ಶಾಂತರಾಮ ಸಿದ್ದಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತ ಫೋಟೊ ವೈರಲ್; ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ

ಸಂಘದ ಸ್ವಯಂ ಸೇವಕರಿಗೆ ಈ ಥರದ್ದು ಹೊಸದಲ್ಲ. ಮೊದಲು ಹೀಗೆ ಓಡಾಡ್ತಿದ್ದೆ. ಈಗಲೂ ಓಡಾಡ್ತಿದ್ದೇನೆ. ಮುಂದೆ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮುಗಿದ ಮೇಲೆ ಮತ್ತೆ ಹೀಗೆ ಓಡಾಡಲೇಬೇಕು ಎಂದು ಹೇಳಿದ್ದಾರೆ.

ಶಾಂತರಾಮ ಸಿದ್ದಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತ ಫೋಟೊ ವೈರಲ್; ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ
ಶಾಂತರಾಮ ಸಿದ್ದಿ
Follow us
TV9 Web
| Updated By: ganapathi bhat

Updated on:Dec 28, 2021 | 8:25 PM

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿರುವ ಫೋಟೊ ಒಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಂತಾರಾಮ ಸಿದ್ದಿ ಅವರ ಈ ಸರಳತೆಗೆ ಮೆಚ್ಚುಗೆ ಸೂಚಿಸಿ ಹಲವು ಮಂದಿ ಫೋಟೊ ಹಂಚಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯರ ಸರಳತೆ, ಜೀವನಶೈಲಿಯ ಬಗ್ಗೆ ಹೊಗಳಿಕೆಯ ನುಡಿಗಳನ್ನು ಬರೆದುಕೊಂಡಿದ್ದರು. ಈ ಫೋಟೊ ವೈರಲ್ ಆಗಿರುವುದರ ಬಗ್ಗೆ ಇದೀಗ ಶಾಂತರಾಮ ಸಿದ್ದಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಫೋಟೊ ವೈರಲ್ ಆಗಿರುವುದು ಸರಿ ಕಂಡಿಲ್ಲ, ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ. ಅವರ ಮಾತಿನ ವಿವರ ಇಲ್ಲಿ ನೀಡಲಾಗಿದೆ.

ಕಳೆದ ಎರಡು ದಿನಗಳಿಂದ ರಾಣೆಬೆನ್ನೂರಿನ ಬಸ್ ಸ್ಟಾಂಡ್​ನಲ್ಲಿ ಬಸ್​ಗೆ ಕಾಯುತ್ತಿರುವ ಫೋಟೊ ಹಾಕಿ ಹೊಗಳಿಕೆ ಮಾತು ಬರೆದಿದ್ದೀರಿ. ನನಗೆ ಅದು ಅಷ್ಟೊಂದು ಖುಷಿ ಕೊಟ್ಟಿಲ್ಲ. ಸಂಘದ ಸ್ವಯಂ ಸೇವಕರಿಗೆ ಈ ಥರದ್ದು ಹೊಸದಲ್ಲ. ಮೊದಲು ಹೀಗೆ ಓಡಾಡ್ತಿದ್ದೆ. ಈಗಲೂ ಓಡಾಡ್ತಿದ್ದೇನೆ. ಮುಂದೆ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಮುಗಿದ ಮೇಲೆ ಮತ್ತೆ ಹೀಗೆ ಓಡಾಡಲೇಬೇಕು ಎಂದು ಶಾಂತರಾಮ ಸಿದ್ದಿ ಹೇಳಿದ್ದಾರೆ.

ನಮ್ಮ ಹಿರಿಯರ ಬಗ್ಗೆ ನಾವು ಅನೇಕ ಘಟನೆಗಳನ್ನು ಕೇಳಿದ್ದೇವೆ. ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೈಕ್​ನಲ್ಲಿ ಮುಖ್ಯಮಂತ್ರಿಗಳ ಮನೆಗೆ ಬಂದದ್ದನ್ನು ನೋಡಿದ್ದೇವೆ. ಈಗಿನ ಶಿಕ್ಷಣ ಸಚಿವ ಬಿಸಿ ನಾಗೇಶ್ ಬ್ಯಾಗ್ ಹಿಡಿದುಕೊಂಡು ರೈಲು ಹತ್ತಿದ್ದನ್ನು ನೋಡಿದ್ದೇವೆ. ಅದಕ್ಕೂ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಗೆ ಸೈಕಲ್​ನಲ್ಲಿ ಬರುತ್ತಿದ್ದರು ಎಂಬುದನ್ನು ನಾವು ಕೇಳಿ ತಿಳಿದಿದ್ದೇವೆ ಎಂದು ಹಿರಿಯ ನಾಯಕರನ್ನು ನೆನಪಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಇರುವಾಗ ನಾನು ಬಸ್​ನಲ್ಲಿ ಹೋಗಿರುವುದನ್ನು ವಿಶೇಷವಾಗಿ, ಸರಳತೆ ಸರಳತೆ ಅನ್ನುವುದು ಸರಿ ಇಲ್ಲ ಅಂತ ಅನಿಸುತ್ತದೆ. ನಾವೆಲ್ಲಾ ಸಂಘದ ಸ್ವಯಂ ಸೇವಕರು ಹೀಗೇ ಇರುತ್ತೇವೆ ಮತ್ತು ಹೀಗೆ ಇರಬೇಕು. ಅವಶ್ಯಕತೆ ಇದ್ದಲ್ಲಿ ಕಾರ್ ಬಳಸುತ್ತೇವೆ. ಇಲ್ಲವಾದಲ್ಲಿ ಬಸ್ ಇದೆ. ಸರ್ಕಾರ ಉಚಿತವಾಗಿ ಟಿಕೆಟ್ ಕೊಟ್ಟಿದೆ. ಅದನ್ನು ನಾವು ಬಳಸುತ್ತೇವೆ. ಅದನ್ನು ಹೊಗಳುವಂಥದ್ದು ಏನೂ ಇಲ್ಲ ಎಂದು ಅನಿಸುತ್ತದೆ ಎಂದು ಹೇಳಿ ಪ್ರಬುದ್ಧತೆ ತೋರಿದ್ದಾರೆ.

ಅನೇಕ ಒಳ್ಳೆಯ ಜನರಿಗೆ ಇದು ಮನಸಿಗೆ ನೋವಾಗಿರಬಹುದು. ನಾವೂ ಹೀಗೇ ಇದ್ದೇವೆ ಆದ್ರೆ ಇವ್ರನ್ನು ಹೈಲೈಟ್ ಮಾಡಿದ್ದಾರೆ ಎಂದು. ಹೀಗೆ ಫೋಟೊ ತೆಗೆದು ಹಾಕಿರುವುದು ಈ ಪ್ರಚಾರದಿಂದ ಅನೇಕ ಹಿರಿಯರಿಗೆ ಸಂಘದ ಕಾರ್ಯಕರ್ತರಿಗೆ ಇದರಿಂದ ನೋವಾಗಿರಬಹುದು. ಅವರೆಲ್ಲರಲ್ಲೂ ಹೀಗೇ ಆಗಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಮತ್ತು ಇದನ್ನು ಇನ್ನು ಹೈಲೈಟ್ ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಸರಳತೆಗೆ ಅದೆಲ್ಲೋ ಅಡ್ಡಿ ಆಗಬಹುದು ಎಂಬ ಆತಂಕ ಅಷ್ಟೇ ಎಂದು ಕಾಳಜಿಯ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ?

ಇದನ್ನೂ ಓದಿ: ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !

Published On - 8:12 pm, Tue, 28 December 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ