ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಗಿಲೆದ್ದ ಭಾಷಾ ವಿವಾದ: ಕಾರವಾರ ನಗರಸಭೆಯೇ ಕನ್ನಡಿಗರ ಸ್ವಾಭಿಮಾನ ಕೆಣಕಿದೆ!

ಜಿಲ್ಲಾಡಳಿತ ಸರ್ಕಾರದ ನಿಯಮದಂತೆ ಸರ್ಕಾರಿ ಕಚೇರಿ ಹಾಗೂ ನಗರದ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಗೊಳಿಸಿ ಆದೇಶಿಸಿದೆ. ಆದ್ರೆ ಪರಭಾಷೆ ಅಭಿಮಾನ ಹೊಂದಿದ ಕಾರವಾರ ನಗರಸಭೆ ಸದಸ್ಯರ ಸಭೆ ನಡೆಸಿ ಕೊಂಕಣಿ ಫಲಕ ಹಾಕಲು ಇದೀಗ ಠರಾವು ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಗಿಲೆದ್ದ ಭಾಷಾ ವಿವಾದ: ಕಾರವಾರ ನಗರಸಭೆಯೇ ಕನ್ನಡಿಗರ ಸ್ವಾಭಿಮಾನ ಕೆಣಕಿದೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಗಿಲೆದ್ದ ಭಾಷಾ ವಿವಾದ: ಕಾರವಾರ ನಗರಸಭೆಯೇ ಕನ್ನಡಿಗರ ಸ್ವಾಭಿಮಾನ ಕೆಣಕಿದೆ!
TV9kannada Web Team

| Edited By: Ayesha Banu

Jun 30, 2022 | 8:22 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾಷೆ ಸಂಘರ್ಷ ಮತ್ತೆ ಮಿತಿಮೀರುತ್ತಿದೆ. ಭಟ್ಕಳದಲ್ಲಿ ಎದ್ದಿದ್ದ ಭಾಷಾ ವಿವಾದ ತಣ್ಣಗಾಗುವ ಮುಂಚೆ ಮತ್ತೆ ಕಾರವಾರ ನಗರಸಭೆ ಕೊಂಕಣಿ ಭಾಷೆಯ ಫಲಕ ಹಾಕಲು ಠರಾವು ಮಾಡಿದ್ದು ಇದೀಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.

ಕಳೆದ ಒಂದು ವಾರದಿಂದ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಭಾಷಾ ಸಂಘರ್ಷ ದೊಡ್ಡ ಸದ್ದು ಮಾಡುತ್ತಿದೆ. ಈ ಹಿಂದೆ ಕಾರವಾರ ನಗರಸಭೆ ಆಡಳಿತ ನಗರದ ನಾಮಫಲಕದಲ್ಲಿ ಹಿಂದಿ ಮಿಶ್ರಿತ ಕೊಂಕಣಿ, ದೇವನಾಗರಿ ಲಿಪಿಯಲ್ಲಿ ರಸ್ತೆಗಳ ಫಲಕ ಬರೆಸಿತ್ತು. ಇನ್ನು ಭಟ್ಕಳ ಪುರಸಭೆ ಕಚೇರಿಯಲ್ಲಿ ಸಹ ಉರ್ದು ಭಾಷೆಯ ನಾಮಫಲಕ ಹಾಕುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿತ್ತು. ಇದೀಗ ಭಟ್ಕಳ ಹಾಗೂ ಕಾರವಾರ ನಗರಸಭೆಯಲ್ಲಿ ಕನ್ನಡ ಸಂಘಟನೆಯ ಪ್ರತಿಭಟನೆಗೆ ಜಗ್ಗಿ ಕನ್ನಡ ಭಾಷೆಯ ಫಲಕವನ್ನು ಪೊಲೀಸರ ಬಿಗಿ ಭದ್ರತೆ ನಡುವೆ ತೆಗೆಸಿಹಾಕಿದೆ. ಜೊತೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಸರ್ಕಾರಿ ಕಚೇರಿಯ ನಾಮಫಲಕಗಳು ನಿಯಮದ ಪ್ರಕಾರ ಕನ್ನಡದಲ್ಲೇ ಇರಬೇಕು ಎಂದು ಆದೇಶ ಹೊರಡಿಸಿದ್ದು ಉರ್ದು ಮತ್ತು ಕೊಂಕಣಿ, ಮರಾಠಿ ಭಾಷಿಕರಿಗೆ ಹಿನ್ನಡೆಯಾಗುವಂತೆ ಮಾಡಿದೆ. ಇನ್ನು ಭಾಷಾ ವಿವಾದದ ಕುರಿತು ಇಂದು ಕಾರವಾರದಲ್ಲಿ ನಡೆದ ನಗರ ಸಭೆ ಮೀಟಿಂಗ್‌ನಲ್ಲಿ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಭಾಷೆ ಬಳಿಸಲು ಠರಾವು ಮಾಡಿ ಮತ್ತೆ ಬೆಂಕಿ ಹಚ್ಚಲು ಮುಂದಾಗಿದೆ. ಇದನ್ನೂ ಓದಿ: Kolar DC: ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿಯ ನಕಲಿ ಸಹಿ ಮಾಡಿದ ಪ್ರಕರಣ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್ ಆದರು!

ಜಿಲ್ಲಾಡಳಿತ ಸರ್ಕಾರದ ನಿಯಮದಂತೆ ಸರ್ಕಾರಿ ಕಚೇರಿ ಹಾಗೂ ನಗರದ ನಾಮಫಲಕದಲ್ಲಿ ಕನ್ನಡ ಕಡ್ಡಾಯ ಗೊಳಿಸಿ ಆದೇಶಿಸಿದೆ. ಆದ್ರೆ ಪರಭಾಷೆ ಅಭಿಮಾನ ಹೊಂದಿದ ಕಾರವಾರ ನಗರಸಭೆ ಸದಸ್ಯರ ಸಭೆ ನಡೆಸಿ ಕೊಂಕಣಿ ಫಲಕ ಹಾಕಲು ಇದೀಗ ಠರಾವು ಮಾಡಿದೆ. ಇದರ ಜೊತೆಗೆ ಕಾರವಾರ ತಾಲೂಕಿನ ಮೂಡಿಗೆರೆ ಗ್ರಾಮ ಪಂಚಾಯ್ತಿಯಲ್ಲೂ ಸಹ ನಾಮಫಲಕ ಮರಾಠಿ, ಕೊಂಕಣಿಯಲ್ಲಿ ಇರಬೇಕೆಂದು ಠರಾವು ಮಾಡಿದೆ. ಇನ್ನು ಭಟ್ಕಳ ಪುರಸಭೆಯಲ್ಲೂ ಸಹ ಉರ್ದು ನಾಮಫಲಕ ಅಳವಡಿಸಲು ಠರಾವು ಮಾಡಲು ಸಜ್ಜಾಗಿದೆ. ಹೀಗಾಗಿ ಒಂದು ವೇಳೆ ಕನ್ನಡ ನಾಮಫಲಕದ ಜೊತೆ ಕೊಂಕಣಿ, ಮರಾಠಿ, ಉರ್ದು ಫಲಕವನ್ನು ಸ್ಥಳೀಯ ಸಂಸ್ಥೆಗಳು ಹಾಕಿದಲ್ಲಿ ಸಂಘರ್ಷದ ಹೋರಾಟ ಮಾಡುವುದಾಗಿ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿದ್ದು ಮುಂದೆ ಭಾಷೆ ವಿಷಯದಲ್ಲಿ ಗಲಭೆಯಾದರೆ ಸ್ಥಳೀಯ ಸಂಸ್ಥೆಗಳೇ ಹೊಣೆ ಎಂದು ಎಚ್ಚರಿಸಿದೆ.

ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಉದ್ಧಟತನದಿಂದಾಗಿ ಇದೀಗ ಭಟ್ಕಳ, ಕಾರವಾರದಲ್ಲಿ ಭಾಷೆ ಸಂಘರ್ಷದ ಜೊತೆ ಧರ್ಮ ಸಂಘರ್ಷಕ್ಕೆ ತಿರುಗುವ ಹಂತ ತಲುಪಿದೆ. ಮತ್ತೆ ಸ್ಥಳೀಯ ಸಂಸ್ಥೆಗಳು ಉರ್ದು, ಮರಾಠಿ, ಕೊಂಕಣಿ ಭಾಷೆಯ ಅಭಿಮಾನದಿಂದ ಸರ್ಕಾರಿ ಫಲಕದಲ್ಲಿ ಪರಭಾಷೆ ಅಳವಡಿಸಿದರೆ ದೊಡ್ಡ ಅನಾಹುತ ಘಟಿಸುವುದರಲ್ಲಿ ಅನುಮಾನವಿಲ್ಲ.

ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada