AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar: ಹುಡುಗಾಟ ಮಾಡಬೇಡಿ ಎಂದು ಡಿಕೆ ಶಿವಕುಮಾರ್​​ಗೆ ಉಚಿತ ಸಲಹೆ ನೀಡಿದ ಸಚಿವ ಆರ್. ಅಶೋಕ್

R Ashoka: ಗೋವಾ ಚುನಾವಣೆ ವೇಳೆ ನಮ್ಮದೇ ಸರ್ಕಾರ ಮಾಡುತ್ತೇವೆ ಅಂತಾ ಹೋಗಿದ್ರು. ಖಾಸಗಿ ಫ್ಲೈಟ್ ಮಾಡಿಕೊಂಡು ಹೋಗಿದ್ದ ಕಾಂಗ್ರೆಸ್‌ನವರು ಆಮೇಲೆ ಟ್ರೇನ್‌ನಲ್ಲಿ ವಾಪಸ್ಸಾದರು. ಕಾಂಗ್ರೆಸ್ ಆರೋಪಗಳು ಸಹಜ, ಆದರೆ ನಾವು ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಅಶೋಕ್ ಮಾರ್ಮಿಕವಾಗಿ ಹೇಳಿದರು.

DK Shivakumar: ಹುಡುಗಾಟ ಮಾಡಬೇಡಿ ಎಂದು ಡಿಕೆ ಶಿವಕುಮಾರ್​​ಗೆ ಉಚಿತ ಸಲಹೆ ನೀಡಿದ ಸಚಿವ ಆರ್. ಅಶೋಕ್
ಹುಡುಗಾಟ ಆಡಬೇಡಿ ಎಂದು ಡಿಕೆ ಶಿವಕುಮಾರ್​​ಗೆ ಉಚಿತ ಸಲಹೆ ನೀಡಿದ ಸಚಿವ ಆರ್. ಅಶೋಕ್
TV9 Web
| Edited By: |

Updated on:Apr 15, 2022 | 5:11 PM

Share

ಕಾರವಾರ: ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್​ ಈಶ್ವರಪ್ಪ ರಾಜೀನಾಮೆ, ಬಂಧನ ಬೇಡಿಕೆಯನ್ನು ಮುಂದಿಟ್ಟು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದತ್ತ ಹೊರಟಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇದ್ದಕ್ಕಿಂದ್ದತೆ ಪೊಲೀಸ್​ ಬ್ಯಾರಿಕೇಡ್​ ಹಾರಿ ಪೊಲೀಸರ (Bangalore Police) ಮೇಲೆ ಬಿದ್ದಿದ್ದರು. ಇದನ್ನಿಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಪ್ರಸ್ತಾಪಿಸಿದ ಕಂದಾಯ ಸಚಿವ ಆರ್. ಅಶೋಕ್ (Revenue Minister R Ashoka) ಅವರು ‘ಹುಡುಗಾಟ ಮಾಡಬೇಡಿ, ಇನ್ನೂ ಒಂದು ವರ್ಷ ಹೋರಾಟ ಮಾಡಬೇಕು, ಪಕ್ಷದ ಅಧ್ಯಕ್ಷರಾದವರು ಸ್ವಲ್ಪ ಗೌರವದಿಂದ ನಡೆದುಕೊಳ್ಳಬೇಕು’ ಎಂದು ಡಿಕೆ ಶಿವಕುಮಾರ್​​ಗೆ (KPCC President DK Shivakumar) ಉಚಿತ ಸಲಹೆ ನೀಡಿದ್ದಾರೆ.

ನಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೆಯದನ್ನ ಮಾಡಿ ಎನ್ನುತ್ತಾರೆ ಕಾಂಗ್ರೆಸ್ಸಿಗರು: ಬೇಡ ಅಂದ್ರೂ ಕಾಂಗ್ರೆಸ್‌ನವರು ಸಮಸ್ಯೆಗಳನ್ನ ಸೃಷ್ಟಿಸ್ತಿದ್ದಾರೆ. 50 ವರ್ಷ ದೇಶವನ್ನು ಆಳುವ ಅವಕಾಶ ಕಾಂಗ್ರೆಸ್‌ಗೆ ಸಿಕ್ಕಿತ್ತು. ಯಾವುದೇ ಪಕ್ಷಕ್ಕೂ, ಯಾವ ದೇಶಕ್ಕೂ ಇಂತಹ ಅವಕಾಶ ಸಿಕ್ಕಿಲ್ಲ. ಗರೀಬಿ ಹಠಾವೋ ಘೋಷಣೆ ಮಾಡಿದ್ದರಾದರೂ ಬಡವರನ್ನೇ ತುಳಿದಿದ್ದಾರೆ. ಅವರಿಗೆ ಈಗ ಆರೋಪ ಮಾಡುವ ಯಾವುದೇ ಅಧಿಕಾರ ಇಲ್ಲ. ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ದಿನನಿತ್ಯ ಇಂತಹ ಆರೋಪಗಳು ಕೇಳಿಬರುತ್ತವೆ. ಕಾಂಗ್ರೆಸ್ ನಡೆ ಇಂತಹ ಆಪಾದನೆಗಳ ಕಡೆ ಎನ್ನುವಂತಾಗಿದೆ. ನಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೆಯದನ್ನ ಮಾಡಿ ಎಂದು ಕೇಳ್ತಾರೆ ಕಾಂಗ್ರೆಸ್ಸಿಗರು ಎಂದು ಅಶೋಕ್ ಲೇವಡಿ ಮಾಡಿದರು.

ಖಾಸಗಿ ಫ್ಲೈಟ್ ಮಾಡಿಕೊಂಡು ಹೋಗಿದ್ದ ಕಾಂಗ್ರೆಸ್‌ನವರು ಆಮೇಲೆ ಟ್ರೇನ್‌ನಲ್ಲಿ ವಾಪಸ್ಸಾದರು: ಅವರ ಕಡೆಯಿಂದ ಒಳ್ಳೆಯ ಕೆಲಸ ಆಗಲ್ಲ ಅನ್ನೋದು ಅವರ ಭಾವನೆ. ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನ ಬುಲ್ಡೋಜರ್ ಸರ್ಕಾರ ಎಂದು ಕಾಂಗ್ರೆಸ್ ಪಕ್ಷದವರು ಟೀಕಿಸಿದ್ರು. ಅಲ್ಲಿನ ಮತದಾರರು ಈಗ ಬುಲ್ಡೋಜರ್ ಸರ್ಕಾರವನ್ನೇ ಗೆಲ್ಲಿಸಿದ್ದಾರೆ. ಗೋವಾ ಚುನಾವಣೆ ವೇಳೆ ನಮ್ಮದೇ ಸರ್ಕಾರ ಮಾಡುತ್ತೇವೆ ಅಂತಾ ಹೋಗಿದ್ರು. ಖಾಸಗಿ ಫ್ಲೈಟ್ ಮಾಡಿಕೊಂಡು ಹೋಗಿದ್ದ ಕಾಂಗ್ರೆಸ್‌ನವರು ಆಮೇಲೆ ಟ್ರೇನ್‌ನಲ್ಲಿ ವಾಪಸ್ಸಾದರು. ಕಾಂಗ್ರೆಸ್ ಆರೋಪಗಳು ಸಹಜ, ಆದರೆ ನಾವು ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಅಶೋಕ್ ಮಾರ್ಮಿಕವಾಗಿ ಹೇಳಿದರು.

ಇದೂ ಓದಿ: ಸಚಿವ ಕೆಎಸ್ ಈಶ್ವರಪ್ಪ ನಿರ್ಗಮನ, ರಾಜ್ಯ ಬಿಜೆಪಿಯಲ್ಲಿ ಮುಂದಿನ ಪರ್ವ ಏನು? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದೂ ಓದಿ: ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ

Published On - 5:05 pm, Fri, 15 April 22