ಕಾರವಾರ, ಅಕ್ಟೋಬರ್ 18: ಸಾಗರಮಾಲಾ ಯೋಜನೆಯಡಿ ಅಗಲೀಕರಣ ಕಾಮಗಾರಿ ಹಿನ್ನೆಲೆ ನ.1ರಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿ-ಕುಮಟಾ ಮಾರ್ಗದ ರಾಷ್ಟ್ರೀಯ ಹೆದ್ದಾರಿ (national highway) 766(E) ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಸಂಚಾರಕ್ಕೆ ನಿರ್ಬಂಧ ವಿಧಿಸಿ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಿ ಉಪ ವಿಭಾಗಾಧಿಕಾರಿ ಆರ್.ದೇವರಾಜ್ ಬುಧವಾರ ಆದೇಶ ಹೊರಡಿಸಿದ್ದಾರೆ. ಶಿರಸಿ ಮಾರ್ಗದಲ್ಲಿ ಲಘುಗಾತ್ರದ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶಿರಸಿ ವಿಭಾಗದಲ್ಲಿ 33 ಕಿ.ಮೀ ಪೈಕಿ 25 ಕಿ.ಮೀ ರಸ್ತೆ ಕಾಮಗಾರಿ ಆಗಿದೆ. 2.84 ಕಿ.ಮಿ. ಒಂದು ಕಡೆ
ರಸ್ತೆಯಾಗಿದೆ. ಉಳಿದಂತೆ 6.18 ಕಿ.ಮೀ ರಸ್ತೆ ಆಗಬೇಕಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ,
9 ಸೇತುವೆ ನಿರ್ಮಾಣ ಆಗಬೇಕಿದೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನೊಂದಿಗೆ ಮಹಿಳೆಯ ಹೆಸರು ಬಳಕೆ ಆರೋಪ: ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿತ
ಶಿರಸಿ ಕುಮಟಾ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು
ಆರ್ಎನ್ಎಸ್ ಮೂಲಸೌಕರ್ಯ ಕೋರಿಕೆ ಮೇರೆಗೆ ಈ ಮಾರ್ಗದಲ್ಲಿ ವಾಹನಗಳಲ್ಲಿ ಸಂಚಾರ
ನಿಷೇಧಿಸಲಾಗುತ್ತಿದೆ.
ಇದನ್ನೂ ಓದಿ: ಕಾರಿನಡಿಯಲ್ಲಿತ್ತು ಕಾಳಿಂಗ ಸರ್ಪ! 80 ಕಿಮೀ ಪ್ರಯಾಣಿಸಿ ಬೆಚ್ಚಿ ಬಿದ್ದ ಸವಾರರು ಆಮೇಲೆ ಮಾಡಿದ್ದೇನು?
ಶಿರಸಿ-ಕುಮಟಾ ರಸ್ತೆಗೆ ಈ ಹಿಂದೆ ಪರಿಸರ ವಿಚಾರವಾಗಿ ತಡೆಯಾಜ್ಞೆ ಇತ್ತು. ಸದ್ಯ ಅದು ತೆರವುಗೊಂಡಿದೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ಯಾವುದೆ ತೊಂದರೆಯಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:28 pm, Wed, 18 October 23