Draupadi murmu: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ
Pralhad Joshi: ರಾಷ್ಟ್ರಪತಿ ಮುರ್ಮು ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಸೌಜನ್ಯಯುತ ಭೇಟಿ ಮಾಡಿದರು.
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು (President Draupadi murmu) ರಾಷ್ಟ್ರಪತಿ ಭವನದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಇಂದು ಬುಧವಾರ ಭೇಟಿ ಮಾಡಿದರು. ರಾಷ್ಟ್ರಪತಿ ಮುರ್ಮು ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಸೌಜನ್ಯಯುತ ಭೇಟಿ ಮಾಡಿದರು.
ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.
Called on Adaraneeya Rashtrapati, Smt. Draupadi Murmu ji at Rashtrapati Bhavan
ಇಂದು ರಾಷ್ಟ್ರಪತಿ ಭವನದಲ್ಲಿ ಆದರಣೀಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಾಯಿತು.
आदरणीय राष्ट्रपति श्रीमती द्रौपदी मुर्मू जी से राष्ट्रपति भवन में भेंट की.@rashtrapatibhvn pic.twitter.com/kZ3CZNhcSB
— Pralhad Joshi (@JoshiPralhad) August 10, 2022
ರಾಷ್ಟ್ರಪತಿ ಮುರ್ಮು ಅವರ ವಿಚಾರವಾಗಿ ಪ್ರತಿಪಕ್ಷದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌದರಿ ಅವರ ವಿವಾದಾತ್ಮಕ ಹೇಳಿಕೆಯನ್ನ ಲೋಕಸಭೆಯಲ್ಲಿ ಖಂಡಿಸಿದ್ದ ಪ್ರಲ್ಹಾದ್ ಜೋಶಿ ಅವರು, ಸಂಸದೀಯ ನಡವಳಿಕೆಯನ್ನ ಪಾಲಿಸಲು ಕೈ ನಾಯಕರಿಗೆ ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ್ದರು.
ಬುಡಕಟ್ಟು ಮಹಿಳೆ ರಾಷ್ಟ್ರಪತಿ ಹುದ್ದೆಗೇರಿರುವುದು ಹೆಮ್ಮೆ ಪಡುವಂತ ಸಂಗತಿ. ಕಾಂಗ್ರೆಸ್ ರಾಷ್ಟ್ರಪತಿಗಳ ಬಗ್ಗೆ ಗೌರವದಿಂದ ಮಾತನಾಡುವುದನ್ನ ಕಲಿಯಲಿ ಎಂದು ತಿಳಿ ಹೇಳುವುದರ ಜತೆಗೆ ಮುರ್ಮು ಅವರ ಪರವಾಗಿ ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದ್ದರು.