ಒಂದ್ಕಡೆ ಕೊರೊನಾ ಕಾಟ, ಮತ್ತೊಂದ್ಕಡೆ ಅತೃಪ್ತರ ಆಟ! ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ
ಬೆಂಗಳೂರು: ರಾಜ್ಯದಲ್ಲಿ ಒಂದ್ಕಡೆ ಕೊರೊನಾ ಸ್ಫೋಟ ಆಗುತ್ತಿದ್ದರೆ ಮತ್ತೊಂದ್ಕಡೆ ರಾಜ್ಯರಾಜಕೀಯದಲ್ಲಿ ಭಿನ್ನಮತ ಸ್ಫೋಟ ಆಗುತ್ತಿದೆ. ಕೊರೊನಾದಿಂದ 2-3 ತಿಂಗಳು ಸೈಲೆಂಟ್ ಆಗಿದ್ದ ರಾಜ್ಯರಾಜಕೀಯ ಮತ್ತೆ ರಂಗು ಪಡೆದಿದೆ. ತಣ್ಣಗಾಗಿದ್ದ ಬಿಜೆಪಿ ಪಕ್ಷದೊಳಗಿನ ಭಿನ್ನಮತೀಯರ ರಾಗ ಇದೀಗ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಅತೃಪ್ತರ ಕೂಟದ ಹೊಸ ರಾಜಕೀಯ ಆಟಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ. ಬಿಜೆಪಿಯಲ್ಲಿ ಸ್ಫೋಟಗೊಂಡ ಭಿನ್ನಮತೀಯರ ಆಕ್ರೋಶ! ಯೆಸ್ ಎರಡು ತಿಂಗಳಿನಿಂದ ಕೊರೊನಾದಿಂದಲೇ ಸುದ್ದಿಯಾಗುತ್ತಿದ್ದ ಕರುನಾಡು ನಿನ್ನೆ ಮತ್ತೆ ರಾಜಕೀಯದತ್ತ […]
ಬೆಂಗಳೂರು: ರಾಜ್ಯದಲ್ಲಿ ಒಂದ್ಕಡೆ ಕೊರೊನಾ ಸ್ಫೋಟ ಆಗುತ್ತಿದ್ದರೆ ಮತ್ತೊಂದ್ಕಡೆ ರಾಜ್ಯರಾಜಕೀಯದಲ್ಲಿ ಭಿನ್ನಮತ ಸ್ಫೋಟ ಆಗುತ್ತಿದೆ. ಕೊರೊನಾದಿಂದ 2-3 ತಿಂಗಳು ಸೈಲೆಂಟ್ ಆಗಿದ್ದ ರಾಜ್ಯರಾಜಕೀಯ ಮತ್ತೆ ರಂಗು ಪಡೆದಿದೆ. ತಣ್ಣಗಾಗಿದ್ದ ಬಿಜೆಪಿ ಪಕ್ಷದೊಳಗಿನ ಭಿನ್ನಮತೀಯರ ರಾಗ ಇದೀಗ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಅತೃಪ್ತರ ಕೂಟದ ಹೊಸ ರಾಜಕೀಯ ಆಟಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಬೆಚ್ಚಿ ಬಿದ್ದಿದ್ದಾರೆ.
ಬಿಜೆಪಿಯಲ್ಲಿ ಸ್ಫೋಟಗೊಂಡ ಭಿನ್ನಮತೀಯರ ಆಕ್ರೋಶ! ಯೆಸ್ ಎರಡು ತಿಂಗಳಿನಿಂದ ಕೊರೊನಾದಿಂದಲೇ ಸುದ್ದಿಯಾಗುತ್ತಿದ್ದ ಕರುನಾಡು ನಿನ್ನೆ ಮತ್ತೆ ರಾಜಕೀಯದತ್ತ ಮುಖಮಾಡಿದೆ. ಕೊರೊನಾದಿಂದ ಬೇಸತ್ತ ರಾಜ್ಯಸರ್ಕಾರಕ್ಕೆ ಮತ್ತೆ ಸಂಚಕಾರ ಎದುರಾಗಿದೆ. ಆರಂಭದಿಂದಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತೆ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಔತಣ ಕೂಟದ ನೆಪದಲ್ಲಿ ಒಂದೆಡೆ ಸಭೆ ಸೇರಿದ್ದು, ರಾಜ್ಯಸರ್ಕಾರದ ಬುಡಕ್ಕೆ ಮತ್ತೆ ಬೆಂಕಿ ಬಿದ್ದಂತೆ ಆಗಿದೆ.
ಬಿಜೆಪಿಯಲ್ಲಿ ಅಸಮಾಧಾನ ಭುಗಿಲೇಳಲು ಕಾರಣವೇನು? ನಿಜ.. ಕೊರೊನಾ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲಿ ರಾಜ್ಯಸರ್ಕಾರದ ಬೆನ್ನಿಗೆ ನಿಲ್ಲಬೇಕಾದ ಶಾಸಕರು ರೊಚ್ಚಿಗೆದ್ದಿದ್ದು ಯಾಕೆ..ಇದ್ದಕ್ಕಿದ್ದಂತೆ ಬಿಜೆಪಿ ಶಾಸಕರು ಸಿಎಂ ವಿರುದ್ಧ ಮುನಿಸಿಕೊಂಡಿದ್ದೇಕೆ..?. 2-3 ತಿಂಗಳಿಂದ ಸೈಲೆಂಟ್ ಆಗಿದ್ದ ರಾಜ್ಯ ರಾಜಕೀಯ ಮತ್ತೆ ಯಾಕೆ ಸುದ್ದು ಮಾಡುತ್ತಿದೆ. ಬಿಜೆಪಿಯ 27 ಜನ ಶಾಸಕರು 2 ಬಾರಿ ಸಭೆ ಮಾಡಿದ್ಯಾಕೆ..? ಹೀಗಾಗಿ ಹಲವು ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ತಿವೆ.
ರಾಜ್ಯಸಭಾ ಚುನಾವಣೆಗಾಗಿ ರಾಜ್ಯದಲ್ಲಿ ‘ಕತ್ತಿ’ವರಸೆ! ಉಮೇಶ್ ಕತ್ತಿ ಈ ಮಟ್ಟದಲ್ಲಿ ನಾಯಕರನ್ನು ಒಟ್ಟುಗೂಡಿಸಲು ಕಾರಣ ರಾಜ್ಯಸಭಾ ಚುನಾವಣೆ. ಅದಕ್ಕಾಗಿ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಅಂದಹಾಗೇ ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈ ರಾಜ್ಯಸಭಾ ಚುನಾವಣೆ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಿಸಲು ಒತ್ತಡ ಹೇರುವ ಸಲುವಾಗಿ ಈ ಸಭೆ ಮೇಲೆ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ.
‘ಕತ್ತಿ’ವರಸೆಗೆ ಕಾರಣ? ಅಂದಗಾಗೇ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿ ಟಿಕೆಟ್ ಕೇಳಿದ್ರು. 2014ರ ಚುನಾವಣೆಯಲ್ಲಿ ಕೇವಲ 1300 ಮತಗಳಿಂದ ಸೋತಿದ್ರಿಂದ 2019ರಲ್ಲಿ ಟಿಕೆಟ್‌ಗಾಗಿ ಬಿಸ್‌ಎಸ್‌ವೈ ಎದುರು ರಮೇಶ್ ಕತ್ತಿ ಬೇಡಿಕೆ ಇಟ್ಟಿದ್ದರು. ಆದ್ರೆ ಆಗ ಯಡಿಯೂರಪ್ಪಗೆ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಬೇಕಾಗಿದ್ದ ಅನಿವಾರ್ಯತೆ ಇತ್ತು. ಯಾಕಂದ್ರೆ ಜೊಲ್ಲೆಗೆ ಟಿಕೆಟ್ ನೀಡಲು ಹೈಕಮಾಂಡ್‌ನಿಂದಲೂ ಒತ್ತಡ ಇತ್ತು.
ಆಗ ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ರಮೇಶ್ ಕತ್ತಿಯನ್ನು ಬಿಎಸ್‌ವೈ ಸಮಾಧಾನಿಸಿದ್ದರು. ಇದರ ನಡುವೆ ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದ್ದಂತೆ ಪ್ರಭಾಕರ್ ಕೋರೆ ಮೂರನೇ ಅವಧಿಗೆ ಟಿಕೆಟ್ ನೀಡುವಂತೆ ಸಿಎಂ ಬಿಎಸ್‌ವೈಯನ್ನ ಒತ್ತಾಯಿಸುತ್ತಿದ್ದಾರೆ. ಪ್ರಭಾಕರ್ ಕೋರೆಯವರನ್ನ ಮುಂದುವರಿಸಲು ಬಿಎಸ್ ಯಡಿಯೂರಪ್ಪಗೂ ಇಷ್ಟವಿದೆ. ಇದರ ಜೊತೆ ಹೆಚ್.ವಿಶ್ವನಾಥ್ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಕೂಡ ವಿಶ್ವನಾಥ್‌ರನ್ನ ರಾಜ್ಯಸಭಾ ಚುನಾವಣೆಗೆ ನಿಲ್ಲಿಸಲೂ ಪ್ರಯತ್ನಿಸುತ್ತಿದ್ದಾರೆ. ಪ್ರಭಾಕರ್ ಕೋರೆ ಮತ್ತು ಹೆಚ್ ವಿಶ್ವನಾಥ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ರಮೇಶ್ ಕತ್ತಿಗೆ ಟಿಕೆಟ್ ಸಿಗಲ್ಲ. ಇದನ್ನ ಅರಿತ ಕತ್ತಿ ಬ್ರದರ್ಸ್ ರಾಜ್ಯಸಭಾ ಟಿಕೆಟ್‌ಗಾಗಿ ಒತ್ತಾಯಿಸಿ, ಸಿಎಂ ಬುಡಕ್ಕೆ ಕೊಳ್ಳಿ ಇಡಲು ರೆಡಿಯಾಗಿದ್ದಾರೆ.
ಟಿಕೆಟ್‌ಗಾಗಿ ಸಿಎಂ ಸಾಕಷ್ಟು ಬೇಡಿಕೆ ಇಟ್ಟ ಕತ್ತಿಬದ್ರರ್ಸ್ ಸರ್ಕಾರದ ವಿರುದ್ಧ ಕತ್ತಿ ಮಸೆಯೋಕೆ ರೆಡಿಯಾಗಿದ್ದಾರೆ. ಮೊನ್ನೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಭೇಟಿ ಮಾಡಿದ್ದ ಉಮೇಶ್ ಕತ್ತಿ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ವಿಚಾರ ಬೇಡಿಕೆ ಇಟ್ಟಿದ್ದರು.
ಬಿಎಸ್‌ವೈ ಪ್ರಸ್ತಾವನೆಗೆ ಬೇಸರಗೊಂಡ ಕತ್ತಿ ಬ್ರದರ್ಸ್! ಹೌದು ಬಿಎಸ್‌ವೈಗೆ ಕತ್ತಿ ಬ್ರದರ್ಸ್ ಮುಂದೆ ಒಂದು ಪ್ರಸ್ತಾವನೆಯನ್ನ ಇಟ್ಟಿದ್ದಾರೆ. ಈ ಪ್ರಸ್ತಾವನೆ ಕತ್ತಿ ಬ್ರದರ್ಸ್‌ಗೆ ಇಷ್ಟವಾಗಿಲ್ಲ. ಆ ಪ್ರಸ್ತಾವನೆ ಏನಂದ್ರೆ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುತ್ತೇನೆ, ಆದ್ರೆ ರಮೇಶ್ ಕತ್ತಿಗೆ ರಾಜ್ಯಸಭೆಗೆ ಟಿಕೆಟ್ ಕೊಡುವುದಿಲ್ಲ ಅನ್ನೋದು. ಯಡಿಯೂರಪ್ಪರ ಈ ಪ್ರಸ್ತಾವನೆಯಿಂದ ಕತ್ತಿ ಬ್ರದರ್ಸ್ ಬೇಸರಗೊಂಡಿದ್ದಾರೆ.
ಜೊಲ್ಲೆ ಫ್ಯಾಮಿಲಿಗೆ ಎಲ್ಲಾ ನೀಡುವುದಾದ್ರೆ ನಮಗೆ ಯಾಕ್ ನೀಡಲ್ಲ? ಹೌದು, ಅಣ್ಣಾಸಾಹೇಬ್ ಜೊಲ್ಲೆ ಸಂಸದರಾಗಿದ್ದಾರೆ. ಪತ್ನಿ ಶಶಿಕಲಾ ಜೊಲ್ಲೆ ಶಾಸಕಿ-ಸಚಿವರೂ ಆಗಿದ್ದಾರೆ. ಹೀಗೆ ಜೊಲ್ಲೆ ಫ್ಯಾಮಿಲಿಗೆ ಎಲ್ಲವನ್ನೂ ನೀಡುವುದಾದರೆ ನಮ್ಮ ಫ್ಯಾಮಿಲಿಗೆ ಯಾಕೆ ಕೊಡೋಕೆ ಸಾಧ್ಯವಿಲ್ಲ ಎಂಬುದು ಕತ್ತಿ ಬ್ರದರ್ಸ್ ಪ್ರಶ್ನೆ. ಪ್ರಭಾಕರ್ ಕೋರೆಗೆ ಮೂರನೇ ಬಾರಿಯೂ ಟಿಕೆಟ್ ನೀಡುವುದೇ ಆದರೆ ರಮೇಶ್ ಕತ್ತಿಗೆ ಎರಡನೇ ಬಾರಿಗೆ ಯಾಕೆ ಟಿಕೆಟ್ ಕೊಡಲ್ಲ ಎಂಬುವುದು ಕತ್ತಿ ಬ್ರದರ್ಸ್ ಪ್ರಶ್ನೆ.
ಅತೃಪ್ತರನ್ನ ಒಟ್ಟಿಗೆ ಸೇರಿಸಿ ಸರ್ಕಾರದ ವಿರುದ್ಧ ‘ಕತ್ತಿ’ವರಸೆ: ಈ ಎಲ್ಲಾ ಕಾರಣದಿಂದಾಗಿ ಉತ್ತರ ಕರ್ನಾಟಕ ಭಾಗದ ಶಾಸಕರನ್ನ ಕತ್ತಿ ಬ್ರದರ್ಸ್ ಒಟ್ಟುಗೂಡಿಸಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೋಪ ಬಸನಗೌಡ ಯತ್ನಾಳ್‌ಗೆ ಇದೆ. ಹೀಗಾಗಿ ಕತ್ತಿ ಬ್ರದರ್ಸ್ ಜೊತೆ ಬಸನಗೌಡ ಯತ್ನಾಳ್ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಗುಂಪಿನಲ್ಲಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಉಳಿದ ಶಾಸಕರಿಗೂ ಯಾವುದೇ ಸಚಿವ ಸ್ಥಾನವಾಗಲೀ, ಕ್ಷೇತ್ರಗಳಿಗೆ ಕೇಳಿದಷ್ಟು ಸೂಕ್ತ ಅನುದಾನವೂ ಸಿಗುತ್ತಿಲ್ಲ.
ಬಿಎಸ್‌ವೈ ಸಿಎಂ ಆಗಿದ್ದ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ. ಈ ಕಾರಣಕ್ಕಾಗಿ ಅಸಮಾಧಾನ ವ್ಯಕ್ತಪಡಿಸಲು ಎಲ್ಲರಿಗೂ ಒಂದು ವೇದಿಕೆ ಬೇಕಿತ್ತು. ಅದನ್ನ ಕತ್ತಿ ಬ್ರದರ್ಸ್‌ಗೆ ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ಕತ್ತಿ ಬ್ರದರ್ಸ್‌ಗೆ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರ ಬೆಂಬಲ ಸಿಕ್ಕಿದೆ. ಒಟ್ನಲ್ಲಿ ಕೊರೊನಾ ಕಾಟದ ನಡುವೆ ಶಾಸಕರ ಆಟ ಶರುವಾಗಿದೆ. ಈಗ ಸ್ಟೋಟಿಸಿರುವ ಭಿನ್ನಮತಕ್ಕೆ ಯಾರ್ ಯಾರ್ ಬಲಿಯಾಗ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.
Published On - 6:19 am, Fri, 29 May 20