ಕುಮಟಾ: ಅಘನಾಶಿನಿ ನದಿಗೆ ನಿರ್ಮಿಸ್ತಿದ್ದ ಸೇತುವೆಯ ಸ್ಲ್ಯಾಬ್ ಕುಸಿತ; ಕೆಳಗಿದ್ದ ಟ್ರಕ್ ಜಖಂ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 27, 2024 | 7:19 PM

ಕುಮಟಾ(Kumta) ತಾಲ್ಲೂಕಿನ ತಾರೀಬಾಗಿಲು ಹೆಗಡೆ ಸಂಪರ್ಕಿಸುವ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಸೇತುವೆ(Bridge) ಕೆಳಗಿದ್ದ ಟ್ರಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆಯ ಕಳಪೆ ಕಾಮಗಾರಿ ಕಂಡು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಟಾ: ಅಘನಾಶಿನಿ ನದಿಗೆ ನಿರ್ಮಿಸ್ತಿದ್ದ ಸೇತುವೆಯ ಸ್ಲ್ಯಾಬ್ ಕುಸಿತ; ಕೆಳಗಿದ್ದ ಟ್ರಕ್ ಜಖಂ
ಅಘನಾಶಿನಿ ನದಿಗೆ ನಿರ್ಮಿಸ್ತಿದ್ದ ಸೇತುವೆಯ ಸ್ಲ್ಯಾಬ್ ಕುಸಿತ
Follow us on

ಉತ್ತರ ಕನ್ನಡ, ಮಾ.27: ಜಿಲ್ಲೆಯ ಕುಮಟಾ(Kumta) ತಾಲ್ಲೂಕಿನ ತಾರೀಬಾಗಿಲು ಮತ್ತು ಹೆಗಡೆ ಸಂಪರ್ಕಿಸುವ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಸೇತುವೆ(Bridge) ಕೆಳಗಿದ್ದ ಟ್ರಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಈ ವೇಳೆ ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆಯೇ ಕುಸಿದುಬಿದ್ದಿದೆ. ಸೇತುವೆಯ ಕಳಪೆ ಕಾಮಗಾರಿ ಕಂಡು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಿರ್ಮಾಣ ಹಂತದ ಸೇತುವೆ ಕುಸಿತದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದನ್ನು ಕೇಳಿ ಗುತ್ತಿಗೆದಾರ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಗ್ರಾಮಸ್ಥರು ‘ನೀವು ಕಳಪೆ ಕಾಮಗಾರಿ ಮಾಡಿ ಸೇತುವೆ ನಿರ್ಮಿಸಿ ಹೋದರೆ, ನಮ್ಮ ಗ್ರಾಮದ ಜನರು ಜೀವ ತೆರಬೇಕಿತ್ತು. ಪುಣ್ಯಕ್ಕೆ ನಿಮ್ಮ ಕಳಪೆ ಕೆಲಸದಿಂದ ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆ ಕುಸಿತವಾಗಿದೆ. ನಿಮ್ಮ ವಿರುದ್ಧ ದೂರು ದಾಖಲಿಸುತ್ತೇವೆ. ಜೊತೆಗೆ, ಗುಣಮಟ್ಟ ಪರಿಶೀಲನೆ ಮಾಡುವುದಕ್ಕೆ ದೂರು ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:Baltimore Bridge Collapse: ಬಾಲ್ಟಿಮೋರ್​ನ ಅತಿ ಉದ್ದದ ಸೇತುವೆ ಕುಸಿತ

ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದು ಕಳ್ಳತನ ಮಾಡಿದ ಖದೀಮರು

ತುಮಕೂರು: ‌ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದು ಮನೆಯ ಒಳಗಡೆ ಬ್ಯಾಗ್​ನಲ್ಲಿದ್ದ ಮೂರು ಲಕ್ಷ ಹಣವನ್ನ ಕಳ್ಳತನ ಮಾಡಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಊರ್ಕಿಹಳ್ಳಿ ಬಳಿ ನಡೆದಿದೆ. ಕೈಯಲ್ಲಿ ಗನ್ ಹಿಡಿದು ಕಳ್ಳತನಕ್ಕೆ ಬಂದಿದ್ದ ಕಳ್ಳರು, ಕೂಗಾಡಿದ್ರೆ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಗನ್ ಮೂರು ಬಾರಿ ಪೈರಿಂಗ್ ಮಾಡಿದ್ದಾರೆ.
ಈ ವೇಳೆ ಮನೆಯ ಮಾಲೀಕನ ಬಲಗಾಲಿಗೆ ಗಾಯವಾಗಿದೆ. ಈ ಕುರಿತು ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Wed, 27 March 24