ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ಮಹಿಳೆ ಕೇರಳದಲ್ಲಿ ಪತ್ತೆ: ಆ ಒಂದೇ ಒಂದು ಸುಳಿವಿನಿಂದ ಪತ್ತೆ ಹಚ್ಚಿದ ಪೊಲೀಸರು​

| Updated By: ಗಂಗಾಧರ​ ಬ. ಸಾಬೋಜಿ

Updated on: Feb 09, 2024 | 9:59 PM

ಫೆ. 7 ರಂದು ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಎಮಿ ಯಮಾಝಕಿ (43) ಕೇರಳ ರಾಜಧಾನಿ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆ ಆಗಿದ್ದಾರೆ. ಗೋಕರ್ಣದ ಕಾಟೇಜ್​ನಲ್ಲಿ ತಂಗಿದ್ದಾಗ ದಂಪತಿ ನಡುವೆ ಮನಸ್ತಾಪವಾಗಿತ್ತು. ಪತಿ ಮೇಲಿನ ಕೋಪದಿಂದ ರೈಲು ಹತ್ತಿ ಕೇರಳಕ್ಕೆ ತೆರಳಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ. ಆನ್​ಲೈನ್ ಸಂದೇಶ ಆಧರಿಸಿ ಜಪಾನ್ ಮಹಿಳೆಯನ್ನು ಸದ್ಯ ಗೋಕರ್ಣ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ಮಹಿಳೆ ಕೇರಳದಲ್ಲಿ ಪತ್ತೆ: ಆ ಒಂದೇ ಒಂದು ಸುಳಿವಿನಿಂದ ಪತ್ತೆ ಹಚ್ಚಿದ ಪೊಲೀಸರು​
ಕೇರಳದಲ್ಲಿ ಪತ್ತೆಯಾದ ಜಪಾನ್ ಮಹಿಳೆ
Follow us on

ಕಾರವಾರ, ಫೆಬ್ರವರಿ 9: ಗೋಕರ್ಣದಿಂದ ನಾಪತ್ತೆ (missing) ಯಾಗಿದ್ದ ಜಪಾನ್ (Japan) ದೇಶದ ಪ್ರವಾಸಿ ಮಹಿಳೆ ಎಮಿ ಯಮಾಝಕಿ (43) ಕೇರಳ ರಾಜಧಾನಿ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆ ಆಗಿದ್ದಾರೆ. ವಿಶೇಷ ತಂಡ ರಚಿಸಿದ್ದ ಪಿಎಸ್​ಐ ಖಾದರ್ ಬಾಷಾ, ಸುಧಾ ಅಘನಾಶಿನಿ ನೇತೃತ್ವದಲ್ಲಿ ಪತ್ತೆ ಮಾಡಲಾಗಿದೆ. ಫೆ.4ರಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್​ನಲ್ಲಿ ಪತಿ ಜತೆ ತಂಗಿದ್ದರು. ಆದರೆ ಪತಿ ಮಲಗಿದ್ದ ವೇಳೆ ಅಂದರೆ ಫೆ.5ರ ಬೆಳಗ್ಗೆ 10.15ರ ಸುಮಾರಿಗೆ ಕಾಟೇಜ್​ನಿಂದ ಹೊರಬಂದಿದ್ದ ಎಮಿ ಯಮಾಝಕಿ ಬಳಿಕ ನಾಪತ್ತೆಯಾಗಿದ್ದರು. ಎಮಿ ಪತಿ ದೈ ಯಮಾಝಕಿ ಗೋಕರ್ಣ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾದ ನಂತರ ಆನ್​ಲೈನ್​ನಲ್ಲಿ ಎಮಿ ಯಮಾಝಕಿ ಸಂಪರ್ಕದಲ್ಲಿದ್ದರು. ಅದನ್ನು ಆಧರಿಸಿ ತಂಡದೊಂದಿಗೆ ಕೇರಳಕ್ಕೆ ತೆರಳಿದ್ದ ಗೋಕರ್ಣ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಪತಿ ಜೊತೆ ಕೇರಳಕ್ಕೆ ಭೇಟಿ ನಂತರ ಗೋಕರ್ಣಕ್ಕೆ ಬಂದಿದ್ದರು. ಗೋಕರ್ಣದ ಕಾಟೇಜ್​ನಲ್ಲಿ ತಂಗಿದ್ದಾಗ ದಂಪತಿ ನಡುವೆ ಮನಸ್ತಾಪವಾಗಿತ್ತು. ಪತಿ ಮೇಲಿನ ಕೋಪದಿಂದ ರೈಲು ಹತ್ತಿ ಕೇರಳಕ್ಕೆ ತೆರಳಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ. ಮಹಿಳೆ ಪತಿಗೆ ಕಳುಹಿಸಿದ್ದ ಆನ್​ಲೈನ್ ಸಂದೇಶ ಆಧರಿಸಿ ಕಾರ್ಯಾಚರಣೆ ಮಾಡಿ, ಅದರಲ್ಲಿಯೂ ವಿದೇಶಿ ಪ್ರವಾಸಿಗರಾಗಿದ್ದರಿಂದ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ.

ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಮುಳುಗಿ ಸಾವು

ಉತ್ತರ ಕನ್ನಡ: ಹಳ್ಳದಲ್ಲಿ ಮುಳುಗಿ ತಂದೆ-ಮಗ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ನಡೆದಿದೆ. ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕ್ರುಸಾಬ್, ಪುತ್ರ ತನ್ವೀರ್ ಮೃತರು. ನಿನ್ನೆ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಉತ್ತರ ಕನ್ನಡ: ಬಾಚಣಕಿಯಲ್ಲಿ ಅನುಮಾನಸ್ಪದ ವಸ್ತು ಸ್ಫೋಟ, ಕುರಿಗಾಹಿಗೆ ಗಂಭೀರ ಗಾಯ

ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರಿಗೆ ಅನುಮಾನ ಬಂದಿದ್ದು, ಇಂದು ಕುಟುಂಬಸ್ಥರ ಹುಡುಕಾಟ ವೇಳೆ ಹಳ್ಳದಲ್ಲಿ ಮೃತದೇಹಗಳು ಪತ್ತೆ ಆಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಠಾಣೆಯ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

3 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದ ಕಳ್ಳರು

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್​ ತಾ.ಕಾಚನಾಯಕನಹಳ್ಳಿ ಸರಗಳ್ಳತನ ಮುಂದುವರೆದಿದ್ದು, 3 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಪೆನ್​ ಖರೀದಿಸುವ ನೆಪದಲ್ಲಿ ಅಂಗಡಿಗೆ ತಡರಾತ್ರಿ ಬೈಕ್​​ನಲ್ಲಿ ಬಂದ ಇಬ್ಬರು ಕಳ್ಳರು ಮಾನಸ ಎಂಬುವರ ಮಾಂಗಲ್ಯ ಸರ ಕದ್ದು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​

ಗುರುತು ಸಿಗದಿರಲು ಹೆಲ್ಮೆಟ್,​ ಮಾಸ್ಕ್​​ ಧರಿಸಿದ್ದರು. ಸರ ಕದ್ದೊಯ್ಯುವ ದೃಶ್ಯ ಸೆರೆ ಆಗಿದೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.