ಕಾರವಾರ: ಜಗತ್ತಿನಲ್ಲಿ ಅದೆಷ್ಟೋ ಜನರಿಗೆ ಎಡಗೈಯಲ್ಲಿ ತಿನ್ನುವ ಅಭ್ಯಾಸ ಇರುತ್ತೆ. ಆದರೆ ಇಲ್ಲೊಂದು ಕಡೆ ಅದೇ ಅಭ್ಯಾಸ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಎಡಗೈನಲ್ಲಿ ಊಟ ಮಾಡಿದಳೆಂದು ವಧುವನ್ನು ವರ ಬಿಟ್ಟು ಹೋಗಲು ಮುಂದಾದ ಅಪರೂಪದ ವಿಚಿತ್ರ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ನಡೆದಿದೆ.
ಜೊಯಿಡಾದ ಕಬೀರ್ ಕಾತು ನಾಯ್ಕ್ ಹಾಗೂ ಯಲ್ಲಾಪುರದ ಮಧುರಾ ಎಂಬುವವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾಂಗಲ್ಯ ಧಾರಣೆ ಬಳಿಕ ನವ ವಧು-ವರರು ಊಟಕ್ಕೆ ಕುಳಿತ ಸಂದರ್ಭದಲ್ಲಿ ವಧು ಎಡಗೈನಲ್ಲಿ ಊಟ ಮಾಡಿದ್ದ ಕಾರಣ ವಧು ಎಡಗೈನಲ್ಲಿ ಊಟ ಮಾಡುತ್ತಾಳೆ ಎಂದು ಕೋಪಿತಗೊಂಡ ವರ ಹಾಗೂ ವರನ ಪೋಷಕರು ಆಕೆಯನ್ನು ಬಿಟ್ಟು ಕಾರನ್ನೇರಿದ್ದಾರೆ. ಆದರೆ, ವರ ಹಾಗೂ ಆತನ ಕುಟುಂಬವನ್ನು ಸ್ಥಳದಿಂದ ತೆರಳದಂತೆ ಮದುವೆಗೆ ಬಂದ ಜನ ತಡೆದಿದ್ದಾರೆ.
ಹುಡುಗಿ ನೋಡಿ ಕೇವಲ ಮೂರೇ ದಿನದಲ್ಲಿ ಮದುವೆ ಮಾಡಿಕೊಳ್ಳಲು ವರ ಮುಂದಾಗಿದ್ದ. ವರ ಕಬೀರ್ ಕಾತು ನಾಯ್ಕ್, ಹುಡುಗಿಗೆ ಪೋಲಿಯೊ ಇದ್ದರೂ ಮಾನವೀಯತೆ ಮೆರೆದು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ, ಇಂದು ಎಡಗೈನಲ್ಲಿ ಊಟ ಮಾಡಿದಳೆಂದು ವಧುವನ್ನ ಬಿಟ್ಟು ತೆರಳಲು ಮುಂದಾಗಿದ್ದಾರೆ. ಹೀಗಾಗಿ ಜನ ವರನಿಗೆ ಬುದ್ಧಿವಾದ ಕೇಳಿದ್ದಾರೆ. ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೋಲಿಸರು ಹಾಗೂ ಮಹಿಳಾ ಕೇಂದ್ರದ ಸಿಬ್ಬಂದಿ ವಧು-ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕೊಂಡೊಯ್ದು ವರನಿಗೆ ಬುದ್ಧಿ ಹೇಳಿ ಮನ ಪರಿವರ್ತನೆ ಮಾಡಿದ್ದಾರೆ. ವರನಿಂದ ಮುಚ್ಚಳಿಕೆ ಬರೆಸಿದ ಬಳಿಕ ವಧು-ವರರನ್ನು ದಾಂಪತ್ಯ ಜೀವನ ಮುಂದುವರೆಸಲು ಕಳುಹಿಸಿದ್ದಾರೆ. ಸದ್ಯ ಯಾವುದೇ ಕೇಸ್ ದಾಖಲಾಗದೆ, ಪ್ರಕರಣ ಸುಖಾಂತ್ಯ ಕಂಡಿದೆ.
ಇದನ್ನೂ ಓದಿ: ತರಬೇತಿ ಇವಿಎಂಗಳ ಸಾಗಣೆಯ ಆರೋಪ; ವಾರಾಣಸಿ ಎಡಿಎಂ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಆದೇಶ
Russia- Ukraine Crisis: ಡೀಸೆಲ್ ಕೊರತೆ ಎದುರಿಸುತ್ತಿರುವ ಯುರೋಪ್ಗೆ ರಿಲಯನ್ಸ್ನಿಂದ ಪೂರೈಕೆ