ಕಾರವಾರದಿಂದ ಗೋವಾಗೆ ಸಾಗಿಸುತ್ತಿದ್ದ 41 ಕಪ್ಪೆಗಳ ರಕ್ಷಣೆ, ಕಪ್ಪೆ ರಕ್ಷಣೆ ಏಕೆ? ಏನಿದರ ಗುಟ್ಟು?

ಬಸ್‌ನಲ್ಲಿ ಗೋವಾಗೆ ಸಾಗಾಟ ಮಾಡುತ್ತಿದ್ದ 41 ಬುಲ್ ಫ್ರಾಗ್ ಕಪ್ಪೆಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಹಾಗಾದ್ರೆ, ಕಪ್ಪೆ ರಕ್ಷಣೆ ಏಕೆ? ಬುಲ್ ಫ್ರಾಗ್ ಕಪ್ಪೆ ತೆಗೆದುಕೊಂಡು ಹೋಗಿ ಏನ್ ಮಾಡ್ತಾರೆ? ಏನಿದರ ಹಿಂದಿನ ಗುಟ್ಟು? ಇಲ್ಲಿದೆ ವಿವರ

ಕಾರವಾರದಿಂದ ಗೋವಾಗೆ ಸಾಗಿಸುತ್ತಿದ್ದ 41 ಕಪ್ಪೆಗಳ ರಕ್ಷಣೆ, ಕಪ್ಪೆ ರಕ್ಷಣೆ ಏಕೆ? ಏನಿದರ ಗುಟ್ಟು?
Follow us
|

Updated on:Jun 18, 2024 | 3:35 PM

ಕಾರವಾರ, (ಜೂನ್ 18): ಭಕ್ಷಣೆಗಾಗಿ ಗೋವಾಗೆ (Goa) ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದ 41 ಬುಲ್ ಫ್ರಾಗ್ ಕಪ್ಪೆಗಳನ್ನು(bullfrog) ಕಾರವಾರದ (Karwar) ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಗೋವಾ ಮೂಲದ ಇಬ್ಬರನ್ನು ಬಂಧಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್ ಬಳಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು, ಗೋವಾ ಮೂಲದ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ಹಾಗೂ ನಿರ್ವಾಹಕ ಜಾನು ಲೂಲಿಮ್ ಎಂಬವರನ್ನು ಬಂಧಿಸಿದ್ದಾರೆ.

ಕಪ್ಪೆ ರಕ್ಷಣೆ ಏಕೆ? ಏನಿದರ ಹಿಂದಿನ ಗುಟ್ಟು?

ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಹೆಸರು ಪಡೆದಿರುವ ಕಪ್ಪೆಗಳ ಖಾದ್ಯ ಪ್ರಖ್ಯಾತಿ ಗಳಿಸಿದೆ. ಬುಲ್ ಫ್ರಾಗ್ ಜಾತಿಯ ಕಪ್ಪೆಗಳು ಅತೀ ದೊಡ್ಡದಾಗಿರುತ್ತದೆ. ಇದನ್ನು ಜೀವಂತವಾಗಿ ಹಿಡಿದು ಗೋವಾದಲ್ಲಿ ಇವುಗಳ ಕಾಲುಗಳನ್ನು ಕಡಿದು ಫ್ರೈ ಮಾಡಿ ಭಕ್ಷಿಸುತ್ತಾರೆ. ಇದಲ್ಲದೇ ಜೀವಂತವಾಗಿಯೇ ಇವುಗಳ ಚರ್ಮ ತೆಗೆದು ಫ್ರೈ ಮಾಡಿ ತಿನ್ನುತ್ತಾರೆ. ಗೋವಾ ಭಾಗದಲ್ಲಿ ಈ ಕಪ್ಪೆಗಳ ಭಕ್ಷವನ್ನು ಜಂಪಿಂಗ್ ಚಿಕನ್ ಎನ್ನುತ್ತಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಅಬ್ದುಲ್​ ಸುಕ್ಕೂರ್ ಎನ್ಐಎ ವಶಕ್ಕೆ

ಗೋವಾ ಜನರು ಸೇರಿ, ವಿದೇಶಿಗರಿಗೂ ಈ ಕಪ್ಪೆ ಖಾದ್ಯ ಬಲು ಪ್ರೀತಿ. ಒಂದು ಕಪ್ಪೆ ಖಾಧ್ಯಕ್ಕೆ 1,500ಕ್ಕೂ ಹೆಚ್ಚು ದರ ವಿಧಿಸಲಾಗುತ್ತದೆ. ಇನ್ನು ಈ ಕಪ್ಪೆಗಳು ಗೋವಾ ಭಾಗದಲ್ಲಿ ಸಿಗುವುದಿಲ್ಲ. ಹೀಗಾಗಿ ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ, ಅಂಕೋಲ ಸೇರಿದಂತೆ ಇತರೆ ಭಾಗದಿಂದ ಇವುಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂ.ಗಳ ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಕಾರವಾರ, ಅಂಕೋಲ ಭಾಗದಲ್ಲಿ ಅತೀ ಹೆಚ್ಚಿದ್ದು ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:32 pm, Tue, 18 June 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್