AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದಲ್ಲಿ ಶಿಕ್ಷಕ ಸಾವು. ಸ್ವಾತಂತ್ರ್ಯೋತ್ಸವದಂದು ಗುಡೆ ಅಂಗಡಿ ಸರ್ಕಾರಿ ಶಾಲೆಯಲ್ಲಿ ಸೂತಕದ ಛಾಯೆ

ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಶಾಲೆಯಲ್ಲಿ ಧ್ವಜರೋಹಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಿಕ್ಷಕರೊನಬ್ಬರು ಮಾರ್ಗಮಧ್ಯೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಶಾಲೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಅಪಘಾತದಲ್ಲಿ ಶಿಕ್ಷಕ ಸಾವು. ಸ್ವಾತಂತ್ರ್ಯೋತ್ಸವದಂದು ಗುಡೆ ಅಂಗಡಿ ಸರ್ಕಾರಿ ಶಾಲೆಯಲ್ಲಿ ಸೂತಕದ ಛಾಯೆ
ಗೋಪಾಲ ಪಟಗಾರ
ವಿನಾಯಕ ಬಡಿಗೇರ್​
| Updated By: ರಮೇಶ್ ಬಿ. ಜವಳಗೇರಾ|

Updated on: Aug 15, 2023 | 11:48 AM

Share

ಕಾರವಾರ ( ಅಗಸ್ಟ್ 15): ಇಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಹೀಗಾಗಿ ಸ್ವಾತಂತ್ರ್ಯೋತ್ಸವದ (Independence Day) ಪ್ರಯುಕ್ತ ದೇಶದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆ, ಸರ್ಕಾರಿ ಶಾಲಾ-ಕಾಲೇಜು, ಕಚೇರಿಗಳಲ್ಲೂ ಸ್ವಾತಂತ್ರ್ಯೋತ್ಸವದ ಕಳೆಗಟ್ಟಿದೆ. ಹಬ್ಬಕ್ಕೆ ತಯಾರಿ ನಡೆಸಿಸದಂತೆ ನಿನ್ನೆಯಿಂದಲೇ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದಾರೆ. ಇದರ ಮಧ್ಯೆ  ಕಾರವಾರದಲ್ಲೊಂದು ನಡೆದ ದುರ್ಘಟನೆನೆಯಿಂದಾಗಿ ಗುಡೆ ಅಂಗಡಿ ಸರ್ಕಾರಿ ಶಾಲೆಯಲ್ಲಿ ಸೂತಕದ ಸೂತಕದ ಛಾಯೆ ಆವರಿಸಿದೆ. ಹೌದು.. ಧ್ವಜಾರೋಹಣಕ್ಕಾಗಿ ಶಾಲೆಗೆ ಹೋಗುತ್ತಿದ್ದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಗುಡೆ ಅಂಗಡಿ ಸರ್ಕಾರಿ ಶಾಲೆಯ ಶಿಕ್ಷಕ ಗೋಪಾಲ ಪಟಗಾರ (50) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶಾಲಾ ಧ್ವಜಾರೋಹಣಕ್ಕೆ ತೆರುಳುತ್ತಿರುವ ಸಂದರ್ಭದಲ್ಲಿ ಶಿಕ್ಷಕ ಗೋಪಾಲ ಪಟಗಾರ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಶಿಕ್ಷಕ ಗೋಪಾಲ ಪಟಗಾರ ಸಾವನ್ನಪ್ಪಿದ್ದಾರೆ. ಕುಮಟಾ ತಾಲೂಕಿನ ಗುಡೆಅಂಗಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಈ ಕುರಿತು ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ