Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​

ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆ ತೆಗೆಯುತ್ತಿದ್ದೆವೆ. ಅದಕ್ಕೂ ಮುನ್ನ ಮನೆ ಮನೆಗೆ ಚಿಕಿತ್ಸೆ ನೀಡಿ ಪ್ರಚಾರ ಮಾಡಲು ನಾವು ಬಂದಿದ್ದೆವೆ. ಪಾರ್ಶ್ವವಾಯುಗೆ ಪೀಡಿತರನ್ನು ಕೇವಲ 40 ದಿನದಲ್ಲಿ ಸರಿ ಮಾಡುತ್ತೇವೆ. ನಾವು ನೀಡುವ ಚಿಕಿತ್ಸೆಯಿಂದ ಬಹಳಷ್ಟು ಜನರು ವಾಸಿಯಾಗಿದ್ದಾರೆ ಎಂದು ಪಾರ್ಶ್ವವಾಯು ಪೀಡಿತರಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಲಾಗಿದೆ.

ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​
ಭಟ್ಕಳ ನಗರ ಪೊಲೀಸ್ ಠಾಣೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ವಿವೇಕ ಬಿರಾದಾರ

Updated on: Feb 09, 2024 | 11:54 AM

ಕಾರವಾರ, ಫೆಬ್ರವರಿ 09: ಪಾರ್ಶ್ವವಾಯು (Paralysis) ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ನಕಲಿ ವೈದ್ಯರ ಗ್ಯಾಂಗ್​ವೊಂದು ರೋಗಿಗಳಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದೆ. ಆರೋಪಿಗಳು ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ (Batakal), ಹೊನ್ನಾವರ (Honnavar) ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ. “ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆ ತೆಗೆಯುತ್ತಿದ್ದೆವೆ. ಅದಕ್ಕೂ ಮುನ್ನ ಮನೆ ಮನೆಗೆ ಚಿಕಿತ್ಸೆ ನೀಡಿ ಪ್ರಚಾರ ಮಾಡಲು ನಾವು ಬಂದಿದ್ದೆವೆ.

ಪಾರ್ಶ್ವವಾಯುಗೆ ಪೀಡಿತರನ್ನು ಕೇವಲ 40 ದಿನದಲ್ಲಿ ಸರಿ ಮಾಡುತ್ತೇವೆ. ನಾವು ನೀಡುವ ಚಿಕಿತ್ಸೆಯಿಂದ ಬಹಳಷ್ಟು ಜನರು ವಾಸಿಯಾಗಿದ್ದಾರೆ” ಎಂದು ಹೇಳಿಕೊಂಡು ಆರೋಪಿಗಳು ಮನೆ ಮನೆ ಭೇಟಿ ನೀಡಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವವರಿಗೆ “ನಾವೆ ನಿಮಗೆ ಖುದ್ದು ಮಸಾಜ್ ಮಾಡುತ್ತೇವೆ, ನಾವು ಔಷಧಿ ಕೊಡುತ್ತೇವೆ. ಅದನ್ನು ತೆಗೆದುಕೊಂಡು ನಾವು ಹೇಳಿದ ಹಾಗೆ ಆಸನಗಳನ್ನ ಮಾಡಿದರೆ, ಕೆವಲ 40 ದಿನದಲ್ಲಿ ಪಾರ್ಶ್ವ ವಾಯು ಪಿಡಿತರನ್ನ ಸರಿ ಮಾಡುತ್ತೇವೆ. ವೈದ್ಯರು ನೀಡಿದ ಔಷಧಿ ಪಡೆಯಬೇಡಿ” ಎಂದು ಜನರನ್ನ ನಂಬಿಸಿ ಸಾವಿರಾರು ರೂಪಾಯಿ ಪಡೆದು ಆರೋಪಿಗಳು ಪರಾರಿ ಆಗಿದ್ದಾರೆ. ರೋಗಿಗಳು ವೈದ್ಯರು ನೀಡಿದ ಔಷಧಿ ತೆಗೆದುಕೊಳ್ಳದೆ ಆರೋಗ್ಯ ಇನ್ನಷ್ಟು ಹಾಳಾಗುತ್ತಿದೆ. ಆರೋಪಿಗಳು ಚಿಕ್ಸಿತ್ಸೆ ನೀಡಿದೆ ಹಣ ಪಡೆದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಯುವಕರಲ್ಲಿ ಉಂಟಾಗುವ ಪಾರ್ಶ್ವವಾಯುವಿನಲ್ಲಿ ಒತ್ತಡ, ಹೈಪರ್​ಟೆನ್ಷನ್ ಪಾತ್ರವೇನು?

ಭಟ್ಕಳ ನಗರದ ಖಾಸಗಿ ಶಾಲಾ ಶಿಕ್ಷಕ ಪದ್ಮಯ್ಯ ಎಂಬುವವರ ತಾಯಿಗೆ ಪಾರ್ಶ್ವ ವಾಯು ಆಗಿತ್ತು. ಇವರಿಗೆ ತಮ್ಮ ಮೋಡಿಯ ಮಾತುಗಳಿಂದ ನಂಬಿಸಿ ಕೇವಲ ಎರಡೆ ದಿನದಲ್ಲಿ 26 ಸಾವಿರ ಪಡೆದು ಪರಾರಿಯಾಗಿದ್ದಾರೆ. ವಂಚಕರ ಚಲನ-ವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಂಚನೆಗೊಳಗಾದ ಶಿಕ್ಷಕ ಪದ್ಮಯ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಮಗೆ ಆದ ವಂಚನೆ ಬೇರೆ ಯಾರಿಗೂ ಆಗಬಾರದು. ಹಣದ ಜೊತೆಗೆ ರೋಗಿಗಳ ಆರೋಗ್ಯವು ಹಾಳು ಮಾಡುತ್ತಾರೆ. ವಂಚಕರನ್ನು ಆದಷ್ಟು ಬೇಗ ಬಂಧಿಸುವಂತೆ ಪದ್ಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!