ಹುಬ್ಬಳ್ಳಿ, (ನವೆಂಬರ್ 26) : ನಾಳೆ(ನವೆಂಬರ್ 27) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (pralhad joshi) ಜನ್ಮದಿನ(Birthday). ಆದ್ರೆ, ಅವರು ನಾಳೆ ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ. ಸಂಸತ್ ಚಳಿಗಾಲದ ಅಧಿವೇಶನದ ಪೂರ್ವ ಸಭೆಯಲ್ಲಿ ಭಾಗವಹಿಸಿದ್ದರಿಂದ ಅವರು ಕ್ಷೇತ್ರದ ಕಾರ್ಯಕರ್ತರನ್ನು ಹಾಗೂ ಮುಖಂಡರ ಭೇಟಿಗೆ ಸಿಗುವುದಿಲ್ಲ. ಹೀಗಾಗಿ ಹೂಗುಚ್ಚ, ಉಡುಗೊರೆ ತೆಗೆದುಕೊಂಡು ಕಚೇರಿಗೆ ಬರುವುದು ಬೇಡ ಎಂದು ತಮ್ಮ ಹಿತೈಷಿಗಳಿಗೆ ಮನವಿ ಮಾಡಿದ್ದಾರೆ.
ಡಿಸೆಂಬರ್ ನಾಲ್ಕರಿಂದ ಸಂಸತ್ ನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ಅಧಿವೇಶನದ ಪೂರ್ವಭಾವಿ ತಯಾರಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸಚಿವರು ತಮ್ಮ ಜನ್ಮದಿನವಾದ ನವೆಂಬರ್ 27 ರಂದು ಹುಬ್ಬಳ್ಳಿಯ ಸಂಸದರ ಕಛೇರಿ ಹಾಗೂ ಗೃಹ ಕಛೇರಿಯಲ್ಲಿ ಭೇಟಿಯಾಗೆ ಲಭ್ಯವಿರುವುದಿಲ್ಲ. ಹೀಗಾಗಿ ಈ ಬಗ್ಗೆ ವಿಶೇಷ ಮನವಿಯ ಸಂದೇಶ ನೀಡಿರುವ ಸಚಿವರು, ನಾಳೆ ಜನ್ಮದಿನ ಎಂಬ ಹಿನ್ನಲೆಯಲ್ಲಿ ಕ್ಷೇತ್ರದ ಜನರು ಹೂಗುಚ್ಚ, ಉಡುಗೊರೆ ತೆಗೆದುಕೊಂಡು ಬರುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಶುಭಾಶಯಕೋರುವ ಬ್ಯಾನರ್, ಹೋರ್ಡಿಂಗ್ಸ್, ಕಟೌಟ್ ಮುಂತಾದವುಗಳಿಗೆಂದು ಅನಾವಶ್ಯಕ ವೆಚ್ಚಮಾಡಬಾರದೆಂದು ವಿನಂತಿ ಮಾಡಿದ್ದು, ಕ್ಷೇತ್ರದ ಜನರ ಶುಭಹಾರೈಕೆ ಹಾಗೂ ಆಶೀರ್ವಾದವೇ ತನಗೆ ಶ್ರೀರಕ್ಷೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ