ಉತ್ತರ ಕನ್ನಡಕ್ಕೆ ಬಂದಾಗ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ ಸಿಎಂ ಬೊಮ್ಮಾಯಿ
Uttar Kannada: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ವೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಜಿತ್ ಕುಮಾರ್ ಇಂದು ಭೇಟಿಯಾದರು. ಸಿಎಂ ಬೊಮ್ಮಾಯಿ ಸೂಕ್ತವಾಗಿ ಸ್ಪಂದಿಸಿದ್ದಾರೆ. ಉತ್ತರ ಕನ್ನಡಕ್ಕೆ ಬಂದಾಗ ಸಿಹಿ ಸುದ್ದಿ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಅಜಿತ್ ಕುಮಾರ್ ಈ ವೇಳೆ ಹೇಳಿದ್ದಾರೆ.
ಬೆಂಗಳೂರು/ ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಗೆ (Uttar Kannada) ಸೂಪರ್ ಸ್ವೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಅಜಿತ್ ಕುಮಾರ್ ಇಂದು ಭೇಟಿಯಾದರು.ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಅಜಿತ್ ಕುಮಾರ್ ಉತ್ತರ ಕನ್ನಡ ಜಿಲ್ಲೆಗೆ ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಬೇಕು ಅನ್ನೋ ಕೂಗು ಈ ಬಾರಿ ಜೋರಾಗಿಯೇ ಕೇಳಿಬಂದಿದೆ. ಅದರ ಒಂದು ಭಾಗವಾಗಿ ಉತ್ತರ ಕನ್ನಡ ಜನ ಪರವಾಗಿ ಇವತ್ತು ಬೆಂಗಳೂರಿಗೆ ಬಂದಿದ್ದೇವೆ. ಉತ್ತರ ಕನ್ನಡದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ 500 ಕ್ಕೂ ಹೆಚ್ಚು ಜನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದ್ದೀವಿ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳನ್ನ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಿಎಂ ಬೊಮ್ಮಾಯಿಗೆ ತಲುಪಿಸಲು ಮನವಿ ಮಾಡಿದರೂ ಕೂಡಾ ಯಾರು ಸ್ವಂದಿಸಿಲ್ಲ. ಆದರೂ ಜಿಲ್ಲೆಯ ಜನರು ಪ್ರೋತ್ಸಾಹಿಸಿದ್ದಾರೆ. ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಸಿಎಂ ಬೊಮ್ಮಾಯಿ ಸೂಕ್ತವಾಗಿ ಸ್ಪಂದಿಸಿದ್ದಾರೆ. ಉತ್ತರ ಕನ್ನಡಕ್ಕೆ ಬಂದಾಗ ಸಿಹಿ ಸುದ್ದಿ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಅಜಿತ್ ಕುಮಾರ್ ಹೇಳಿದ್ದಾರೆ.