ಉತ್ತರ ಕನ್ನಡ, ಅ.06: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ(Murdeshwar) ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿ. ಬೆಂಗಳೂರಿನ ಧನುಶ್ .ಡಿ. ರಕ್ಷಣೆಗೊಳಗಾದ ವಿದ್ಯಾರ್ಥಿ.
ಬೆಂಗಳೂರಿನಿಂದ ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ನೀರಿನಲ್ಲಿ ಮುಳಿಗಿದ್ದು, ಧನುಷ್ನನ್ನು ನೋಡಿದ ಲೈಫ್ ಗಾರ್ಡ್ ಹಾಗೂ ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದರು. ಗೌತಮ್ ಕೂಡ ಈಜಲು ಬಂದಿರುವ ಮಾಹಿತಿಯನ್ನ ಧನುಷ್ ಹೇಳದಿದ್ದರಿಂದ ಮಾಹಿತಿ ತಿಳಿಯದೇ ಓರ್ವನನ್ನು ಮಾತ್ರ ರಕ್ಷಣೆ ಮಾಡಲಾಗಿದೆ. ವಿದ್ಯಾರ್ಥಿ ಸಂಖ್ಯೆ ಎಣಿಸಿದಾಗ ಗೌತಮ್ ಕೂಡ ಸಮುದ್ರದಲ್ಲಿ ಈಜಲು ಹೋಗಿರುವುದು ಗಮನಕ್ಕೆ ಬಂದಿದೆ. ನಂತರ ಮುರುಡೇಶ್ವರ ಎ.ಸ್.ಐ ರುದ್ರೇಶ್, ಲೈಪ್ ಗಾರ್ಡ್ ಹಾಗೂ ನೇತ್ರಾಣಿ ಅಡ್ವೆಂಚರ್ಸ ತಂಡ ಶೋಧ ನಡೆಸಿ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಈ ಕುರಿತು
ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳಗಾಗುವಷ್ಟರಲ್ಲಿ 13 ವರ್ಷದ ಬಾಲಕಿ ಸಾವು: 2 ತಿಂಗಳ ಬಳಿಕ ಪಿಎಂ ವರದಿಯಲ್ಲಿ ಸಾವಿನ ರಹಸ್ಯ ಬಯಲು
ಹಾಸನ: ನಗರದ ಬಿ.ಎಂ.ರಸ್ತೆಯಲ್ಲಿರುವ ಗೋಕುಲ್ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಸರ್ಕಾರಿ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಂಗಸ್ವಾಮಿ (57) ಆತ್ಮಹತ್ಯೆಗೆ ಶರಣಾದ ಶಿಕ್ಷಕ. ಬೇಲೂರು ತಾಲ್ಲೂಕಿನ, ತೊಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಅವರು, ನಿನ್ನೆ ಗೋಕುಲ್ ಲಾಡ್ಜ್‌ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ನಿವೃತ್ತಿಯಾಗಲು ಮೂರು ವರ್ಷ ಮಾತ್ರ ಬಾಕಿಯಿತ್ತು. ಹೀಗಿರುವಾಗ ಈ ದುರ್ಘಟನೆ ನಡೆದಿದ್ದು, ಶಿಕ್ಷಕ ರಂಗಸ್ವಾಮಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Sun, 6 October 24