ರಾಜ್ಯದ ಏಕೈಕ ತೋಟಗಾರಿಕೆ ವಿವಿಗೆ ಕೊನೆಗೂ ಕುಲಪತಿ ನೇಮಕ

ರಾಜ್ಯದ ಏಕೈಕ ತೋಟಗಾರಿಕೆ ವಿವಿಗೆ ಕೊನೆಗೂ ಕುಲಪತಿ ನೇಮಕ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೊನೆಗೂ ಕುಲಪತಿ ನೇಮಕವಾಗಿದ್ದಾರೆ. 22 ತಿಂಗಳಿನಿಂದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಕೆ.ಎಂ. ಇಂದಿರೇಶ್ ಕುಲಪತಿಯಾಗಿ ನೇಮಕಗೊಂಡಿದ್ದು, ರಾಜ್ಯ ಸರ್ಕಾರದ ಶಿಫಾರಸ್ಸಿಗೆ ರಾಜ್ಯಪಾಲರು ಅಸ್ತು ಅಂದಿದ್ದಾರೆ.

ಈ ಹಿಂದೆ ಇಂದಿರೇಶ್ ನೇಮಕದ ಶಿಫಾರಸ್ಸನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಆದ್ರೆ ಎರಡನೇ ಸಲವೂ ಇಂದಿರೇಶ್ ಅವರ ಹೆಸರನ್ನೇ ಸರ್ಕಾರ ಅಂತಿಮಗೊಳಿಸಿತ್ತು. ಹೀಗಾಗಿ ರಾಜಭವನದಿಂದ ಕುಲಪತಿಗಳ ನೇಮಕ ಆದೇಶ ಹೊರಡಿಸಿದೆ.

ಡಾ. ಕೆ.ಎಂ. ಇಂದಿರೇಶ್ 22 ತಿಂಗಳಿಂದ ಪ್ರಭಾರಿ ಕುಲಪತಿ ಆಗಿದ್ದರು. 2018 ಜೂನ್ ತಿಂಗಳಿಂದ ಕುಲಪತಿ ಹುದ್ದೆ ಖಾಲಿ ಇತ್ತು. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ಡಾ.ಕೆ.ಎಂ. ಇಂದಿರೇಶ್ ನೇಮಕವಾಗಿದ್ದಾರೆ. ದೇಶದ ಮೂರನೇ ಹಾಗೂ ರಾಜ್ಯದ ಏಕೈಕ ತೋಟಗಾರಿಕೆ ವಿವಿ ಇದಾಗಿದ್ದು, ರಾಜ್ಯದಲ್ಲಿ 23 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.