಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದು ಪರೋಕ್ಷವಾಗಿ ಮೀನುಗಾರಿಕಾ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.”ಯುದ್ಧ ಮುಗಿದರೆ ಸಾಕು, ಮರಳಿ ಜೀವನ ಮೊದಲಿನಂತಾಗಲಿ” ಎಂದು ಮೀನುಗಾರ ಮಹಿಳೆಯರು ಪ್ರಾರ್ಥಿಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Sat, 21 March 26