NIA in Bhatkal: ಭಟ್ಕಳದಲ್ಲಿ ಉಗ್ರಗಾಮಿ ಚಟುವಟಿಕೆಗೆ ಯುವಕರನ್ನು ಪ್ರೇರೇಪಿಸುತ್ತಿದ್ದ ವ್ಯಕ್ತಿಯ ಬಂಧನ
ಆರೋಪಿ ಅಬ್ದುಲ್ ಮುಖ್ತದೀರ್ ಜತೆ ಆತನ ತಮ್ಮನನ್ನೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಉಗ್ರ ಚಟುವಟಿಕೆ ಸಂಬಂಧಿಸಿ ಮುಖ್ತದೀರ್ ತಮ್ಮನಿಂದ ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳಕ್ಕೆ ಮತ್ತೆ ಎನ್‌ಐಎ (NIA) ದಾಳಿ ಮಾಡಿದ್ದು, ಅಬ್ದುಲ್ ಮುಕ್ತದೀರ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಮೂಲದಿಂದ ಮಾಹಿತಿ ನೀಡಲಾಗಿದೆ. ಮುಂಜಾನೆ 4.15ಕ್ಕೆ ಮನೆಗೆ ದಾಳಿ ನಡೆಸಿರುವ ದೆಹಲಿ ಹಾಗೂ ಬೆಂಗಳೂರು ಎನ್‌ಐಎ ತಂಡ, ನಿನ್ನೆ ರಾತ್ರಿ 10.30ಕ್ಕೆ ಅಧಿಕಾರಿಗಳು ಭಟ್ಕಳಕ್ಕೆ ಪೊಲೀಸ್ ಪ್ರೊಟೆಕ್ಷನ್ ಪಡೆದಿದ್ದಾರೆ. ಭಟ್ಕಳದ ಮುಖ್ಯರಸ್ತೆ, ಅರ್ಬನ್ ಬ್ಯಾಂಕ್ ಬಳಿ ಆರೋಪಿ ನಿವಾಸವಿದ್ದ. ಜೂನ್ 25ರಂದು ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದ ಎನ್‌ಐಎ ಐಪಿಸಿ ಸೆಕ್ಷನ್ 153A, 153B, UAPA 18, 18b, 38, 39, 40 ಅಡಿ ಎನ್‌ಐಎ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡಿದ್ದರು. ಎನ್‌ಐಎ ದಾಳಿ ವೇಳೆ ಹಲವು ದಾಖಲೆ ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಲಷ್ಕರ್-ಎ- ತೊಯ್ಬಾ ಹಾಗೂ ಐಸಿಸ್ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿತ್ತು. ಉಗ್ರ ಚಟುವಟಿಕೆಗೆ ನೇಮಕಾತಿ ಹಾಗೂ ಆರ್ಟಿಕಲ್‌ಗಳ ಮೂಲಕ ಆರೋಪಿಗಳು ಯುವಕನ್ನು ಪ್ರೇರೇಪಿಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಭಟ್ಕಳದಲ್ಲಿ ಅಬ್ದುಲ್ ಮುಕ್ತದೀರ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲಾ ಪೊಲೀಸರ ಸಹಕಾರಿಂದ ಎನ್‌ಐಎ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಶಂಕಿತ ಉಗ್ರರ ಬಳಿ ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್ ಪ್ರತಿ ಪತ್ತೆ: ಮೊಬೈಲ್ ಡೇಟಾ ಡಿಕೋಡ್ ಮಾಡಲು ಪೊಲೀಸರ ಯತ್ನ
ಆರೋಪಿ ಅಬ್ದುಲ್ ಮುಖ್ತದೀರ್ ಜತೆ ಆತನ ತಮ್ಮನನ್ನೂ ವಿಚಾರಣೆ
ಆರೋಪಿ ಅಬ್ದುಲ್ ಮುಖ್ತದೀರ್ ಜತೆ ಆತನ ತಮ್ಮನನ್ನೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಉಗ್ರ ಚಟುವಟಿಕೆ ಸಂಬಂಧಿಸಿ ಮುಖ್ತದೀರ್ ತಮ್ಮನಿಂದ ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಪ್ರಸ್ತುತ ದೊರಕಿದ ಮಾಹಿತಿ ಪ್ರಕಾರ ಮುಖ್ತದೀರ್ ತಮ್ಮನ ಕೈವಾಡ ಪ್ರಕರಣದಲ್ಲಿಲ್ಲ ಎನ್ನಲಾಗುತ್ತಿದೆ. ಹೊನ್ನಾವರದ ಪೊಲೀಸ್ ಠಾಣೆಯೊಂದರಲ್ಲಿ ಸದ್ಯಕ್ಕೆ ಮುಖ್ತದೀರ್ ಹಾಗೂ ಆತನ ತಮ್ಮನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿರುವ ಎನ್‌ಐಎ
ತುಮಕೂರು: ನಗರದಲ್ಲಿ ಶಂಕಿತ ಉಗ್ರನನ್ನ ಇಂದು ಬೆಳಗಿನಜಾವ 4 ಗಂಟೆ ಸುಮಾರಿಗೆ ಎನ್‌ಐಎ ಬಂಧಿಸಿದ್ದು, ಜಿಲ್ಲೆಯ ಜಯನಗರದಲ್ಲಿ ವಾಸವಿದ್ದ ಎನ್ನಲಾಗಿದ್ದು, ಸದ್ಯ ಎನ್‌ಐಎ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಬಂಧಿತನನ್ನು ತುಮಕೂರಿನ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಎನ್ನಲಾಗಿದೆ. ಮರಳೂರುದಿನ್ನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ತನಿಖೆ ವೇಳೆ ಪತ್ತೆಯಾದ ಶಂಕಿತ ಉಗ್ರರ ಅಜೆಂಡಾ
ನಗರ ಅಪರಾಧ ವಿಭಾಗ (City Crime Branch) ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರ ವಿಚಾರಣೆ ವೇಳೆ ಹಲವು ಆಘಾತಕಾರಿ ಮಾಹಿತಿ ಪತ್ತೆಯಾಗಿದೆ. ಅಲ್ಖೈದಾ (Al Aaeda) ಉಗ್ರಗಾಮಿ ಸಂಘಟನೆಗೆ ಸೇರಲು ಇವರಿಬ್ಬರು ಏಕೆ ಮುಂದಾಗಿದ್ದರು ಎನ್ನುವ ಬಗ್ಗೆ ಪೊಲೀಸರು ಇದೀಗ ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆ ವೇಳೆ ಬೆಳಕಿಗೆ ಬಂದ ಮೂರು ಮುಖ್ಯ ಅಂಶಗಳು ಹುಬ್ಬೇರುವಂತೆ ಮಾಡಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ಸರ್ಕಾರ ತೆಗೆದುಹಾಕಿದೆ. ಈ ಮೂಲಕ ಕಾಶ್ಮೀರಕ್ಕೆ ಇದ್ದ ಸವಲತ್ತು ಕಿತ್ತುಕೊಳ್ಳಲಾಗಿದೆ. ನಮ್ಮಿಂದ ಕಾಶ್ಮೀರವನ್ನು ಕಿತ್ತುಕೊಂಡವರ ವಿರುದ್ಧ ನಾವು ಹೋರಾಡಲೇಬೇಕು ಎನ್ನುವ ನಿಲುವಿಗೆ ಇವರು ಬಂದಿದ್ದರು.
Published On - 1:15 pm, Sun, 31 July 22