Tv9 Digital Live| ಕೊರೊನಾ ನಡುವೆ ಐಪಿಎಲ್: ತಜ್ಞರ ಅಭಿಪ್ರಾಯಗಳು ಇಲ್ಲಿವೆ
ಕೊರೊನಾದ ಕರಿ ನೆರಳು ಐಪಿಎಲ್ ಟೂರ್ನಮೆಂಟ್ ಮೇಲೆ ಬೀಳುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಹಲವು ಕ್ರಿಕೆಟ್ ಆಟಗಾರರಿಗೆ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಈ ಸಂಕಷ್ಟದ ನಡುವೆ ಐಪಿಎಲ್ ಟೂರ್ನಮೆಂಟ್ನ ಹೇಗೆ ನಡೆಸಲಾಗುತ್ತದೆ.

ಬೆಂಗಳೂರು: ಕೊರೊನಾ ಕಡಿಮೆಯಾಯಿತು ಎಂದು ಯೋಚಿಸುವ ಹೊತ್ತಿಗೆ ಮಹಾಮಾರಿ ಕೊರೊನಾ ಎರಡನೇ ಅಲೆ ಶುರುವಾಗಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಅರ್ಭಟ ಜೋರಾಗಿದ್ದು, ಇದರ ಸಾಲಿಗೆ ಕರ್ನಾಟಕವೂ ಸೇರಿದೆ. ಇದಕ್ಕೆ ಅನಿವಾರ್ಯವಾದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಅದೇನೇ ಇರಲಿ.. ಈಗ ಇಡೀ ದೇಶದ ಜನರು ಎನ್ನುವುದಕ್ಕಿಂತ ಇಡೀ ವಿಶ್ವದ ಕ್ರಿಕೆಟ್ ಪ್ರಿಯರು ಕಾತೂರದಿಂದ ಐಪಿಎಲ್ಗೆ ಕಾಯುತ್ತಿದ್ದಾರೆ. ಏಪ್ರಿಲ್ 9 ರಿಂದ ಈ ಐಪಿಎಲ್ ಟೂರ್ನಮೆಂಟ್ ಭಾರತದಲ್ಲಿ ನಡೆಯುತ್ತದೆ. ಆದರೆ ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ಕೊರೊನಾದ ಕರಿ ನೆರಳು ಐಪಿಎಲ್ ಟೂರ್ನಮೆಂಟ್ ಮೇಲೆ ಬೀಳುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಹಲವು ಕ್ರಿಕೆಟ್ ಆಟಗಾರರಿಗೆ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಈ ಸಂಕಷ್ಟದ ನಡುವೆ ಐಪಿಎಲ್ ಟೂರ್ನಮೆಂಟ್ನ ಹೇಗೆ ನಡೆಸಲಾಗುತ್ತದೆ. ಕೆಲವೊಂದು ಕಟ್ಟು ನಿಟ್ಟಿನ ನಿಯಮಗಳು ಆಟಗಾರರ ಮನಸ್ಥಿತಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಯನ್ನು ಆಧಾರವಾಗಿಸಿಕೊಂಡು ಇಂದಿನ (ಏಪ್ರಿಲ್ 5) ಡಿಜಿಟಲ್ ಲೈವ್ನಲ್ಲಿ ಚಿರ್ಚಿಸಲಾಯಿತು. ಚರ್ಚೆಯಲ್ಲಿ ಹಿರಿಯ ಕ್ರೀಡಾ ಪತ್ರಕರ್ತರಾಗಿರುವ ಜೋಸೆಫ್ ಹೂವರ್, ಕ್ರಿಕೆಟ್ ಕೋಚ್ ಆಗಿರುವ ಟಿ.ನಸಿರುದ್ದೀನ್ ಭಾಗಿಯಾಗಿದ್ದರು. ಈ ಚರ್ಚೆಯನ್ನು ನಿರೂಪಕ ಮಾಲ್ತೇಶ್ ಜಾನಗಲ್ ನಡೆಸಿಕೊಟ್ಟರು.
ಚರ್ಚೆಯ ಮೊದಲಿಗೆ ನಿರೂಪಕ ಮಾಲ್ತೇಶ್ ಏಪ್ರಿಲ್ 9ರಿಂದ ಐಪಿಎಲ್ ಆರಂಭವಾಗುತ್ತಿದೆ. ಆದರೆ ಕೊರೊನಾ ನಡುವೆ ಟೂರ್ನಮೆಂಟ್ ಆರಂಭವಾಗುತ್ತದೆ. ಈ ಬಾರಿ ಇರುವ ಸವಾಲುಗಳೇನು ಎಂದು ಕೇಳಿದ ಪ್ರಶ್ನೆಗೆ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಯೋಚಿಸಬೇಕು. ಈಗ ಭಾರತದಲ್ಲಿ ಪುನಃ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಈ ಬಗ್ಗೆ ಬಿಸಿಸಿಐ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕೆಂದು ಹಿರಿಯ ಕ್ರೀಡಾ ಪತ್ರಕರ್ತರಾಗಿರುವ ಜೋಸೆಫ್ ಹೂವರ್ ಅಭಿಪ್ರಾಯಪಟ್ಟರು.
ಆರೋಗ್ಯ ತುಂಬಾ ಮುಖ್ಯವಾಗಿದೆ. ಜೀವವೇ ಇಲ್ಲ ಎಂದರೆ ಕ್ರಿಕೆಟ್ ಇರಲ್ಲ. ಹೀಗಾಗಿ ಬಿಸಿಸಿಐಗೆ ಈ ಬಗ್ಗೆ ಬುದ್ಧಿ ಹೇಳುವ ಅನಿವಾರ್ಯತೆಯಿದೆ. ಕೊರೊನಾ ಎನ್ನುವ ಸಂದಿಗ್ಧ ಕಾಲದಲ್ಲಿ ಕೇವಲ ದುಡ್ಡಿನ ಬಗ್ಗೆ ಯೋಚಿಸುವುದು ತಪ್ಪಾಗುತ್ತದೆ. ಈ ಸಂದಿಗ್ಧ ಕಾಲದಲ್ಲಿ ಐಪಿಎಲ್ ಅಗತ್ಯವಿಲ್ಲ. ಸದ್ಯಕ್ಕೆ ಆರೋಗ್ಯ ಮುಖ್ಯವಾಗಿದೆ. ಕೊರೊನಾ ವಿರುದ್ಧ ಹೋರಾಡಬೇಕು ಎಂದರು. ಈಗಾಗಲೆ ಐಪಿಎಲ್ ಮ್ಯಾನೇಜ್ಮೆಂಟ್, ಆಟಗಾರರು ಸೇರಿದಂತೆ ಹಲವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಿದ್ದೂ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳಿತಲ್ಲ. ಕೊರೊನಾ ಅರ್ಭಟ ಕಡಿಮೆಯಾದಂತೆ ಐಪಿಎಲ್ ಶುರುಮಾಡಬಹುದು. ಆದರೆ ಈಗ ಟೂರ್ನಮೆಂಟ್ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ನಂತರ ಮಾತನಾಡಿದ ಅವರು ದೇಶದಲ್ಲಿ ಎಂತಹ ಪರಿಸ್ಥಿತಿ ಎದುರಾಗಿದೆ ಎಂದು ಯಾರು ತಿಳಿದುಕೊಂಡಿಲ್ಲ. ಈಗಾಗಲೇ ಕೊರೊನಾದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಬೇಜವಾಬ್ದಾರಿಯಿಂದ ಇದ್ದರೆ ಮುಂದೆ ಆಗುವ ಸಮಸ್ಯೆ ದೊಡ್ಡದಾಗಿರುತ್ತದೆ. ಸದ್ಯಕ್ಕೆ ಐಪಿಎಲ್ಕ್ಕಿಂತ ಆರೋಗ್ಯ ಮುಖ್ಯ ಎಂದು ತಿಳಿಸಿದರು.
ಬಹಳ ಸಂಕಷ್ಟ ಸಂದರ್ಭದಲ್ಲಿ ಐಪಿಎಲ್ನ ಆಯೋಜಿಸಬೇಕಾಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕ್ರಿಕೆಟ್ ಕೋಚ್ ಆಗಿರುವ ಟಿ.ನಸೀರುದ್ದೀನ್ಗೆ ಕೇಳಿದಾಗ ಒಂದು ತಿಂಗಳ ಹಿಂದೆ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಆರೋಗ್ಯದ ದೃಷ್ಟಿಯಿಂದ ಐಪಿಎಲ್ನ ಮುಂದೂಡುವುದೇ ಒಳ್ಳೆಯದು. ಈ ಬಗ್ಗೆ ಬಿಸಿಸಿಐ ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜೋಸೆಫ್ ಹೂವರ್ ಮಾತಿಗೆ ಒತ್ತುಕೊಟ್ಟರು. ಹೆಚ್ಚು ಜನಪ್ರಿಯ ಆಟಗಾರ ಬಿಸಿಸಿಐಗೆ ಹೋಗಿ ಈ ಕೊರೊನಾ ನಡುವೆ ಆಡಲ್ಲ ಎಂದು ಹೇಳಬಹುದು. ಆದರೆ ಈಗ ತಾನೇ ಬೆಳೆಯುತ್ತಿರುವ ಆಟಗಾರ ಇದನ್ನು ನನಗೆ ಆರೋಗ್ಯ ಮುಖ್ಯ ಆಟವಾಡಲ್ಲ ಎಂದು ಹೇಳಿದರೆ ಆತನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಬೇರೆ ದೇಶಗಳಲ್ಲಿ ಜೀವ ಮುಖ್ಯ ಎಂದು ಯೋಚಿಸುತ್ತಾರೆ. ಆದರೆ ಭಾರತದಲ್ಲಿ ಸಿಕ್ಕಿರುವ ಅವಕಾಶಗಳನ್ನು ಕಳೆದುಕೊಳ್ಳಲು ಯಾರು ಯೋಚಿಸಲ್ಲ. ಎಷ್ಟೇ ಕಷ್ಟವಾದರೂ ಛಲದೊಂದಿಗೆ ಮುನ್ನುಗ್ಗುತ್ತಾರೆ. ಇದರಿಂದ ಆಟಗಾರರು ನಿರ್ಧಾರ ತೆಗೆದುಕೊಳ್ಳುವುದು ಕಷ್ಟವೆಂದು ತಿಳಿಸಿದರು.
ಇದನ್ನೂ ಓದಿ
ರಮೇಶ್ ಜಾರಕಿಹೊಳಿ ಗೋಕಾಕ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಟಿವಿ9ಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ವೈದ್ಯಾಧಿಕಾರಿ
(Discussion about IPL tournament in corona pandemic)