ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? -ಸರ್ಕಾರಕ್ಕೆ ಖಾದರ್​ ಸವಾಲ್​

ನಿಮಗೆ ಎಲ್ಲಾ ಕಾನೂನನ್ನು ರಾತ್ರಿಯಿಂದ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ, ಹಾಗಿರುವಾಗ ತಡ ಯಾಕೆ? ಎಂದು ಖಾದರ್ ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? -ಸರ್ಕಾರಕ್ಕೆ ಖಾದರ್​ ಸವಾಲ್​
ಮಾಜಿ ಸಚಿವ U.T.ಖಾದರ್​
KUSHAL V

|

Dec 03, 2020 | 6:08 PM

ಮಂಗಳೂರು: ಮತಾಂತರ ‌ಕಾಯ್ದೆ ಎನ್ನುವುದು ಈಗಾಗಲೇ ನಮ್ಮಲ್ಲಿದೆ. ಈ ಕಾಯ್ದೆಯನ್ನು ಬಲಿಷ್ಠಗೊಳಿಸಲು BJP ಏನು ಮಾಡಿದೆ? ಜಿಹಾದ್ ಎಂಬ ಅರೇಬಿಕ್ ಶಬ್ದ ಯಾಕೆ ಬಳಸುವುದು? ಕಾನೂನಿನ ಹಿಂದೆ ಉದ್ದೇಶ ಇರಬೇಕು, ದುರುದ್ದೇಶ ಇರಬಾರದು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಮ್ಮಲ್ಲಿ ಜಾರಿಯಾಗುವ ಕಾನೂನಿಗೆ ವಿದೇಶಿ ಹೆಸರು ಯಾಕೆ ಬೇಕು? ದೇಶದಲ್ಲಿ ಕಾನೂನು ಮಾಡುವಾಗ ಅರೇಬಿಕ್‌ ಪದ ಬಂದಿದ್ಯಾ? ಇವರೆಲ್ಲಾ ಕೂತು ನಾಟಕ ಮಾಡುವುದೇ? ಎಂದು ಖಾದರ್​ ಖಾರವಾಗಿ ಪ್ರಶ್ನಿಸಿದ್ದಾರೆ.

‘ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ?’ APMC ಕಾನೂನನ್ನು ರಾತ್ರಿಯಿಂದ ಬೆಳಗಾಗುವುದರೊಳಗೆ ತಂದಿದ್ದೀರಿ. ನಿಮಗೆ ಎಲ್ಲಾ ಕಾನೂನನ್ನು ರಾತ್ರಿಯಿಂದ ಬೆಳಗಾಗುವುದರೊಳಗೆ ಜಾರಿಗೆ ತರಲಾಗುತ್ತದೆ. ಆದರೆ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ? ರಾಜ್ಯದಲ್ಲೀಗ ನಿಮ್ಮದೇ ಸರ್ಕಾರವಿದೆ, ಹಾಗಿರುವಾಗ ತಡ ಯಾಕೆ? ಎಂದು ಖಾದರ್ ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ಬಗ್ಗೆ 2 ತಿಂಗಳಿನಿಂದ ಬರೀ ಚರ್ಚೆ ಯಾಕೆ? ಈ ಬಗ್ಗೆ ಸಂಪುಟ ಪ್ರಸ್ತಾಪ ಮಾಡಿ, ಚರ್ಚಿಸುವ. BJP ಸರ್ಕಾರ ಬಂದ ಬಳಿಕ ಭಾರತದಿಂದ ವಿದೇಶಕ್ಕೆ ಹೆಚ್ಚು ಗೋಮಾಂಸ ರಫ್ತಾಗುತ್ತಿದೆ. ಗೋಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ ಎಂದು ಖಾದರ್​ ಹೇಳಿದರು.

‘ಗೋ ಹತ್ಯೆ ಪ್ರಹಸನ! ಗೋ ಹತ್ಯೆ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡ್ತಿರೋರು ಯಾರು?’

ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ -ಲವ್​ ಜಿಹಾದ್​ಗೆ ಸಿದ್ದರಾಮಯ್ಯ ಕೌಂಟರ್​

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada