ದೇಶದಲ್ಲಿ ಮೋದಿ ಯುಗ ಇದೆ, ಎಚ್.ಡಿ.ದೇವೇಗೌಡ ಯುಗ ಮುಗಿದಿದೆ ಎಂದು ಪರೋಕ್ಷವಾಗಿ ಹೇಳಿದ ಕೇಂದ್ರ ಸಚಿವ ಕೃಷ್ಣಪಾಲ್
ಭಾರತದಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಯುಗ ಇದೆ ಎಂದು ಕೇಂದ್ರದ ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಹೇಳಿದ್ದಾರೆ. ಆ ಮೂಲಕ ಎಚ್.ಡಿ.ದೇವೇಗೌಡ ಅವರ ಯುಗ ಮುಗಿದಿದೆ ಎಂದು ಪರೋಕ್ಷವಾಗಿ ಹೇಳಿದರು.
ಹಾಸನ: ಎಲ್ಲಾ ಪಕ್ಷದ ನಾಯಕರಿಗೂ ಒಂದೊಂದು ಕಾಲ ಇರುತ್ತದೆ, ಭಾರತದಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಯುಗ ಇದೆ ಎಂದು ಕೇಂದ್ರದ ಭಾರಿ ಕೈಗಾರಿಕಾ ಖಾತೆ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್ (Krishan Pal Gurjar) ಹೇಳಿದ್ದಾರೆ. ಆ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D.Devegowda) ಅವರ ಯುಗ ಮುಗಿದಿದೆ ಎಂದು ಪರೋಕ್ಷವಾಗಿ ಹೇಳಿದ ಕೇಂದ್ರ ಸಚಿವರು, ದೇವೇಗೌಡರ ಮೇಲೆ ನಮಗೆ ಅಪಾರ ಗೌರವ ಇದೆ ಎಂದರು. ದೇಶದಲ್ಲಿ ಪ್ರಧಾನಿ ಮೋದಿ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ. ನಮಗೆ ಎಲ್ಲಾ ಕ್ಷೇತ್ರಗಳು ಬಹುಮುಖ್ಯ. ಅದರಂತೆ ಹಾಸನ ಕೂಡ ಮೋದಿ ಜೋಳಿಗೆಗೆ ಸೇರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PSI Recruitment Scam: ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ, ಡಿಕೆಶಿ ಆಗ್ರಹ
ಹಾಸನದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಂಘಟನಾತ್ಮಕ ಪ್ರವಾಸ ಮಾಡಲಿದ್ದೇನೆ. ಪಕ್ಷ ಸಂಘಟನೆ, ಮೂರು ದಿನಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪರಿಶಿಲನೆ, ಯೋಜನೆಗಳ ಫಲಾನುಭವಿಗಳ ಜೊತೆಗೆ ಚರ್ಚೆ ನಡೆಸಲಿದ್ದೇನೆ, ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು, ಚುನಾಯಿತ ಸದಸ್ಯರ ಜೊತೆ ಚರ್ಚೆ ಮಾಡಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಮಾಡಿರೊ ತಯಾರಿಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ದೇಶಕ್ಕೆ ವಿವೇಕಾನಂದರು ಹೇಗೆ ಜಗತ್ತಿನಲ್ಲಿ ಗೌರವ ತಂದುಕೊಟ್ಟರೋ ಹಾಗೆ ಮೋದಿಯವರು ಇಂದು ದೇಶದ ಗೌರವ ಹೆಚ್ಚಿಸಿದ್ದಾರೆ. ದೇಶದಲ್ಲಿ ಎಂಟು ವರ್ಷಗಳಲ್ಲಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಬಲವಾಗಿದೆ. ದೇಶದ ಕಾಂಗ್ರೆಸ್ನಲ್ಲಿ ನಾಯಕತ್ಚವೇ ಇಲ್ಲದಂತಾಗಿದೆ, ದೇಶದಲ್ಲಿ ಕಾಂಗ್ರೆಸ್ ಉಳಿದಿಲ್ಲ, ಅವರಲ್ಲಿ ನೀತಿಯೂ ಇಲ್ಲ, ನೇತೃತ್ವವೂ ಇಲ್ಲ ಎಂದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರ ದಲ್ಲಿ ಮುಳುಗಿದೆ ಎಂಬ ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವರು, ಎಂಟು ವರ್ಷಗಳ ಹಿಂದೆ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆದು ದೊಡ್ಡ ದೊಡ್ಡ ಸಚಿವರೇ ಜೈಲಿಗೆ ಹೋಗಿದ್ದರು. ಆದರೆ ಕಳೆದ ಎಂಟು ವರ್ಷಗಳಲ್ಲಿ ಯಾರೂ ಜೈಲಿಗೆ ಹೋಗಿಲ್ಲ, ಯಾವುದೇ ಅರೋಪ ಕೂಡ ಇಲ್ಲ ಎಂದರು.
ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ; ಸಿಎಂ ಬೊಮಾಯಿ ಹೇಳಿದ್ದೇನು?
ಕೊರೋನಾ ಕಾರಣದಿಂದ ಜಗತ್ತಿನಲ್ಲಿ ಸಂಕಷ್ಟ ಇದ್ದರೂ ಭಾರತದಲ್ಲಿ ಆರ್ಥಿಕತೆ ದೃಡವಾಗಿದೆ. ನಮ್ಮ ಆರ್ಥಿಕ ನೀತಿಗಳ ಕಾರಣದಿಂದ ಹಣದುಬ್ಬರ ಕೂಡ ನಿಯಂತ್ರಣದಲ್ಲಿದೆ ಎಂದರು. ಕಾಂಗ್ರೆಸ್ ನಾಯಕರ ವಿರುದ್ದ ಸಿಬಿಐ ಇಡಿ ಐಟಿ ದುರ್ಬಳಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನು ಯಾವತ್ತೂ ತನ್ನ ಕೆಲಸವನ್ನು ಮಾಡುತ್ತದೆ. ಅವರು ಸರಿಯಾಗಿ ಇದ್ದರೆ, ಅವರು ಭ್ರಷ್ಟಾಚಾರ ಮಾಡಿಲ್ಲ ಎಂದಾದರೆ ಹೆದರುವುದು ಯಾಕೆ? ಮೋದಿಯವರು ಕೂಡ ಇಂತಹ ಸನ್ನಿವೇಶವನ್ನು ಒಬ್ಬರೇ ಎದುರಿಸಿಲ್ಲವೇ ಎಂದು ಹೇಳಿದರು.
ಮೋದಿ ಮುಖ್ಯಮಂತ್ರಿ ಆಗಿದ್ದಾಗ ಸಿಬಿಐನವರು 10 ರಿಂದ 12 ಗಂಟೆ ವಿಚಾರಣೆ ನಡೆಸಿದ್ದರು. ಅವರು ಒಬ್ಬರೇ ವಿಚಾರಣೆಗೆ ಹೋಗುತ್ತಿದ್ದರು, ಪ್ರಶ್ನೆಗಳಿಗೆ ಉತ್ತರ ಕೊಟ್ಟು ತನಿಖೆ ಎದುರಿಸಿದ್ದರು, ಮೋದಿಯವರು ಜನರನ್ನು ತಮ್ಮೊಟ್ಟಿಗೆ ಕರೆದೊಯ್ಯಲಿಲ್ಲ, ನಮ್ಮ ಪಕ್ಷ ಅದರ ಬಗ್ಗೆ ಹೋರಾಟ ಮಾಡಲಿಲ್ಲ, ಹಲವು ವರ್ಷಗಳು ಅವರಿಗೆ ತನಿಖೆ ಹೆಸರಿನಲ್ಲಿ ತೊಂದರೆ ಕೊಟ್ಟರು, ಈಗ ಎಲ್ಲವೂ ಸುಪ್ರಿಂ ಕೊರ್ಟ್ನಿಂದಲೇ ಆರೋಪ ಮುಕ್ತರಾಗಿದ್ದಾರೆ. ಓರ್ವ ಮುಖ್ಯಮಂತ್ರಿಯಾಗಿದ್ದರೂ ಮೋದಿಯವರನ್ನ ಸಿಬಿಐ 18, 18 ಗಂಟೆ ಕೂರಿಸಿದ್ದರಲ್ಲ? ಆದರೆ ಈಗ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಯಾಕೆ ಹೆದರಿಕೆ ಆಗುತ್ತಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್ ನಿವಾಸದ ಮುಂದೆ ಬೆಂಬಲಿಗರಿಂದ ಹೈಡ್ರಾಮ! ಎಸಿಬಿ ದಾಳಿಗೆ ನಿಖರ ಕಾರಣ ಇಲ್ಲಿದೆ
Published On - 1:18 pm, Tue, 5 July 22