AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shekhar patagara: ನಕಲಿ ಸ್ವಾಮಿ ಶೇಖರ್ ಪಟಗಾರ ಅಲಿಯಾಸ್ ಸತ್ಯಾನಂದ ಸ್ವಾಮಿ ಅರೆಸ್ಟ್

Ankola police: ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಶೇಖರ್ ಪಟಗಾರ ಸದ್ಯ, ಶಿರಸಿ ಗ್ರಾಮೀಣ ಪೊಲೀಸರ ವಶದಲ್ಲಿದ್ದಾನೆ. ತಾನು ದೊಡ್ಡ ಸ್ವಾಮಿ ಎಂದು ನಂಬಿಸಿ ಹಲವರಿಗೆ ವಂಚನೆ ಎಸಗಿರುವ ಆರೋಪ ಈತನ ಮೇಲಿದೆ.

Shekhar patagara: ನಕಲಿ ಸ್ವಾಮಿ ಶೇಖರ್ ಪಟಗಾರ ಅಲಿಯಾಸ್ ಸತ್ಯಾನಂದ ಸ್ವಾಮಿ ಅರೆಸ್ಟ್
ನಕಲಿ ಸ್ವಾಮಿ ಶೇಖರ್ ಪಟಗಾರ ಅಲಿಯಾಸ್ ಸತ್ಯಾನಂದ ಸ್ವಾಮಿ ಅರೆಸ್ಟ್
TV9 Web
| Edited By: |

Updated on:Jul 30, 2022 | 4:30 PM

Share

ಉತ್ತರ ಕನ್ನಡ: ನಕಲಿ ಸ್ವಾಮಿ (Fake swamiji) ಶೇಖರ್ ಪಟಗಾರ (Shekhar patagara) ಅಲಿಯಾಸ್ ಸತ್ಯಾನಂದ ಸ್ವಾಮಿಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಪೊಲೀಸರು (Ankola police) ಬಂಧಿಸಿದ್ದಾರೆ. ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಶೇಖರ್ ಸದ್ಯ, ಶಿರಸಿ ಗ್ರಾಮೀಣ ಪೊಲೀಸರ ವಶದಲ್ಲಿದ್ದಾನೆ. ತಾನು ದೊಡ್ಡ ಸ್ವಾಮಿ ಎಂದು ನಂಬಿಸಿ ಹಲವರಿಗೆ ವಂಚನೆ ಎಸಗಿರುವ ಆರೋಪ ಈತನ ಮೇಲಿದೆ.

ಕಳೆದ ಕೆಲ ವರ್ಷಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ಅಂಕೋಲಾ ತಾಲೂಕಿನಲ್ಲಿ ವಾಸ್ತವ್ಯ ಇದ್ದ ಶೇಖರ … ದಿನಕಳೆದಂತೆ ತನ್ನನ್ನೆ ತಾನು ಸ್ವಾಮಿ ಎಂದು ಬಿಂಬಿಸಿಕೊಳ್ಳಲಾರಂಭಿಸಿದ್ದ. ಅದರಿಂದಲೇ ತಾನು ದೊಡ್ಡ ಸ್ವಾಮಿ ಎಂದು ನಂಬಿಸಿ ಮೋಸ‌ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಮೊದ ಮೊದಲು ಕೇವಲ ತಾನು ಸ್ವಾಮಿ ಎಂದು ಬಿಂಬಿಸಿಕೊಂಡು ಊರೂರು ತಿರುಗುತ್ತಿದ್ದ ಶೇಖರ, ಇತ್ತೀಚೆಗೆ ತಾನು ಸತ್ಯಾನಂದ ಸ್ವಾಮಿ ಎಂದು ಹೇಳಿಕೊಳ್ಳುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಶೇಖರನಿಂದ  ಮೋಸಕ್ಕೆ ಒಳಗಾದವರು ಯಾರೂ ಇದುವರೆಗೂ ಯಾವುದೇ ದೂರು ನೀಡಿಲ್ಲ.

Published On - 3:30 pm, Sat, 30 July 22