ಕೊಡಗು ಸಂಸ್ಕೃತಿಯ ಅನಾವರಣ; ವಿಶಿಷ್ಟ ಸ್ಪರ್ಧೆಯ ಮೂಲಕ ಯುವ ಪಿಳಿಗೆಗೆ ಸಂಪ್ರದಾಯವನ್ನು ತಿಳಿಸುವ ಪ್ರಯತ್ನ

| Updated By: ganapathi bhat

Updated on: Apr 05, 2021 | 8:38 PM

ಪ್ರಕೃತಿ, ನದಿ, ಕಾಡು ಮೇಡುಗಳನ್ನೇ ದೇವರೆಂದು ಆರದಾಧಿಸುವ ವಿಶಿಷ್ಟ ಜಿಲ್ಲೆ ಇದು. ಹಾಗಾಗಿ ನಾಪೋಕ್ಲು ಗ್ರಾಮ ವ್ಯಾಪ್ತಿಯ ವಿವಿಧ ಕೊಡವ ಕುಟುಂಬಗಳ ಮಧ್ಯೆ ಸಾಂಸ್ಕೃತಿಕ ಪೈಪೋಟಿ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಉಮ್ಮತ್ತಾಟ್ ಸ್ಪರ್ಧೆ ನಡೆದರೆ, ಪುರುಷರಿಗೆ ಕೋಲಾಟ್, ಪರೆಕಳಿ ಸ್ಪರ್ಧೆ ನಡೆಯಿತು.

ಕೊಡಗು ಸಂಸ್ಕೃತಿಯ ಅನಾವರಣ; ವಿಶಿಷ್ಟ ಸ್ಪರ್ಧೆಯ ಮೂಲಕ ಯುವ ಪಿಳಿಗೆಗೆ ಸಂಪ್ರದಾಯವನ್ನು ತಿಳಿಸುವ ಪ್ರಯತ್ನ
ಕೊಡವ ಸಂಸ್ಕೃತಿಯ ಪ್ರದರ್ಶನ
Follow us on

ಕೊಡಗು: ವಿಶಿಷ್ಟ ಸಂಸ್ಕೃತಿಗಳ ತವರೂರು ಎಂದರೆ ಅದು ಕೊಡಗು. ಗ್ರಾಮ ಗ್ರಾಮಗಳ ಮಧ್ಯೆ ಈ ಸಂಸ್ಕೃತಿಗಳ ಪ್ರದರ್ಶನಕ್ಕೆ ಬಹುದೊಡ್ಡ ಸ್ಪರ್ಧೆಯೇ ನಡೆಯುತ್ತದೆ. ಅಂತಹ ಒಂದು ಅತ್ಯಾಕರ್ಷಕ ಸಾಂಸ್ಕೃತಿಕ ಸ್ಪರ್ಧೆಗೆ ಮಂಜಿನ ನಗರಿ ವೇದಿಕೆಯಾಗಿದೆ. ಕಾವೇರಮ್ಮೆ ದೇವಿ ತಾಯಿ ಕಾಪಾಡೆಂ ಎಂದು ಜೀವ ನದಿ ಕಾವೇರಿಯನ್ನ ಸ್ತುತಿಸುತ್ತಾ ಕೈಯಲ್ಲಿ ತಾಳ ಹಿಡಿದು ದೀಪದ ಸುತ್ತ ನೃತ್ಯ ಮಾಡುತ್ತ ತಮ್ಮ ಸಂಸ್ಕೃತಿಯ ಪ್ರದರ್ಶನವನ್ನು ಮಾಡಲಾಯಿತು.

ಕೊಡಗು ಜಿಲ್ಲೆಯ ಈ ವಿಶಿಷ್ಟ ಸಂಸ್ಕೃತಿ ಅನಾವರಣಗೊಂಡಿದ್ದು, ಮಡಿಕೇರಿ ಆಲ್ಲೂಕಿಬನ ನಾಪೋಕ್ಲು ಗ್ರಾಮದಲ್ಲಿ. ಕೊಡಗು ಜಿಲ್ಲೆಯ ಸಾಂಸ್ಕೃತಿಕ ವೈಭವವೇ ಅಂತಹದ್ದು. ಪ್ರಕೃತಿ, ನದಿ, ಕಾಡು ಮೇಡುಗಳನ್ನೇ ದೇವರೆಂದು ಆರದಾಧಿಸುವ ವಿಶಿಷ್ಟ ಜಿಲ್ಲೆ ಇದು. ಹಾಗಾಗಿ ನಾಪೋಕ್ಲು ಗ್ರಾಮ ವ್ಯಾಪ್ತಿಯ ವಿವಿಧ ಕೊಡವ ಕುಟುಂಬಗಳ ಮಧ್ಯೆ ಸಾಂಸ್ಕೃತಿಕ ಪೈಪೋಟಿ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಉಮ್ಮತ್ತಾಟ್ ಸ್ಪರ್ಧೆ ನಡೆದರೆ, ಪುರುಷರಿಗೆ ಕೋಲಾಟ್, ಪರೆಕಳಿ ಸ್ಪರ್ಧೆ ನಡೆಯಿತು.

ಮಹಿಳೆಯರು ಸಾಂಪ್ರದಾಯಿಕ ಸೀರೆ ಉಟ್ಟು ಈ ಸ್ಪರ್ಧೆಯಲ್ಲಿ ಮಿಂಚುತ್ತಿದ್ದರೆ, ಪುರುಷರು ಕುಪ್ಯಚಾಲೆ ಎಂಬ ನಿಲುವಂಗಿ ಧರಿಸಿ ತಮ್ಮ ಗತ್ತು ಗಾಂಭೀರ್ಯವನ್ನು ಪ್ರದರ್ಶಿಸಿದರು. ತಮ್ಮ ಪೂರ್ವಜರ ಕಾಲದಿಂದಲೇ ಉಳಿದು ಬೆಳೆದು ಬಂದಿರುವ ಈ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗಕ್ಕೆ ಕಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ ಜನಾಂಗ ಕೂಡ ಬಹಳ ಆಸಕ್ತಿಯಿಂದ ನಮ್ಮ ಸಂಸ್ಕೃತಿಯನ್ನ ಕಲಿತು ಎಲ್ಲರ ಎದುರು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಹಿಂದಿನ ಯುದ್ಧ ಕಲೆಯನ್ನ ಪ್ರತಿಬಿಂಬಿಸುವ ಪರೆ ಎಂಬ ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳು ಕೋಲು ಹಿಡಿದು ಯುದ್ಧ ಸಾಹಸ ಪ್ರದರ್ಶಿಸಿದರು.

ಕೊಡವ ನೃತ್ಯ ಪ್ರದರ್ಶನ

ಆಧುನಿಕತೆಯ ಬರಾಟೆಯಲ್ಲಿ ಇಂದು ಸಾಂಪ್ರದಾಯಿಕ ಆಚರಣೆಗಳು , ಸಂಸ್ಕೃತಿಗಳು ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಈ ಬಗೆಯ ಕಾರ್ಯಕ್ರಗಳು ಹೊಸ ಪೀಳಿಗೆಗೆ ಪುರಾತನ ಸಂಸ್ಕೃತಿಗಳನ್ನ ಪರಿಚಯಿಸುವಲ್ಲಿ ನೆರವಾಗುತ್ತಿವೆ. ಹಾಗಾಗಿ ಈ ತರಹದ ಕಾರ್ಯಮಗಳು ಮತ್ತಷ್ಟು ಆಯೋಜನೆಯಾಗಬೇಕು ಎಂಬುದು ಆ ಭಾಗದ ಜನರ ಒತ್ತಾಸೆ.

ಪರೆ ಎಂಬ ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳು ಕೋಲು ಹಿಡಿದು ಯುದ್ಧ ಸಾಹಸ ಪ್ರದರ್ಶನ ಮಾಡುತ್ತಿರುವ ದೃಶ್ಯ

ಇದನ್ನೂ ಓದಿ: ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 114ನೇ ಹುಟ್ಟುಹಬ್ಬ: ಗದ್ದುಗೆ ಪೂಜೆ, ಮಕ್ಕಳ ನಾಮಕರಣದ ಮೂಲಕ ಸರಳ ಆಚರಣೆ

ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ‘ ಮಾತಾಡಿದ್ದಾರೆ, ಇದು ಹೊಲಸುತನದ ಪರಮಾವಧಿ: ಕರ್ನಾಟಕ ಕಾಂಗ್ರೆಸ್

(unique competition to convey kodava traditions to youths in kodagu)