ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ಶವ ರವಾನೆ; ಕಾರವಾರದ ಗುಡ್ಡಹಳ್ಳಿಯಲ್ಲಿ ಮನಕಲಕುವ ಘಟನೆ

ಕಾರವಾರ ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಲಾಗಿದೆ. ಗುಡ್ಡದ ಮೇಲಿರುವ ಮನೆಗೆ ಶವ ಸಾಗಿಸಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆ ಕಟ್ಟಿಗೆಗೆ ಹಗ್ಗದಿಂದ ಕಟ್ಟಿ ಶವ ಸಾಗಾಟ ಮಾಡಲಾಗಿದೆ. ಆದರೆ ಈ ರೀತಿ ಶವ ಸಾಗಿಸಿದ ದೃಶ್ಯ ಮನ ಕಲಕುವಂತಿದೆ.

ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ಶವ ರವಾನೆ; ಕಾರವಾರದ ಗುಡ್ಡಹಳ್ಳಿಯಲ್ಲಿ ಮನಕಲಕುವ ಘಟನೆ
ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ಶವ ರವಾನೆ
Follow us
| Updated By: ಆಯೇಷಾ ಬಾನು

Updated on: Sep 22, 2024 | 2:28 PM

ಕಾರವಾರ, ಸೆ.22: ಮೃತಪಟ್ಟ ಬಳಿಕ ಗೌರವಯುತವಾಗಿ ಬೀಳ್ಕೊಡಬೇಕೆಂಬುವುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಆದರೆ ಕೆಲ ಸಮಸ್ಯೆಯಿಂದ ಮೃತದೇಹವನ್ನು (Dead Body) ರವಾನಿಸಲು ಕುಟುಂಬಸ್ಥರು ಪರದಾಡುವಂತಹ ಪರಿಸ್ಥಿತಿ ಹಲವೆಡೆ ಕಂಡು ಬರುತ್ತಿದೆ. ಇತ್ತೀಚೆಗೆ ತುಮಕೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿತ್ತು. ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ದೊರೆಯದ ಹಿನ್ನೆಲೆ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್​ನಲ್ಲೇ ಸಾಗಿಸಿರುವ ಘಟನೆ ತಾಲೂಕಿನ ವೈ ಎನ್ ಹೊಸಕೋಟೆಯಲ್ಲಿ ನಡೆದಿತ್ತು. ಇದೀಗ ಇದೇ ಮಾದರಿಯ ಮತ್ತೊಂದು ಘಟನೆ ನಡೆದಿದೆ. ಕಾರವಾರ (Karwar) ನಗರಸಭೆ ವ್ಯಾಪ್ತಿಯ ಗುಡ್ಡಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಎಂದು ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಲಾಗಿದೆ.

ಅನಾರೋಗ್ಯದ ಕಾರಣ ನಿನ್ನೆ ರಾತ್ರಿ ಕಾರವಾರ ಆಸ್ಪತ್ರೆಗೆ ರಾಮಾ ಮುನ್ನಾಗೌಡ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ತಡರಾತ್ರಿ 12 ಗಂಟೆಗೆ ಏಕಾಏಕಿ ಹೃದಯಾಘಾತ ಸಂಭವಿಸಿ ರಾಮಾ ಮುನ್ನಾಗೌಡ ಅವರು ಮೃತಪಟ್ಟಿದ್ದರು. ಸದ್ಯ ಆಸ್ಪತ್ರೆಯಿಂದ ಮನೆಗೆ ಮೃತದೇಹವನ್ನು ರವಾನಿಸಲು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಜನರೆಲ್ಲ ಸೇರಿ ಕಟ್ಟಿಗೆಗೆ ಮೃತದೇಹ ಕಟ್ಟಿ ರವಾನಿಸಿದ್ದಾರೆ.

ಗುಡ್ಡದ ಮೇಲಿರುವ ಮನೆಗೆ ಶವ ಸಾಗಿಸಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆ ಕಟ್ಟಿಗೆಗೆ ಹಗ್ಗದಿಂದ ಕಟ್ಟಿ ಶವ ಸಾಗಾಟ ಮಾಡಲಾಗಿದೆ. ಆದರೆ ಈ ರೀತಿ ಶವ ಸಾಗಿಸಿದ ದೃಶ್ಯ ಮನ ಕಲಕುವಂತಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಇಂತಹ ಪರಿಸ್ಥಿತಿಗಳು ರಾಜ್ಯದ ಅನೇಕ ಭಾಗಗಳಲ್ಲಿ ಈಗಲೂ ಕಂಡು ಬರುತ್ತದೆ. ರಸ್ತೆ ಸಂಪರ್ಕ, ವಿದ್ಯುತ್ ಇಲ್ಲದೆ ಮೂಲಸೌಕರ್ಯಗಳಿಲ್ಲದೆ ಅದೆಷ್ಟೋ ಹಳ್ಳಿಗಳು ಜೀವನವನ್ನು ಕಟ್ಟಿಕೊಂಡಿವೆ.

ಇದನ್ನೂ ಓದಿ: ತುಮಕೂರು: ಬೈಕ್​ ಮೇಲೆ ಶವ ಸಾಗಾಟ: ಸಮುದಾಯ ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್

ಬೈಕ್​ ಮೇಲೆ ಶವ ಸಾಗಾಟ: ಸಮುದಾಯ ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್

ಇನ್ನು ಕೆಲ ದಿನಗಳ ಹಿಂದೆ ನಡೆದಿದ್ದ ಮನಕಲಕುವ ಘಟನೆ ಸಂಬಂಧ ಸಮುದಾಯ ಆರೋಗ್ಯಾಧಿಕಾರಿಗೆ ಸಿಎಂ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಮಕ್ಕಳು ತಂದೆಯ ಶವವನ್ನು ಬೈಕ್​ನಲ್ಲಿ ಸಾಗಿಸಿದ್ದಕ್ಕೆ ಕಾರಣ ಕೇಳಿ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ನೋಟಿಸ್​ ನೀಡಿದ್ದಾರೆ. ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರು ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳು, ಹೊನ್ನೊರಪ್ಪನವರನ್ನು 108 ಆಂಬ್ಯುಲೆನ್ಸ್​ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ, ಅಷ್ಟರಾಗಲೇ ಹೊನ್ನೂರಪ್ಪನ ಜೀವ ಹೋಗಿತ್ತು. ಬಳಿಕ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಿಗದ ಕಾರಣ ಬೈಕ್​ನಲ್ಲೇ ತೆಗೆದುಕೊಂಡು ಹೋಗಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್