ಕಾರವಾರ: ಕಾಳಿ ನದಿಯಿಂದ ಆಹಾರ ಅರಸಿ ಬಂದ ಮೊಸಳೆ ಪಾಳು ಬಾವಿಗೆ ಬಿದ್ದು ಸಾವು
ಪಾಳು ಬಿದ್ದ ಜಾಗದಲ್ಲಿರುವ ಬಾವಿಗೆ ಬಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ. ಸಾರ್ವಜನಿಕರ ಜೊತೆ ಸೇರಿ ಬಾವಿಯಿಂದ ಮೃತ ಮೊಸಳೆಯನ್ನು ಮೇಲೆತ್ತಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ನಂತರ ನಿರ್ಜನ ಪ್ರದೇಶದಲ್ಲಿ ಮೊಸಳೆಯ ಅಂತ್ಯಸಂಸ್ಕಾರ ಮಾಡಿದ್ದಾರೆ.

ಉತ್ತರ ಕನ್ನಡ: ಪಾಳು ಬಾವಿಗೆ ಮೊಸಳೆ ಬಿದ್ದು ಸಾವನ್ನಪ್ಪಿದ(Death) ಘಟನೆಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಹತ್ತಿರದ ಐಪಿಎಮ್(IPM) ಕಂಪನಿಯ ವಸತಿ ಪ್ರದೇಶದಲ್ಲಿ ನಡೆದಿದೆ. ಕಾಳಿ ನದಿಯಿಂದ ಜನವಸತಿ ಪ್ರದೇಶದ ಕಡೆಗೆ ಮೊಸಳೆ(crocodile) ಬಂದಿರುವ ಶಂಕೆ ವ್ಯಕ್ತವಾಗಿದೆ. ಪಾಳು ಬಿದ್ದ ಜಾಗದಲ್ಲಿರುವ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಪಸ್ವಲ್ಪ ನೀರಿದ್ದ ಬಾವಿಗೆ ಬಿದ್ದು, ಆಹಾರ ಸಿಗದೆ ಮಹಿಳೆ ಸಾವನ್ನಪ್ಪಿದೆ.
ಮೊಸಳೆ ಸತ್ತ ನಂತರ ಬಾವಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಪಾಳು ಬಿದ್ದ ಜಾಗದಲ್ಲಿರುವ ಬಾವಿಗೆ ಬಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ. ಸಾರ್ವಜನಿಕರ ಜೊತೆ ಸೇರಿ ಬಾವಿಯಿಂದ ಮೃತ ಮೊಸಳೆಯನ್ನು ಮೇಲೆತ್ತಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ನಂತರ ನಿರ್ಜನ ಪ್ರದೇಶದಲ್ಲಿ ಮೊಸಳೆಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕಟ್ಟಿಗೆ ಚಿತೆ ನಿರ್ಮಿಸಿ ಬೆಂಕಿಯಿಟ್ಟು ಮೊಸಳೆಯ ಶವ ಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ರಾಮನಗರ: ಮೊಲ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವು; ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ
ಪದೇಪದೆ ಊರೊಳಗೆ ನುಗ್ಗಿ ಸಾಕು ಪ್ರಾಣಿಗಳನ್ನು ಎತ್ತ್ಯೊಯ್ಯುತ್ತಿದ್ದ ಚಿರತೆ ಕೊನೆಗೂ ಬೋನಲ್ಲಿ ಸೆರೆಯಾಯಿತು!
Published On - 7:50 pm, Sun, 13 March 22