ಕೋಸ್ಟ್ ಗಾರ್ಡ್ ಸಿಬ್ಬಂದಿಯ ಅವಿರತ ಪ್ರಯತ್ನದಿಂದ ಅರಬ್ಬಿ ಸಮುದ್ರದಲ್ಲಿ ಬೋಟ್ ಪತ್ತೆ, 27 ಮೀನುಗಾರರ ರಕ್ಷಣೆ
ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಹಡಗನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿ 27 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಗೋವಾ ಮೂಲದ ಕ್ರಿಸ್ಟೋ ಹೆಸರಿನ ಬೋಟ್ ನವೆಂಬರ್ 27ರಿಂದ ನಾಪತ್ತೆಯಾಗಿತ್ತು. ಬಳಿಕ ಕೋಸ್ಟ್ ಗಾರ್ಡ್ ಅವಿರತ ಪ್ರಯತ್ನದಿಂದ ಅಂತಿಮವಾಗಿ ಅಂಕೋಲಾ ತಾಲೂಕಿನ ಬೇಲಿಕೇರಿ ಬಂದರಿನ ಸಮೀಪ ಪತ್ತೆ ಮಾಡಲಾಗಿದೆ.
ಕಾರವಾರ, (ಡಿಸೆಂಬರ್ 05): ಹವಾಮಾನ ವೈಪರೀತ್ಯದಿಂದ (Weather extremes) ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಬೋಟ್ ಮತ್ತೆಯಾಗಿದೆ. ಕೋಸ್ಟ್ ಗಾರ್ಡ್ (coast guard) ಸಿಬ್ಬಂದಿ ಅವಿರತ ಪ್ರಯತ್ನದಿಂದ ಅರಬ್ಬಿ ಸಮುದ್ರದಲ್ಲಿ ಗೋವಾ ಮೂಲದ ಬೋಟ್ ಪತ್ತೆಯಾಗಿದ್ದು, ಮೀನುಗಾರರ ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬೇಲಿಕೇರಿ ಬಂದರಿನಿಂದ 30 ನಾಟಿಕನ್ ಮೈಲಿದೂರದಲ್ಲಿ ಬೋಟ್ ಪತ್ತೆ ಮಾಡಿ 27 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಹವಾಮಾನ ವೈಪರೀತ್ಯ: ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್ ನಾಪತ್ತೆ
ನವೆಂಬರ್ 29 ರಂದು ಗೋವಾದ ಪಣಜಿಯ IND-GA-01MM2233 ನೋಂದಣಿಯ ಕ್ರಿಸ್ಟೋ ಹೆಸರಿನ ಬೋಟ್ನ ಇಂಜಿನ್ನಲ್ಲಿ ಸಮಸ್ಯೆಯಾಗಿ ತೇಲಿಹೋಗಿತ್ತು. ಗೋವಾದ ಪಣಜಿಯಿಂದ ಹೊರಟಿದ್ದ ಬೋಟ್ ಅಂಕೋಲ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಕೊನೆಯ ಲೊಕೇಷನ್ ತೋರಿಸಿತ್ತು. ಬಳಿಕ ಬೋಟ್ನ ಮಾಲೀಕ ಕೂಡಲೇ ಕೋಸ್ಟ್‌ಗಾರ್ಡ್ಸ್‌ಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಕೋಸ್ಟ್ಗಾರ್ಡ್ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಇದೀಗ ಬೋಟ್ ಪತ್ತೆ ಮಾಡಿದ್ದಾರೆ. 30 ನಾಟಿಕನ್ ಮೈಲಿದೂರದಲ್ಲಿ ಪತ್ತೆಯಾದ ಕ್ರಿಸ್ಟೋ ಬೋಟ್ ಸಿಕ್ಕಿದ್ದು, 27 ಮೀನುಗಾರರ ಸಮೇತ ಕ್ರಿಸ್ಟೋ ಬೋಟ್ ಬೇಲಿಕೇರಿ ಬಂದರಿನತ್ತ ಕರೆತರಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ