ಇದು ನಮ್ಮ ಹೆಮ್ಮೆ! ರಾಜ್ಯಸಭೆಯಲ್ಲಿ ವೆಂಕಯ್ಯನಾಯ್ಡುಗೆ ಬೀಳ್ಕೊಡುಗೆ : ಕನ್ನಡದಲ್ಲಿ ಭಾಷಣ ಮಾಡಿ, ಶುಭ ಹಾರೈಸಿದ ಸಚಿವ ಪ್ರಲ್ಹಾದ ಜೋಶಿ

Pralhad Joshi: ವೆಂಕಯ್ಯ ನಾಯ್ಡು ಸರಳ ಸ್ವಭಾವ, ಬೆಂಗಳೂರಿಗೆ ಬಂದ್ರೆ ಚಿಕ್ಕದಾದ ಜನಾರ್ದನ ಹೋಟೆಲ್‌ಗೆ ಹೋಗುವ ಅವರ ಸರಳತೆ, ಯಾವ ಹುದ್ದೆಯಲ್ಲಿದ್ರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನೂ ಪ್ರಶಂಸಿಸಿದರು. ದಣಿವರಿಯದ ನಾಯಕರಾದ ನಿಮ್ಮ ಮಾರ್ಗದರ್ಶನ ನಮಗೆ ಬೇಕು ಎಂದು ವೆಂಕಯ್ಯ ನಾಯ್ಡುಗೆ ಜೋಶಿ ಅವರು ಇದೇ ವೇಳೆ ತುಂಬು ಹೃದಯದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

ಇದು ನಮ್ಮ ಹೆಮ್ಮೆ! ರಾಜ್ಯಸಭೆಯಲ್ಲಿ ವೆಂಕಯ್ಯನಾಯ್ಡುಗೆ ಬೀಳ್ಕೊಡುಗೆ : ಕನ್ನಡದಲ್ಲಿ ಭಾಷಣ ಮಾಡಿ, ಶುಭ ಹಾರೈಸಿದ ಸಚಿವ ಪ್ರಲ್ಹಾದ ಜೋಶಿ
ರಾಜ್ಯಸಭೆಯಲ್ಲಿ ವೆಂಕಯ್ಯನಾಯ್ಡುಗೆ ಬೀಳ್ಕೊಡುಗೆ -ಕನ್ನಡದಲ್ಲಿ ಭಾಷಣ ಮಾಡಿ, ಶುಭ ಹಾರೈಸಿದ ಸಚಿವ ಪ್ರಲ್ಹಾದ ಜೋಶಿ
TV9kannada Web Team

| Edited By: sadhu srinath

Aug 08, 2022 | 6:50 PM

ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (Venkaiah Naidu) ಅವರಿಗೆ ಇಂದು ಭಾವನಾತ್ಮಕ ಕ್ಷಣಗಳು, ಭಾವುಕ ದಿನ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರು ಆಯ್ಕೆ ಆದ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಇಂದು ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಕೊನೆಯ ದಿನದ ಕಲಾಪ ನಡೆಸಿದರು. ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಯ (Rajya Sabha) ಹಲವು ಸದಸ್ಯರು ವೆಂಕಯ್ಯ ನಾಯ್ಡು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವಿಶೇಷವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Parliamentary Affairs Minister Pralhad Joshi) ಅವರು ಕನ್ನಡದಲ್ಲಿಯೇ ( Kannada) ಭಾಷಣ ಮಾಡಿ, ವೆಂಕಯ್ಯ ನಾಯ್ಡು ಸೇರಿದಂತೆ ಎಲ್ಲ ಸದಸ್ಯರ ಗಮನ ಸೆಳೆದರು.

ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ ಪ್ರಲ್ಹಾದ ಜೋಶಿಯವರು, ಕರ್ನಾಟಕದ ಜತೆಗಿನ ವೆಂಕಯ್ಯ ನಾಯ್ಡು ಅವರ ಬಾಂಧವ್ಯ, ಮಾತೃ ಭಾಷೆ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರಾಸಬದ್ಧ ಭಾಷಣ, ವಿಶೇಷವಾಗಿ ದಕ್ಷಿಣ ಭಾರತದ ಡ್ರೆಸ್‌ ಕೋಡ್‌ ಪಾಲನೆಯಲ್ಲಿ ವೆಂಕಯ್ಯ ನಾಯ್ಡು ಅವರ ಶಿಸ್ತಿನ ಬಗ್ಗೆ ಜೋಶಿ ಸ್ಮರಿಸಿದರು.

ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ – ಕನ್ನಡದಲ್ಲಿ ಭಾಷಣ ಮಾಡಿ, ಶುಭ ಹಾರೈಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾಪತಿಯಾಗಿ ಸದನದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸುಮಾರು 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ರಾಜ್ಯಸಭೆಯಲ್ಲಿ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ವಂದನಾ ಭಾಷಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ನಾಯ್ಡು ಅವರು ಹಾಕಿದ್ದ ಮೇಲ್ಪಂಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ವೆಂಕಯ್ಯ ನಾಯ್ಡು ಸರಳ ಸ್ವಭಾವ, ಬೆಂಗಳೂರಿಗೆ ಬಂದ್ರೆ ಚಿಕ್ಕದಾದ ಜನಾರ್ದನ ಹೋಟೆಲ್‌ಗೆ ಹೋಗುವ ಅವರ ಸರಳತೆ, ಯಾವ ಹುದ್ದೆಯಲ್ಲಿದ್ರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನೂ ಪ್ರಶಂಸಿಸಿದರು. ದಣಿವರಿಯದ ನಾಯಕರಾದ ನಿಮ್ಮ ಮಾರ್ಗದರ್ಶನ ನಮಗೆ ಬೇಕು ಎಂದು ವೆಂಕಯ್ಯ ನಾಯ್ಡುಗೆ ಜೋಶಿ ಅವರು ಇದೇ ವೇಳೆ ತುಂಬು ಹೃದಯದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada