ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮೀನುಗಾರಿಕೆ ಸಂಪೂರ್ಣ ಬಂದ್

ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಕಳೆದ ಎರಡು ತಿಂಗಳಿಂದ ಅಬ್ಬರಿಸಿದ್ದ ಮಳೆ ಇನ್ನೇನು ಕಡಿಮೆಯಾಯಿತು ಎನ್ನುವಾಗಲೇ, ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದೆ. ಈ ತಿಂಗಳ ಮೊದಲ ದಿನದಿಂದ ಚಿಗುರೊಡೆದಿದ್ದ ಮೀನುಗಾರಿಕೆಗೆ ಬ್ರೇಕ್ ಬಿದ್ದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ; ಮೀನುಗಾರಿಕೆ ಸಂಪೂರ್ಣ ಬಂದ್
ಮೀನುಗಾರಿಕೆ ಸಂಪೂರ್ಣ ಬಂದ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2024 | 9:20 PM

ಉತ್ತರ ಕನ್ನಡ, ಆ.23: ಎರಡು ತಿಂಗಳಿಂದ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ, ಇನ್ನೇನು ಕಡಿಮೆಯಾಯಿತು ಎನ್ನುವಾಗಲೇ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದೆ. ಆಗಸ್ಟ್​ 01 ರಿಂದ ಮೀನುಗಾರಿಕೆ(fishing) ಪ್ರಾರಂಭವಾಗಿತ್ತು. ಉತ್ತಮ ಮತ್ಸ್ಯ ಭೇಟೆ ನಿರೀಕ್ಷೆಯಲ್ಲಿದ್ದ ಮೀನುಗಾರರು ಸಮದ್ರಕ್ಕಿಳಿದು ಮೀನುಗಾರಿಕೆ ಪ್ರಾರಂಭಿಸಿದ ಕೆಲವೇ ದಿನದಲ್ಲಿ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಬಂದೊದಗಿದೆ. ಆ.24 ರಿಂದ 26 ರ ವರೆಗೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ 35 ರಿಂದ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬಿಸುವ ಸಾಧ್ಯತೆ ಇದೆ. ಹೀಗಾಗಿ ಆಳ ಸಮುದ್ರಕ್ಕೆ ತೆರಳಿದ ರಾಜ್ಯ, ಹೊರರಾಜ್ಯದ ಮೀನುಗಾರಿಕಾ ಬೋಟುಗಳು ಬಂದರಿನಲ್ಲಿ ಲಂಗುರು ಹಾಕುತ್ತಿವೆ.

ಆಗಸ್ಟ್​ ಮೊದಲ ವಾರದಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಮೀನುಗಾರರು, ತಮ್ಮ ಬೋಟುಗಳನ್ನು ತೀರದತ್ತ ತಿರುಗಿಸಿದ್ದಾರೆ. ಉತ್ತಮ ಮತ್ಸ್ಯ ಭೇಟೆಯ ನಿರೀಕ್ಷೆಯಲ್ಲಿ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರರಿಗೆ ವಾಯುಭಾರ ಕುಸಿತದಿಂದ ಮೀನುಗಾರಿಕೆ ನಡೆಸಲು ವಿಘ್ನವಾಗಿದೆ. ಹೀಗಾಗಿ ಇತ್ತ ಮೀನುಗಳಿಲ್ಲದೇ ಸುರಕ್ಷತೆಗಾಗಿ ಬಂದರಿನಲ್ಲಿ ತಮ್ಮ ಬೋಟುಗಳನ್ನು ಲಂಗುರು ಹಾಕಿದ್ದು, ಈ ಬಾರಿ ಸಮುದ್ರದಲ್ಲಿ ಎದ್ದ ಥೂಫಾನ್​ನಿಂದ ಉತ್ತಮ ಮೀನುಗಳು ಸಿಗದೇ ನಷ್ಟ ಹೊಂದುವಂತಾಗಿದೆ. ಜೊತೆಗೆ ಎಲ್ಲಿ ಹೋದರೂ ಮೀನುಗಳೇ ಸಿಗುತ್ತಿಲ್ಲ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಮೀನುಗಾರಿಕೆ ವಿಚಾರದಲ್ಲಿ ಗಲಾಟೆ; ಮೊಗವೀರ ಹಾಗೂ ಶಿಳ್ಳೆಕ್ಯಾತ ಅಲೆಮಾರಿ ಬೆಸ್ತರ ನಡುವೆ ಮಾರಾಮಾರಿ

ಒಟ್ಟಿನಲ್ಲಿ ಎರಡು ತಿಂಗಳಿಂದ ಅಬ್ಬರಿಸಿದ ಮಳೆ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿ ಮಾಡಿದ್ದಲ್ಲದೇ ಅಪಾರ ಪ್ರಮಾಣದ ನಷ್ಟ ತಂದಿಟ್ಟಿತ್ತು. ಆದ್ರೆ, ಇದೀಗ ಕಡಲ ಮಕ್ಕಳಿಗೂ ಮಳೆ ಸಂಕಷ್ಟ ತಂದೊಡ್ಡಿದ್ದು, ಉತ್ತಮ ಮತ್ಸ್ಯ ಭೇಟೆಯ ನಿರೀಕ್ಷೆಯಲ್ಲಿದ್ದ ಮೀನುಗಾರರು ಬರಿಗೈನಲ್ಲಿ ತೀರ ಸೇರುವಂತಾಗಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ