ಕೋರ್ಟ್ ನಿಗಾದಲ್ಲಿ ಪಿಎಸ್ಐ ನೇಮಕಾತಿ ಹಗರಣ ತನಿಖೆ ಹೊಣೆಯನ್ನು ಸಿಐಡಿ ಡಿಜಿಪಿಗೆ ವಹಿಸಿದ ರಾಜ್ಯ ಹೈಕೋರ್ಟ್

PSI Recruitment scam: ಪ್ರಕರಣದಲ್ಲಿ ಸಚಿವರಾಗಿರಲೀ, ಅಧಿಕಾರಿಗಳಾಗಿರಲಿ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್. ಸಂಧುರಿಗೆ ಹೈಕೋರ್ಟ್ ತಾಕೀತು ಮಾಡಿದೆ. ಜುಲೈ 7ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದೂ ಹೈಕೋರ್ಟ್​ ಖಡಕ್ ಆಗಿ ಸೂಚಿಸಿದೆ.

ಕೋರ್ಟ್ ನಿಗಾದಲ್ಲಿ ಪಿಎಸ್ಐ ನೇಮಕಾತಿ ಹಗರಣ ತನಿಖೆ ಹೊಣೆಯನ್ನು ಸಿಐಡಿ ಡಿಜಿಪಿಗೆ ವಹಿಸಿದ ರಾಜ್ಯ ಹೈಕೋರ್ಟ್
ಸಿಐಡಿ ಡಿಜಿಪಿ ಪಿ.ಎಸ್. ಸಂಧು CID DGP Pavanjeet Singh Sandhu, IPS
TV9kannada Web Team

| Edited By: sadhu srinath

Jun 30, 2022 | 4:31 PM

ಬೆಂಗಳೂರು: ಪಿಎಸ್ಐ (PSI Recruitment scam) ನೇಮಕಾತಿ ಹಗರಣದಲ್ಲಿ ಹಲವರ ಮೇಲೆ ಆರೋಪಗಳಿವೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳಿದ್ದಾರೆ. ಹೀಗಾಗಿ ಸಮರ್ಪಕ ತನಿಖೆ ನಡೆಯುವ ಅವಶ್ಯಕತೆಯಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಹಾಗಾಗಿ ಪಿಎಸ್ಐ ನೇಮಕಾತಿ ಹಗರಣದಲ್ಲಿ‌ ಸಮರ್ಪಕ ತನಿಖೆ ನಡೆಸಿ ಎಂದು ಸಿಐಡಿ ಡಿಜಿಪಿ ಪಿ.ಎಸ್. ಸಂಧು ಅವರಿಗೆ (CID DGP Pavanjeet Singh Sandhu, IPS) ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಜಾಮೀನು ಕೋರಿ ಆರೋಪಿಗಳ ಅರ್ಜಿ ವಿಚಾರಣೆ ವೇಳೆ ಸಿಐಡಿ ಡಿಜಿಪಿಗೆ ಹೈಕೋರ್ಟ್ ಈ ಸೂಚನೆ ನೀಡಿದೆ.

ಪಿಎಸ್ಐ ನೇಮಕದಲ್ಲೇ ಭ್ರಷ್ಟಾಚಾರ ಗಂಭೀರ ವಿಚಾರವಾಗಿದೆ. ಸತ್ಯಸಂಗತಿ ತನಿಖೆಯಿಂದ ಹೊರಬೀಳಬೇಕು. ಕೋರ್ಟ್ ಪ್ರಕರಣದ ತನಿಖೆಯ ನಿಗಾ ವಹಿಸಲಿದೆ. ಪ್ರಕರಣದಲ್ಲಿ ಸಚಿವರಾಗಿರಲೀ, ಅಧಿಕಾರಿಗಳಾಗಿರಲಿ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್. ಸಂಧುರಿಗೆ ಹೈಕೋರ್ಟ್ ತಾಕೀತು ಮಾಡಿದೆ. ಜುಲೈ 7ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದೂ ಹೈಕೋರ್ಟ್​ ಖಡಕ್ ಆಗಿ ಸೂಚಿಸಿದೆ.

ಇದನ್ನೂ ಓದಿ:

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಹೈ ಟೆನ್ಷನ್ ತಂತಿ : 8 ಮಂದಿ ಸಾವು

ಇದನ್ನೂ ಓದಿ:

Justice Alok Aradhe: ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನಿವೃತ್ತಿ ಹಿನ್ನೆಲೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada