ಉತ್ತರ ಕನ್ನಡದಲ್ಲಿ ಆಕಸ್ಮಿಕ ಬೆಂಕಿ ತಗುಲಿ 35 ಎಕರೆ ಕಬ್ಬು ಸುಟ್ಟು ಭಸ್ಮ! ಪರಿಹಾರಕ್ಕೆ ರೈತರು ಆಗ್ರಹ

| Updated By: sandhya thejappa

Updated on: Mar 03, 2022 | 10:48 AM

ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ವಿದ್ಯುತ್ ಶಾಟ್೯ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.

ಉತ್ತರ ಕನ್ನಡದಲ್ಲಿ ಆಕಸ್ಮಿಕ ಬೆಂಕಿ ತಗುಲಿ 35 ಎಕರೆ ಕಬ್ಬು ಸುಟ್ಟು ಭಸ್ಮ! ಪರಿಹಾರಕ್ಕೆ ರೈತರು ಆಗ್ರಹ
ಕಬ್ಬಿನ ಗದ್ದೆ ಹೊತ್ತಿ ಉರಿದಿದೆ
Follow us on

ಉತ್ತರ ಕನ್ನಡ: ಕಬ್ಬಿನ ಗದ್ದೆಗೆ (Sugarcane) ಆಕಸ್ಮಿಕ ಬೆಂಕಿ (Sugarcane) ತಗುಲಿ, ಬೆಳೆ ಹಾನಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ. ಆಕಸ್ಮಿಕ ಬೆಂಕಿ ತಗುಲಿ ಕಬ್ಬಿನ ಗದ್ದೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗುರುನಾಥ ಕಲಕೇರಿ, ಕೃಷ್ಣಾ ಪಾಟೀಲ್, ಮಾರುತಿ ಬಾವಕರ್ ಎಂಬ ರೈತರಿಗೆ ಸೇರಿದ ಸುಮಾರು 35 ಎಕರೆ ಕಬ್ಬಿನ ಗದ್ದೆ ಸುಟ್ಟು ಕರಕಲಾಗಿದೆ. ಗಾಳಿ ರಭಸಕ್ಕೆ ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ಬೆಂಕಿ ಹಬ್ಬಿದೆ. ಅಂದಾಜು 70 ಲಕ್ಷ ರೂ. ಮೌಲ್ಯದ ಕಬ್ಬು ನಾಶವಾಗಿದೆ ಎಂದು ಹೇಳಲಾಗುತ್ತಿದೆ.

ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ವಿದ್ಯುತ್ ಶಾಟ್೯ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.

5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ
ಈ ಹಿಂದೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿವಾಪುರ ಗ್ರಾಮದ ಬಳಿ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ‌ ನಂದಿಸಿದ್ದರು. ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತುಕೊಂಡಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ನೂರಾರು ಎಕರೆ ಪ್ರದೇಶದಲ್ಲಿದ್ದ ಕಬ್ಬು ಉಳಿದುಕೊಂಡಿದೆ. ಬೆಂಕಿ ಹೊತ್ತಿಕೊಳ್ಳಲು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಅಂತಾ ರೈತರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ

ಮಲಬದ್ಧತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದೀರಾ? ಈ ಆಹಾರಗಳು ತಕ್ಷಣದ ಪರಿಹಾರವನ್ನು ನೀಡುತ್ತವೆ ಗಮನಿಸಿ

ನೀನೆಂದರೆ ನನಗೆ ಪಂಚಪ್ರಾಣ ಅಂತಾರಲ್ಲ! ಹಾಗೆಂದರೇನು ? ವಾಯುಪುತ್ರನನ್ನು ಮುಖ್ಯಪ್ರಾಣ ದೇವ ಅನ್ನುವುದೇಕೆ?