ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ; ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಜಲಸಾಹಸ ಸಂಸ್ಥೆಯ ಗಣೇಶ್ ಹರಿಕಾಂತ್ರ ಅವರ ಮಾರ್ಗದರ್ಶನದಲ್ಲಿ ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡಿದ್ದಾರೆ. ಸಮುದ್ರದ 200 ಫೀಟ್ ಆಳಕ್ಕೆ ಇಳಿದು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ; ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಸಮುದ್ರದ 200 ಅಡಿ ಆಳಕ್ಕೆ ಇಳಿದು ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ
Follow us
| Updated By: preethi shettigar

Updated on:Nov 01, 2021 | 3:05 PM

ಉತ್ತರ ಕನ್ನಡ: 66 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಲಾಗಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುರುಡೇಶ್ವರ ನೇತ್ರಣಾಣಿ ನಡುಗಡ್ಡೆ ಭಾಗದಲ್ಲಿ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವನ್ನು ಆಚರಸಿಲಾಗಿದೆ.  ಅರಬ್ಬಿ ಸಮುದ್ರದಾಳದಲ್ಲಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯು ಸ್ಕೂಬಾ ಡೈ ಮಾಡುವ ಸಾಹಸಿಗಳ ಮೂಲಕ ಸಮುದ್ರದಾಳದಲ್ಲಿ 20 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಜಲಸಾಹಸ ಸಂಸ್ಥೆಯ ಗಣೇಶ್ ಹರಿಕಾಂತ್ರ ಅವರ ಮಾರ್ಗದರ್ಶನದಲ್ಲಿ ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡಿದ್ದಾರೆ. ಸಮುದ್ರದ 200 ಅಡಿ ಆಳಕ್ಕೆ ಇಳಿದು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ. ನಂತರ ಮುರುಡೇಶ್ವರದ ಕಡಲಲ್ಲಿ ಕನ್ನಡ ಧ್ವಜ ಹಿಡಿದು ಪ್ರದರ್ಶಿಸಿ ಕನ್ನಡ ಅಭಿಮಾನ ಮೆರೆದಿದ್ದಾರೆ.

kannada flag

ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡಿದ್ದಾರೆ

ಇದನ್ನೂ ಓದಿ: Karnataka Rajyotsava 2021: ಕನ್ನಡಕ್ಕಿದೆ ಪ್ರಾದೇಶಿಕತೆಯ ಛಾಪು; ಆಯಾ ಸ್ಥಳ, ಜನಾಂಗಕ್ಕೆ ಅನುಗುಣವಾಗಿ ಬದಲಾಗುತ್ತದೆ ಆಡುನುಡಿ

ಕರ್ನಾಟಕ ರಾಜ್ಯದ ಮೊದಲ ಹಿಮೋಫಿಲಿಯಾ ಸಂಸ್ಥೆ: 32 ವರ್ಷಗಳ ಸಾರ್ಥಕ ಸೇವೆಗೆ ಒಲಿದು ಬಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Published On - 3:02 pm, Mon, 1 November 21