ಪ್ರವಾಸಿಗರ ಗಮನಕ್ಕೆ; ಇಂದಿನಿಂದ ಮೂರು ದಿನಗಳ ಕಾಲ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ ನಿರ್ಬಂಧ

ನೇತ್ರಾಣಿ ದ್ವೀಪದಲ್ಲಿ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಮೂರು ದಿನಗಳ ಕಾಲ ಮೀನುಗಾರರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅ.14ರಿಂದ 16ರವರೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನೇತ್ರಾಣಿ ದ್ವೀಪದಿಂದ 10 ನಾಟಿಕಲ್​​ ಮೈಲು ದೂರದವರೆಗೆ ನಿಷೇಧ ಹೇರಲಾಗಿದೆ.

ಪ್ರವಾಸಿಗರ ಗಮನಕ್ಕೆ; ಇಂದಿನಿಂದ ಮೂರು ದಿನಗಳ ಕಾಲ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ ನಿರ್ಬಂಧ
ನೇತ್ರಾಣಿ ದ್ವೀಪ
Follow us
TV9 Web
| Updated By: ಆಯೇಷಾ ಬಾನು

Updated on: Oct 14, 2024 | 7:29 AM

ಕಾರವಾರ, ಅ.14: ಬೋಟಿಂಗ್ ಎಂಜಾಯ್ ಮಾಡಲು, ಸ್ಕೂಬಾ ಡೈವಿಂಗ್ (Scuba Diving) ಮಾಡಲು ಸಾವಿರಾರು ಮಂದಿ ಭೇಟಿ ನೀಡುವ ನೇತ್ರಾಣಿ ದ್ವೀಪದಲ್ಲಿ (Netrani Island) ಮೀನುಗಾರರು ಹಾಗೂ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ದ್ವೀಪದಲ್ಲಿ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಮೂರು ದಿನಗಳ ಕಾಲ ಮೀನುಗಾರರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಅ.14ರಿಂದ 16ರವರೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನೇತ್ರಾಣಿ ದ್ವೀಪದಿಂದ 10 ನಾಟಿಕಲ್​​ ಮೈಲು ದೂರದವರೆಗೆ ನಿಷೇಧ ಹೇರಲಾಗಿದೆ. ಆಗಸದಿಂದ ಯುದ್ಧ ಫೈಟರ್ ಮೂಲಕ ನೌಕಾದಳದಿಂದ ಸಮರಾಭ್ಯಾಸ ನಡೆಯಲಿದೆ. ಆಗಸದಿಂದ ನೇತ್ರಾಣಿ ದ್ವೀಪದಲ್ಲಿ ಫೈರಿಂಗ್ ನಡೆಯುವುದರಿಂದ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ 3 ದಿನ ನಿರ್ಬಂಧ ಹೇರಲಾಗಿದೆ.

ಮುರುಡೇಶ್ವರ ಕರ್ನಾಟಕದ ಪ್ರಸಿದ್ಧ ಸ್ಥಳ. ಇಲ್ಲಿಗೆ ಪ್ರತಿದಿನ ನೂರಾರ ಮಂದಿ ಭೇಟಿ ನೀಡುತ್ತಾರೆ. ಮುರುಡೇಶ್ವರ ದೇವಸ್ಥಾನ ನೋಡಲು, ಬೀಚ್​ನಲ್ಲಿ ಎಂಜಾಯ್ ಮಾಡಲು ಹಾಗೂ ನೇತ್ರಾಣಿ ದ್ವೀಪಕ್ಕೆ ಹೋಗಲು ಜನ ಸಾಗರವೇ ಹರಿದುಬರುತ್ತೆ. ಸದ್ಯ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ಇಲ್ಲಿ ಪ್ರವಾಸಿಗರು, ಮೀನುಗಾರರಿಗೆ ಪ್ರವೇಶವಿಲ್ಲ.

ಇದನ್ನೂ ಓದಿ: ಪತ್ನಿ ಹೆಸರಲ್ಲಿ ಸವದತ್ತಿ ಯಲ್ಲಮ್ಮಗೆ ಸಿದ್ದರಾಮಯ್ಯ ವಿಶೇಷ ಅರ್ಚನೆ

ನೇತ್ರಾಣಿ ದ್ವೀಪ ಸ್ಕೂಬಾ ಡೈವಿಂಗ್​ಗೆ ಹೆಸರುವಾಸಿಯಾಗಿದೆ. ಸ್ಕೂಬಾ ಡೈವಿಂಗ್​ ಮಾಡಲು ಇಲ್ಲಿಗೆ ಜನ ಭೇಟಿ ನೀಡುತ್ತಾರೆ, ಅದರಲ್ಲೂ ದಿ.ಪುನೀತ್ ರಾಜ್​ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿಯಲ್ಲಿ ಪುನೀತ್ ಅವರು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್​ ಮಾಡಿದ್ದಾರೆ. ಈ ಚಿತ್ರದ ಬಳಿಕ ನೇತ್ರಾಣಿ ದ್ವೀಪಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.

ಬಹುತೇಕರು ಶುಕ್ರವಾರ ಸಂಜೆ 6.50ಕ್ಕೆ ಬೆಂಗಳೂರಿನಿಂದ ಹೊರಡುವ ಟ್ರೈನ್ ಮೂಲಕ ಶನಿವಾರ ಬೆಳಗ್ಗೆ 6.00ಕ್ಕೆ ಮುರುಡೇಶ್ವರಕ್ಕೆ ತಲುಪುತ್ತಾರೆ. ಬಳಿಕ ತಮ್ಮ ವೀಕ್ ಎಡ್ ಎಂಜಾಯ್ ಮಾಡ್ತಾರೆ. ಇನ್ನು ಸ್ಕೂಬಾ ಡೈವಿಂಗ್ ಮಾಡಲು ಮೊದಲೆ ಬುಕ್ಕಿಂಗ್ ಮಾಡಬೇಕು. ಆನ್​ಲೈನ್ ಮೂಲಕ ಪ್ಯಾಕೇಜ್ ಬುಕ್ಕಿಂಗ್ ಮಾಡಿಕೊಂಡು ಬರಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ