ಕೋಲಾರ: ಪಿತೃಪಕ್ಷ ಪೂಜೆ ವೇಳೆ ಹೆಜ್ಜೇನು ದಾಳಿ; ಓರ್ವ ವ್ಯಕ್ತಿ ಸಾವು
ಕೋಲಾರ(Kolar) ತಾಲೂಕಿನ ಜಂಗಾಲಹಳ್ಳಿಯಲ್ಲಿ ಕುಟುಂಬದ ಹಿರಿಯರ ಸಮಾಧಿಗೆ ಪೂಜೆ ಮಾಡುವಾಗ ಹಾಕಿದ ಸಾಂಬ್ರಾಣಿ ಹೊಗೆಗೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಆರು ಜನರು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೋಲಾರ, ಅ.01: ಪಿತೃಪಕ್ಷ ಪೂಜೆ ವೇಳೆ ಹಾಕಿದ ಸಾಂಬ್ರಾಣಿ ಹೊಗೆಗೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ವೆಂಕಟಸ್ವಾಮಿ(60) ಮೃತರು. ಇಂದು(ಮಂಗಳವಾರ) ಕೋಲಾರ(Kolar) ತಾಲೂಕಿನ ಜಂಗಾಲಹಳ್ಳಿಯ ಅರಳಿ ಮರ ಬಳಿಯ ಸ್ಮಶಾನದಲ್ಲಿ ಕುಟುಂಬದ ಹಿರಿಯರ ಸಮಾಧಿಗೆ ಪೂಜೆ ಮಾಡುವಾಗ ಹಾಕಿದ ಸಾಂಬ್ರಾಣಿ ಹೊಗೆಗೆ ಹೆಜ್ಜೇನು ದಾಳಿ ಮಾಡಿದ್ದು, ಒಂದೇ ಕುಟುಂಬದ ಆರು ಜನರು ಗಾಯಗೊಂಡಿದ್ದಾರೆ. ಕೂಡಲೇ ಗಾಯಗೊಂಡ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಪ್ರವಹಿಸಿ 11 ಕುರಿ, ಶ್ವಾನ ಬಲಿ
ಗದಗ: ಗಜೇಂದ್ರಗಡ ತಾಲೂಕಿನ ನರೇಗಲ್ ಹೊರವಲಯದಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯುತ್ ಪ್ರವಹಿಸಿ 11 ಕುರಿಗಳು ಹಾಗೂ ಒಂದು ಶ್ವಾನ ಬಲಿಯಾಗಿದೆ. ಹೌದು, ಜಮೀನೊಂದರಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿ ಬಿದ್ದಿದ್ದರೂ, ವಿದ್ಯುತ್ ನಿಷ್ಕ್ರೀಯಗೊಳಿಸದೇ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮ ಇದರಿಂದ ತಗುಲಿದ ಕರೆಂಟ್ ಶಾಕ್ಗೆ ಕುರಿಗಳು ಬಲಿಯಾಗಿದ್ದರೆ, ಓರ್ವ ಕುರಿಗಾಹಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಇದನ್ನೂ ಓದಿ:ಮೇಲುಕೋಟೆ ಜಾತ್ರೆ ವೇಳೆ ಹೆಜ್ಜೇನು ದಾಳಿ; 30ಕ್ಕೂ ಹೆಚ್ಚು ಜನರಿಗೆ ಗಾಯ, 7 ಜನರ ಸ್ಥಿತಿ ಗಂಭೀರ
ಇವು ಬೆಳಗಾವಿ ಜಿಲ್ಲೆಯ ನವಲಪ್ಪ ಹೆಗಡೆ ಎನ್ನುವ ಕುರಿಗಾಹಿಗೆ ಸೇರಿದ ಕುರಿಗಳಾಗಿದ್ದು, ನರೇಗಲ್ ಗ್ರಾಮದ ಜಮೀನೊಂದರಲ್ಲಿ 300 ಕುರಿಗಳ ಹಿಂಡಿನೊಂದಿಗೆ ಮೇಯಿಸುವಾಗ ಘಟನೆ ನಡೆದಿದೆ. ತಕ್ಷಣ ಎಚ್ಚೆತ್ತ ಕುರಿಗಾಹಿಯಿಂದ ಹೆಚ್ಚಿನ ಕುರಿಗಳು ಅಪಾಯದಿಂದ ಬಚಾವ್ ಆಗಿದೆ. ಇನ್ನು ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ಈ ಘಟನೆ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ